ಲಖನೌ ಮಾವು ಮೇಳ 
ದೇಶ

Lucknow Mango Festival: ಪ್ರದರ್ಶನಕ್ಕೆ ಇರಿಸಿದ್ದ ಮಾವುಗಳನ್ನೇ ಹೊತ್ತೊಯ್ದ ಜನ, ಆಯೋಜಕರೇ ಬೇಸ್ತು! Video

ಉತ್ತರ ಪ್ರದೇಶದ ರಾಜಧಾನಿ ಲಕ್ನೋದ ಅವಧ್ ಶಿಲ್ಪಗ್ರಾಮದಲ್ಲಿ, ಮಾವು ಮೇಳ ಆಯೋಜಿಸಲಾಗಿತ್ತು. ಮೂರು ದಿನಗಳಿಂದೆ ಆರಂಭವಾಗಿದ್ದ ಮೇಳಕ್ಕೆ ಸ್ವತಃ ಸಿಎಂ ಯೋಗಿ ಆದಿತ್ಯಾನಾಥ್ ಚಾಲನೆ ನೀಡಿದ್ದರು.

ಲಖನೌ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಉದ್ಘಾಟಿಸಿದ್ದ ಮಾವುಮೇಳದಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದ್ದ ಮಾವಿನ ಹಣ್ಣುಗಳನ್ನೇ ಜನ ಹೊತ್ತೊಯ್ದಿರುವ ಘಟನೆ ನಡೆದಿದೆ.

ಉತ್ತರ ಪ್ರದೇಶದ ರಾಜಧಾನಿ ಲಕ್ನೋದ ಅವಧ್ ಶಿಲ್ಪಗ್ರಾಮದಲ್ಲಿ, ಮಾವು ಮೇಳ ಆಯೋಜಿಸಲಾಗಿತ್ತು. ಮೂರು ದಿನಗಳಿಂದೆ ಆರಂಭವಾಗಿದ್ದ ಮೇಳಕ್ಕೆ ಸ್ವತಃ ಸಿಎಂ ಯೋಗಿ ಆದಿತ್ಯಾನಾಥ್ ಚಾಲನೆ ನೀಡಿದ್ದರು.

ಈ ವಿಶೇಷ ಮಾವುಮೇಳಕ್ಕೆ ಉತ್ತರ ಪ್ರದೇಶ ಮಾತ್ರವಲ್ಲದೇ ದೇಶದ ಮೂಲೆ ಮೂಲೆಗಳಿಂದಲೂ ಮಾವು ಬೆಳೆಗಾರರು ತಮ್ಮ ಮಾವುಗಳನ್ನು ತಂದಿದ್ದರು.

ಈ ಪೈಕಿ ಪ್ರದರ್ಶನ ಕೇಂದ್ರದಲ್ಲಿ ಸುಮಾರು 80ಕ್ಕೂ ವಿವಿಧ ತಳಿಯ ಮಾವುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಈ ಪ್ರದರ್ಶನದಲ್ಲಿ ನೂರಾರು ಟನ್ ಮಾವು ಮಾರಾಟ ಕೂಡ ಮಾಡಲಾಗಿತ್ತು.

ಆದರೆ ಮಾವು ಮೇಳದ ಅಂತಿಮ ದಿನದಂದು ಯಾರೂ ಊಹಿಸಲಾಗದ ಘಟನೆ ನಡೆದಿದ್ದು ಮೇಳದ ಅಂತಿಮ ದಿನ ಯಥೇಚ್ಛ ಜನ ಮೇಳಕ್ಕೆ ಆಗಮಿಸಿದ್ದಾರೆ.

ಈ ವೇಳೆ ನೂಕು ನುಗ್ಗಲು ಉಂಟಾಗಿದ್ದು, ಭದ್ರತಾ ಸಿಬ್ಬಂದಿ ಅವರನ್ನು ನಿರ್ವಹಿಸುವಾಗಲೇ ಪ್ರದರ್ಶನ ಕೇಂದ್ರದಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದ್ದ ಮಾವಿನ ಹಣ್ಣುಗಳನ್ನು ಜನ ಹೊತ್ತೊಯ್ದಿದ್ದಾರೆ.

ಮಾವಿನ ಹಣ್ಣುಗಳನ್ನು ತೆಗೆದುಕೊಂಡು ಹೋಗಲು ಕೈ ಸಿಕ್ಕ ಕವರ್, ಚೀಲಗಳನ್ನುಉಪಯೋಗಿಸಿಕೊಂಡು ಕೈಗೆ ಸಿಕ್ಕಷ್ಟು ಹಣ್ಣುಗಳನ್ನು ಚೀಲದೊಳಗೆ ತುಂಬಿಸಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಲಾತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಕಳೆದ 3 ದಿನಗಳಿಂದ ಯಾವುದೇ ತಡೆ ಇಲ್ಲದೇ ನಡೆದಿದ್ದ ಮಾವು ಮೇಳ ಅಂತಿಮ ದಿನದಂದು ವ್ಯಾಪಕ ಅಸ್ತವ್ಯಸ್ಥಕ್ಕೆ ಕಾರಣವಾಗಿತ್ತು. ಇದನ್ನೇ ತಮ್ಮ ಲಾಭಕ್ಕೆ ಬಳಸಿಕೊಂಡ ಕೆಲವರು ಮಾವಿನ ಹಣ್ಣುಗಳನ್ನು ತೆಗೆದುಕೊಂಡು ಹೋಗಲು ಆರಂಭಿಸಿದರು. ಬಳಿಕ ಇಲ್ಲಿದ್ದ ಇತರರೂ ಕೂಡ ಅದೇ ಮಾರ್ಗವನ್ನು ಹಿಡಿದರು. ಜನರ ಈ ನಡೆ ಮಾವುಮೇಳದ ಆಯೋಜಕರನ್ನೇ ಬೆಚ್ಚಿ ಬೀಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತ ಮತ್ತು ಚೀನಾ 'ಸ್ನೇಹಿತರಾಗಿರುವುದೇ' ಸರಿಯಾದ ಆಯ್ಕೆ: ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್

Dharmasthala Case: NIA ತನಿಖೆ ಅಗತ್ಯವಿಲ್ಲ, SITಗೆ ಸ್ವಾತಂತ್ರ್ಯ ನೀಡಲಾಗಿದೆ; ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್‌ನಲ್ಲೂ ಸಾಮಾನ್ಯಕ್ಕಿಂತ ಹೆಚ್ಚು ಮಳೆ; ಪ್ರವಾಹ, ಭೂಕುಸಿತದ ಬಗ್ಗೆ IMD ಎಚ್ಚರಿಕೆ

ಆಪರೇಷನ್ ಸಿಂಧೂರ ವೇಳೆಯ 'ಅಪವಿತ್ರ ಮೈತ್ರಿ'ಯನ್ನು ಸದ್ದಿಲ್ಲದೆ ಒಪ್ಪಿಕೊಂಡ ಮೋದಿ ಸರ್ಕಾರ! ಚೀನಾ ಆಕ್ರಮಣವನ್ನು ಕಾನೂನುಬದ್ಧಗೊಳಿಸುತ್ತಿದ್ದೆಯೇ? ಕಾಂಗ್ರೆಸ್

ಬೆಂಗಳೂರು: ಪ್ರಯಾಣಿಕನಿಗೆ ಕಪಾಳಮೋಕ್ಷ ಮಾಡಿದ BMTC ಬಸ್ ಕಂಡೆಕ್ಟರ್; ನೆಟ್ಟಿಗರು ಆಕ್ರೋಶ, Video!

SCROLL FOR NEXT