ಗೂಗಲ್ 
ದೇಶ

ಅಕ್ರಮ ಬೆಟ್ಟಿಂಗ್ ಆ್ಯಪ್ ಪ್ರಕರಣ: ಗೂಗಲ್, ಮೆಟಾಗೆ ED ಸಮನ್ಸ್ ಜಾರಿ

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ಅಡಿಯಲ್ಲಿ ಗೂಗಲ್, ಮೆಟಾಗೆ ಇಡಿ ಸಮನ್ಸ್ ಜಾರಿ ಮಾಡಿದ್ದು, ಜುಲೈ 21 ರಂದು ತನಿಖಾ ಸಂಸ್ಥೆಯ ಮುಂದೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸುವಂತೆ ಸೂಚಿಸಿದೆ.

ನವದೆಹಲಿ: ಅಕ್ರಮ ಬೆಟ್ಟಿಂಗ್ ಆ್ಯಪ್‌ಗಳ ಪ್ರಕರಣದ ತನಿಖೆಯ ಭಾಗವಾಗಿ, ಜಾರಿ ನಿರ್ದೇಶನಾಲಯ ಶನಿವಾರ ಟೆಕ್ ದೈತ್ಯ ಕಂಪನಿಗಳಾದ ಮೆಟಾ ಮತ್ತು ಗೂಗಲ್ ಗೆ ಸಮನ್ಸ್ ಜಾರಿ ಮಾಡಿದ್ದು, ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ಅಡಿಯಲ್ಲಿ ಗೂಗಲ್, ಮೆಟಾಗೆ ಇಡಿ ಸಮನ್ಸ್ ಜಾರಿ ಮಾಡಿದ್ದು, ಜುಲೈ 21 ರಂದು ತನಿಖಾ ಸಂಸ್ಥೆಯ ಮುಂದೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸುವಂತೆ ಸೂಚಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಈ ಬೆಳವಣಿಗೆ ಬಗ್ಗೆ ಎರಡೂ ಕಂಪನಿಗಳು ಇನ್ನೂ ಯಾವುದೇ ಸಾರ್ವಜನಿಕ ಹೇಳಿಕೆ ಅಥವಾ ಇಡಿಗೆ ತಮ್ಮ ಪ್ರತಿಕ್ರಿಯೆಯ ನೀಡಿಲ್ಲ.

ಅಕ್ರಮ ಬೆಟ್ಟಿಂಗ್ ಮತ್ತು ಜೂಜಾಟ ಲಿಂಕ್‌ಗಳನ್ನು ಹೊಂದಿರುವ ಹಲವು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ವಿರುದ್ಧ ಇಡಿ ತನಿಖೆ ನಡೆಸುತ್ತಿದೆ.

ಏಜೆನ್ಸಿ ಮೂಲಗಳ ಪ್ರಕಾರ, ಗೂಗಲ್ ಹಾಗೂ ಮೆಟಾ ಸಂಸ್ಥೆಗಳು ಬೆಟ್ಟಿಂಗ್ ಆ್ಯಪ್ ಗಳನ್ನು ಜಾಹೀರಾತುಗಳ ಮೂಲಕ ಪ್ರಚಾರ ಮಾಡುತ್ತಾ, ಅವು ಬಳಕೆದಾರರನ್ನು ತಲುಪುವಂತೆ ನೆರವು ನೀಡುತ್ತಿವೆ ಎಂದು ಆರೋಪಿಸಲಾಗಿದೆ.

ಗಮನಾರ್ಹವಾಗಿ, ಈ ಪ್ರಕರಣಗಳಲ್ಲಿ ಕ್ರೀಡಾ ಮತ್ತು ಸಿನಿಮಾ ಕ್ಷೇತ್ರದ ಕೆಲವು ಸೆಲೆಬ್ರಿಟಿಗಳು ಸಹ ಇಡಿಯ ಪರಿಶೀಲನೆಯಲ್ಲಿದ್ದಾರೆ. ಪ್ರಕರಣ ಸಂಬಂಧ ಈಗಾಗಲೇ ನಟರಾದ ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ ಹಾಗೂ ಪ್ರಕಾಶ್ ರೈ ಸೇರಿದಂತೆ 29 ಸೆಲೆಬ್ರಿಟಿಗಳ ವಿರುದ್ಧ ಇಡಿ ಕೇಸ್ ದಾಖಲಿಸಿದೆ ಮತ್ತು ಇನ್ನೂ ಕೆಲವರಿಗೆ ಶೀಘ್ರದಲ್ಲೇ ಸಮನ್ಸ್ ಜಾರಿ ಮಾಡುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನಮ್ಮ ನೌಕೆಗಳನ್ನು ಅತ್ಯುತ್ತಮ ಶಸ್ತ್ರಾಸ್ತ್ರಗಳಿಂದ ತುಂಬುತ್ತಿದ್ದೇವೆ; ಇರಾನ್ ಬಗ್ಗದೇ ಹೋದಲ್ಲಿ ಸರ್ವನಾಶ- ಮಾತುಕತೆಗೂ ಮುನ್ನ ಟ್ರಂಪ್ ಬೆದರಿಕೆ!

ಲೆಬನಾನ್‌ನಲ್ಲಿ ನಾಗರಿಕರ ಸಾವಿನ ಘಟನೆಗಳ ಬಗ್ಗೆ ಭಾರತ ಕಳವಳ; ಇಸ್ರೇಲ್ ಗೆ ತೀವ್ರ ಹಿನ್ನಡೆ!

Hormuz ಮೇಲೆ ಹಾರುತ್ತಿದ್ದ 200 ಮಿಲಿಯನ್ ಡಾಲರ್ ಮೌಲ್ಯದ ಅಮೆರಿಕ ಡ್ರೋನ್ ದಿಢೀರ್ ನಾಪತ್ತೆ; ಯುದ್ಧಕ್ಕೆ ಪ್ರತಿ ದಿನದ US ಖರ್ಚು 3,040 ಕೋಟಿ ರೂ!

ಇರಾನ್ ಜೊತೆಗೆ ನಾಳೆ ಮಹತ್ವದ ಮಾತುಕತೆ: ಇಸ್ಲಾಮಾಬಾದ್‌ಗೆ ತೆರಳುವ ಮುನ್ನಾ ಜೆಡಿ ವ್ಯಾನ್ಸ್ ನೀಡಿದ ವಾರ್ನಿಂಗ್ ಏನು!

ಅಪರಿಚಿತ ದೆವ್ವಕ್ಕಿಂತ ಪರಿಚಿತ ದೆವ್ವವೇ ವಾಸಿ! ಇರಾನ್ ಹೊಸ ಆಡಳಿತ ಹಳೆಯದ್ದಕ್ಕಿಂತ ಕ್ರೂರ: 40 ದಿನಗಳ ಬಳಿಕ ಇಸ್ರೇಲ್ ಹೀಗೆ ಹೇಳಿದ್ದೇಕೆ?

SCROLL FOR NEXT