ರಾಹುಲ್ ಗಾಂಧಿ 
ದೇಶ

ಬಿಹಾರದ ಕಾನೂನು ಸುವ್ಯವಸ್ಥೆ: ನಿತೀಶ್ ಕುಮಾರ್ ಸೀಟು ಉಳಿಸಿಕೊಳ್ಳುವಲ್ಲಿ ಬ್ಯುಸಿಯಾಗಿದ್ದಾರೆ; ರಾಹುಲ್ ಗಾಂಧಿ ಟೀಕೆ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ, ಸರ್ಕಾರವನ್ನು ಬದಲಿಸಲು ಮಾತ್ರವಲ್ಲ, ರಾಜ್ಯವನ್ನು ಉಳಿಸಲು ಮತ ಚಲಾಯಿಸಿ ಎಂದರು.

ನವದೆಹಲಿ: ಬಿಹಾರದ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, 'ಭಾರತದ ಅಪರಾಧ ರಾಜಧಾನಿ'ಯಾಗಿ ಮಾರ್ಪಟ್ಟಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ನಿರತರಾಗಿದ್ದಾರೆ ಮತ್ತು ಬಿಜೆಪಿ ಸಚಿವರು ಕಮಿಷನ್‌ಗಳಲ್ಲಿ ತೊಡಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ದೂರಿದ್ದಾರೆ.

ಲೋಕಸಭೆಯ ವಿರೋಧ ಪಕ್ಷದ ನಾಯಕ 11 ದಿನಗಳಲ್ಲಿ 31 ಕೊಲೆಗಳು ಮತ್ತು ರಾಜ್ಯದಲ್ಲಿ 'ಕಾಂಟ್ರ್ಯಾಕ್ಟ್ ಹತ್ಯೆ' ಬಗ್ಗೆ ಸೂಚಿಸುವ ಮಾಧ್ಯಮ ವರದಿಗಳ ಸ್ಕ್ರೀನ್‌ಶಾಟ್‌ಗಳನ್ನು X ನಲ್ಲಿ ಹಂಚಿಕೊಂಡಿದ್ದು, 'ಬಿಹಾರ 'ಭಾರತದ ಅಪರಾಧ ರಾಜಧಾನಿ'ಯಾಗಿದೆ. ರಾಜ್ಯದ ಪ್ರತಿ ಗಲ್ಲಿಯಲ್ಲೂ ಭಯ, ಪ್ರತಿ ಮನೆಯಲ್ಲೂ ಅಶಾಂತಿ ನೆಲೆಸಿದೆ! 'ಗುಂಡಾ ರಾಜ್ಯವು' ನಿರುದ್ಯೋಗಿ ಯುವಕರನ್ನು ಕೊಲೆಗಾರರನ್ನಾಗಿ ಮಾಡುತ್ತಿದೆ' ಎಂದು ಹೇಳಿದ್ದಾರೆ.

'ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಮುಖ್ಯಮಂತ್ರಿ ನಿರತರಾಗಿದ್ದಾರೆ. ಆದರೆ, ಬಿಜೆಪಿ ಸಚಿವರು ಕಮಿಷನ್‌ಗಳನ್ನು ಸಂಗ್ರಹಿಸುತ್ತಿದ್ದಾರೆ. ನಾನು ಮತ್ತೊಮ್ಮೆ ಹೇಳುತ್ತಿದ್ದೇನೆ. ಈ ಬಾರಿ, ಸರ್ಕಾರವನ್ನು ಬದಲಾಯಿಸಲು ಮಾತ್ರವಲ್ಲ, ಬಿಹಾರವನ್ನು ಉಳಿಸಲು ಮತ ಹಾಕಿ' ಎಂದು ಅವರು ಹೇಳಿದರು.

ಈ ತಿಂಗಳ ಆರಂಭದಲ್ಲಿ ಉದ್ಯಮಿ ಗೋಪಾಲ್ ಖೇಮ್ಕಾ ಅವರನ್ನು ಪಾಟ್ನಾದ ಅವರ ನಿವಾಸದ ಹೊರಗೆ ಗುಂಡಿಕ್ಕಿ ಕೊಂದ ನಂತರ, ಬಿಜೆಪಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಒಟ್ಟಾಗಿ ಬಿಹಾರವನ್ನು 'ಭಾರತದ ಅಪರಾಧ ರಾಜಧಾನಿ'ಯನ್ನಾಗಿ ಮಾಡಿದ್ದಾರೆ ಎಂಬುದನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ರಾಹುಲ್ ಗಾಂಧಿ ಹೇಳಿದ್ದರು.

ಹಾಜಿಪುರದಲ್ಲಿ ಅವರ ಮಗನನ್ನು ಗುಂಡಿಕ್ಕಿ ಕೊಂದ ಏಳು ವರ್ಷಗಳ ನಂತರ, ಖೇಮ್ಕಾ ಅವರನ್ನು ಪಾಟ್ನಾದ ಅವರ ನಿವಾಸದ ಹೊರಗೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಯೊಬ್ಬರು ಗುಂಡಿಕ್ಕಿ ಕೊಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT