ಕೇಂದ್ರ ಸಚಿವ ಭೂಪೇಂದರ್ ಯಾದವ್ ಭೇಟಿಯಾದ ಡಿಕೆ ಶಿವಕುಮಾರ್ 
ದೇಶ

ಎತ್ತಿನಹೊಳೆ ಯೋಜನೆ: ಅರಣ್ಯ ಭೂಮಿ ಬಳಕೆಗೆ ಶೀಘ್ರ ಅನುಮೋದನೆ ನೀಡುವಂತೆ ಕೇಂದ್ರಕ್ಕೆ ಡಿ.ಕೆ ಶಿವಕುಮಾರ್ ಮನವಿ!

ಹಾಸನ ಮತ್ತು ತುಮಕೂರು ಜಿಲ್ಲೆಗಳಲ್ಲಿ 111.02 ಹೆಕ್ಟೇರ್ (173.31 ಹೆಕ್ಟೇರ್ ನಿಂದ ಪರಿಷ್ಕೃತ) ಅರಣ್ಯ ಭೂಮಿ ಬಳಕೆಗೆ ಒಪ್ಪಿಗೆ ನೀಡುವಂತೆ ರಾಜ್ಯ ಸರ್ಕಾರವು ಜೂನ್ 4 ರಂದು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ (MoEF) ಪ್ರಸ್ತಾವನೆ.

ನವದೆಹಲಿ: ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಅವರನ್ನು ಮಂಗಳವಾರ ಭೇಟಿಯಾದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ದಕ್ಷಿಣ ಕರ್ನಾಟಕದ ಬರಪೀಡಿತ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದ ಎತ್ತಿನಹೊಳೆ ಯೋಜನೆಗೆ ಅರಣ್ಯ ಭೂಮಿ ಬಳಕೆಗೆ ಶೀಘ್ರ ತಾತ್ವಿಕ ಅನುಮೋದನೆ ನೀಡುವಂತೆ ಕೋರಿ ಮನವಿ ಸಲ್ಲಿಸಿದ್ದಾರೆ.

ಹಾಸನ ಮತ್ತು ತುಮಕೂರು ಜಿಲ್ಲೆಗಳಲ್ಲಿ 111.02 ಹೆಕ್ಟೇರ್ (173.31 ಹೆಕ್ಟೇರ್ ನಿಂದ ಪರಿಷ್ಕೃತ) ಅರಣ್ಯ ಭೂಮಿ ಬಳಕೆಗೆ ಒಪ್ಪಿಗೆ ನೀಡುವಂತೆ ರಾಜ್ಯ ಸರ್ಕಾರವು ಜೂನ್ 4 ರಂದು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ (MoEF) ಪ್ರಸ್ತಾವ ಸಲ್ಲಿಸಿದೆ ಎಂದು ಜಲಸಂಪನ್ಮೂಲ ಸಚಿವರು ಆಗಿರುವ ಡಿಕೆ ಶಿವಕುಮಾರ್ ಸಭೆಯಲ್ಲಿ ತಿಳಿಸಿದರು.

ಈ ಪ್ರಸ್ತಾವನ್ನು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಸಲಹಾ ಸಮಿತಿಯು ಜೂನ್ 24 ರಂದು ಚರ್ಚಿಸಿತ್ತು. ನಂತರ ಜುಲೈ 7 ರಂದು ಅರಣ್ಯಗಳ ಮಹಾನಿರೀಕ್ಷಕರು ( Inspector General of Forests) EDS (ಅಗತ್ಯ ವಿವರ) ಕೋರಿದ್ದಾರೆ.

ಇದು ಪರಿಸರ ಅಥವಾ ಅರಣ್ಯ ಬಳಕೆಗೆ ಅಗತ್ಯವಿರುವ ಯೋಜನೆಗಳ ಮೌಲ್ಯಮಾಪನದ ಸಮಯದಲ್ಲಿ ಕೇಂದ್ರ ಸಚಿವಾಲಯವು ಬಳಸುವ ಔಪಚಾರಿಕ ಪ್ರಕ್ರಿಯೆಯಾಗಿದೆ. EDS ಸಿದ್ಧಪಡಿಸಲಾಗುತ್ತಿದ್ದು, ಅನುಮೋದನೆಗಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು. ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಗೆ ಆದಷ್ಟು ಬೇಗ ತಾತ್ವಿಕ ಅನುಮೋದನೆ ನೀಡಲು ನಿಮ್ಮ ಮಧ್ಯಸ್ಥಿಕೆ ಕೋರುವುದಾಗಿ ಡಿಕೆ ಶಿವಕುಮಾರ್ ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಎತ್ತಿನಹೊಳೆ ಯೋಜನೆ ಅನುಷ್ಟಾನದಿಂದ ಏಳು ಜಿಲ್ಲೆಗಳಲ್ಲಿ 75.59 ಲಕ್ಷ ಜನರಿಗೆ ಅನುಕೂಲವಾಗಲಿದೆ. 527 ಕೆರೆಗಳನ್ನು ಅವುಗಳ ಶೇ. 50 ರಷ್ಟು ಸಾಮರ್ಥ್ಯದಷ್ಟು ತುಂಬಿಸಲು ಮತ್ತು ಅಂತರ್ಜಲದ ಮಟ್ಟವನ್ನು ಮರುಪೂರಣಗೊಳಿಸಲು ನೆರವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಡಿಕೆ ಶಿವಕುಮಾರ್ ಅವರು ಕರ್ನಾಟಕ ಭವನದಲ್ಲಿ ರಾಜ್ಯ ಜಲಸಂಪನ್ಮೂಲ ಇಲಾಖೆಯ ಕಾನೂನು ತಂಡದೊಂದಿಗೆ ನದಿ ಯೋಜನೆಗಳ ಕಾನೂನು ಹೋರಾಟ ಕುರಿತು ಪ್ರತ್ಯೇಕವಾಗಿ ಚರ್ಚಿಸಿದರು. ಸಭೆಯಲ್ಲಿ ರಾಜ್ಯ ಕೃಷಿ ಸಚಿವ ಎನ್ ಚೆಲುವರಾಯ ಸ್ವಾಮಿ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಉಪಸ್ಥಿತರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gujarat: ಒಂದು ಕಾಲದ ಬಿಜೆಪಿ ವಿರೋಧಿಗಳಿಗೆ ಒಲಿದ ಸಚಿವ ಸ್ಥಾನ?: ನೂತನ ಸಂಪುಟದಲ್ಲಿ ಅಲ್ಪೇಶ್ ಠಾಕೂರ್, ಹಾರ್ದಿಕ್ ಪಟೇಲ್!

ಜಾಗತಿಕ ಸೇನಾ ಬಲ: ಚೀನಾವನ್ನು ಹಿಂದಿಕ್ಕಿದ ಭಾರತ! ಅಮೆರಿಕ, ರಷ್ಯಾ ನಂತರ 3ನೇ ಅತಿ ಬಲಿಷ್ಠ ಸೇನೆ!

HMT ಕಾರ್ಖಾನೆ ಪುನರುಜ್ಜೀವನಗೊಳಿಸಲು DPR ಸಿದ್ಧವಾಗುತ್ತಿದೆ: ಕುಮಾರಸ್ವಾಮಿ

RSS ಚಟುವಟಿಕೆಗಳಿಗೆ ಕಡಿವಾಣ: BJP ಆದೇಶವನ್ನೇ ಅಸ್ತ್ರವಾಗಿ ಬಳಸಿದ Congress; ಸಚಿವ ಸಂಪುಟದಲ್ಲಿ​​ ಮಹತ್ವದ ತೀರ್ಮಾನ!

ನಮ್ಮ ಆದ್ಯತೆಗಳಿಗೆ ತಕ್ಕಂತೆ ವ್ಯವಹಾರ: ಅಮೆರಿಕ ಅಧ್ಯಕ್ಷ ಟ್ರಂಪ್ ಗೆ ಭಾರತದ ತಿರುಗೇಟು!

SCROLL FOR NEXT