ಜ್ಯೋತಿ ಮಲ್ಹೋತ್ರಾ 
ದೇಶ

ಪಾಕ್ ಪರ ಬೇಹುಗಾರಿಕೆ: ಕೇರಳ ಪ್ರವಾಸೋದ್ಯಮ ಬಗ್ಗೆ ಪ್ರಚಾರಕ್ಕೆ ಆರೋಪಿ ಜ್ಯೋತಿ ಮಲ್ಹೋತ್ರಾ ನೇಮಕ!

ಕೇರಳ ಪ್ರವಾಸೋದ್ಯಮ ಇಲಾಖೆಯೇ ಕರೆಸಿಕೊಂಡು ಪ್ರಚಾರದ ವಿಡಿಯೋ ಮಾಡಿದ್ದು, ಇಲಾಖೆ ಪರವಾಗಿ ಜ್ಯೋತಿ ಸೇರಿದಂತೆ ಸಾಮಾಜಿಕ ಜಾಲತಾಣದ ಹಲವು ಇನ್ ಫ್ಲುಯೆನ್ಸ್ ರ್ ಗಳು ಕಳೆದರಡು ವರ್ಷಗಳಿಂದ ಕೆಲಸ ಮಾಡಿದ್ದರು.

ನವದೆಹಲಿ: ಇತ್ತೀಚೆಗೆ ಪಾಕಿಸ್ತಾನ ಪರ ಬೇಹುಗಾರಿಕೆ ಆರೋಪದ ಮೇಲೆ ಬಂಧಿತರಾಗಿರುವ ಹರಿಯಾಣದ 33 ವರ್ಷದ ಯು ಟ್ಯುಬರ್ ಜ್ಯೋತಿ ಮಲ್ಹೋತ್ರಾ ಅವರನ್ನು ಈ ಹಿಂದೆ ಕೇರಳ ಸರ್ಕಾರದ ಅಧಿಕೃತ ಆಹ್ವಾನದ ಭೇಟಿ ನೀಡಿರುವುದು ತಿಳಿದುಬಂದಿದೆ.

ಕೇರಳ ಪ್ರವಾಸೋದ್ಯಮ ಇಲಾಖೆಯೇ ಕರೆಸಿಕೊಂಡು ಪ್ರಚಾರದ ವಿಡಿಯೋ ಮಾಡಿದ್ದು, ಇಲಾಖೆ ಪರವಾಗಿ ಜ್ಯೋತಿ ಸೇರಿದಂತೆ ಸಾಮಾಜಿಕ ಜಾಲತಾಣದ ಹಲವು ಇನ್ ಫ್ಲುಯೆನ್ಸ್ ರ್ ಗಳು ಕಳೆದರಡು ವರ್ಷಗಳಿಂದ ಕೆಲಸ ಮಾಡಿದ್ದರು.

ಇಡೀ ರಾಜ್ಯದಾದ್ಯಂತ ಓಡಾಡಿ, ವಿಡಿಯೋ ಮಾಡಲು ಇಲಾಖೆಯೇ ಸಂಪೂರ್ಣ ಪ್ರಾಯೋಜಕತ್ವ ವಹಿಸಿತ್ತು. ಮಲ್ಹೋತ್ರಾ ಅವರ ಪ್ರಯಾಣ, ವಾಸ್ತವ್ಯ ಮತ್ತು ಪ್ರಯಾಣದ ವೆಚ್ಚಗಳನ್ನು ಇಲಾಖೆಯೇ ಸಂಪೂರ್ಣವಾಗಿ ಭರಿಸಿದೆ ಎಂದು RTI ಗೆ ಪ್ರತಿಕ್ರಿಯಿಸಲಾಗಿದೆ.

ಅಧಿಕೃತ ದಾಖಲೆಗಳ ಪ್ರಕಾರ, ಜ್ಯೋತಿ ಮಲ್ಹೋತ್ರಾ ಅವರು 2024 ಮತ್ತು 2025 ರ ನಡುವೆ ಕಣ್ಣೂರು, ಕೋಝಿಕ್ಕೋಡ್, ಕೊಚ್ಚಿ, ಆಲಪ್ಪುಳ ಮತ್ತು ಮುನ್ನಾರ್ ಪ್ರವಾಸ ಮಾಡಿದ್ದಾರೆ. ಜನವರಿ 2024 ಮತ್ತು ಮೇ 2025 ರ ನಡುವೆ ಹಲವಾರು ಇತರ ಡಿಜಿಟಲ್ ಕ್ರಿಯೆಟರ್ ಜೊತೆಗೆ ಜ್ಯೋತಿ ಮಲ್ಲೋತ್ರಾ ವಿವಿಧೆಡೆ ಭೇಟಿ ನೀಡಿರುವುದು ತಿಳಿದುಬಂದಿದೆ.

ಮಲ್ಹೋತ್ರಾ ಅವರು ಪಾಕಿಸ್ತಾನಕ್ಕೆ ಹಲವು ಬಾರಿ ಪ್ರಯಾಣಿಸಿದ್ದು, ಪಾಕಿಸ್ತಾನದ ಹೈಕಮಿಷನ್ ಸಿಬ್ಬಂದಿ ಸೇರಿದಂತೆ ಪಾಕ್ ಗುಪ್ತಚರ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದರು ಎಂದು ತನಿಖೆ ವೇಳೆ ಬಹಿರಂಗವಾಗಿದೆ. ಪಾಕ್ ಪರ ಬೇಹುಗಾರಿಕೆ ಆರೋಪದ ಮೇಲೆ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದಾದ್ಯಂತ ಬಂಧಿತರಾದ 12 ವ್ಯಕ್ತಿಗಳಲ್ಲಿ ಮಲ್ಹೋತ್ರಾ ಕೂಡ ಒಬ್ಬರಾಗಿದ್ದಾರೆ.

ಜ್ಯೋತಿ ಮಲ್ಹೋತ್ರಾ ಅವರ ಯೂಟ್ಯೂಬ್ ಚಾನೆಲ್, 'ಟ್ರಾವೆಲ್ ವಿತ್ ಜೋ' ನಲ್ಲಿ 487 ವೀಡಿಯೊಗಳನ್ನು ಫೋಸ್ಟ್ ಮಾಡಲಾಗಿದೆ. ಅವುಗಳಲ್ಲಿ ಹಲವು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಥೈಲ್ಯಾಂಡ್‌ ದೇಶಗಳಿಂದ ಪೋಸ್ಟ್ ಮಾಡಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಳಗಾವಿ: ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರ; 3,500 ರೂ ಬೆಂಬಲ ಬೆಲೆ ನಿಗದಿಗೆ ಒತ್ತಾಯ; ಬಿಜೆಪಿ ಬೆಂಬಲ; Video

ಅಣ್ಣನನ್ನು ಕೊಂದು ಗರ್ಭಿಣಿ ಅತ್ತಿಗೆಯ ಮೇಲೆ ಅತ್ಯಾಚಾರ: ಹೊಟ್ಟೆಗೆ ಒದ್ದು ಭ್ರೂಣ ಹೊರತೆಗೆದು ಬಾಲಕನಿಂದ ಭೀಕರ ಕೃತ್ಯ!

Chhattisgarh: ಮತ್ತೊಂದು ಭೀಕರ ರೈಲು ಅಪಘಾತ; ಗೂಡ್ಸ್ ರೈಲಿಗೆ ಪ್ಯಾಸೆಂಜರ್ ರೈಲು ಡಿಕ್ಕಿ

Bihar Poll: ಈ ಬಾರಿ 'ಎನ್ ಡಿಎ'ಗೆ ದಾಖಲೆಯ ಗೆಲುವು, ಜಂಗಲ್ ರಾಜ್ ಗೆ ಹೀನಾಯ ಸೋಲು ನಿಶ್ಚಿತ- ಪ್ರಧಾನಿ ಮೋದಿ

"Why Acting Superior?"ಕೆನಡಾದಲ್ಲಿ ಮತ್ತೊಂದು ಜನಾಂಗೀಯ ದಾಳಿ, ಭಾರತೀಯ ಯುವಕನ ಕುತ್ತಿಗೆಗೆ ಕೈ ಹಾಕಿ ಹಲ್ಲೆ, video ವೈರಲ್

SCROLL FOR NEXT