ಸುಪ್ರೀಂಕೋರ್ಟ್  
ದೇಶ

ಒಡಿಶಾದಲ್ಲಿ ಅಪ್ರಾಪ್ತ ಬಾಲಕಿಗೆ ಬೆಂಕಿ ಹಚ್ಚಿದ ಪ್ರಕರಣ: ಅವಮಾನ, ದುರದೃಷ್ಟಕರ; ಸುಪ್ರೀಂ ಕೋರ್ಟ್ ಕಿಡಿ!

ನಮ್ಮ ನಿರ್ದೇಶನಗಳು ಪ್ರಭಾವ ಬೀರಬೇಕು ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜಾಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ನ್ಯಾಯಪೀಠ ಹೇಳಿತು.

ನವದೆಹಲಿ: ಒಡಿಶಾದಲ್ಲಿ 15 ವರ್ಷದ ಬಾಲಕಿಯ ಮೇಲಿನ ದಾಳಿಯನ್ನು "ಅವಮಾನ" ಮತ್ತು "ದುರದೃಷ್ಟಕರ" ಘಟನೆ ಎಂದಿರುವ ಸುಪ್ರೀಂಕೋರ್ಟ್, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರಿಗೆ ಸಬಲೀಕರಣ ಮತ್ತು ಸುರಕ್ಷಿತ ಆಶ್ರಯವನ್ನು ಒದಗಿಸುವ ಅಗತ್ಯವನ್ನು ಒತ್ತಿಹೇಳಿದೆ.

ದುರ್ಬಲ ಮತ್ತು ದನಿ ಇಲ್ಲದ ಗ್ರಾಮೀಣ ಪ್ರದೇಶದಲ್ಲಿನ ಬಾಲಕಿಯರು, ಗೃಹಿಣಿಯರು, ಶಾಲಾ ಬಾಲಕಿಯರ ಸಬಲೀಕರಣಕ್ಕಾಗಿ ಯಾವ ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತು ನಮಗೆ ಪ್ರತಿಯೊಬ್ಬರಿಂದ ಸಲಹೆಗಳು ಬೇಕಾಗುತ್ತವೆ. ನಮ್ಮ ನಿರ್ದೇಶನಗಳು ಪ್ರಭಾವ ಬೀರಬೇಕು ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜಾಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ನ್ಯಾಯಪೀಠ ಹೇಳಿತು.

ಕೆಲವು ಅಲ್ಪಾವಧಿಯ ಮತ್ತು ದೀರ್ಘಾವಧಿಯ ನಿರ್ದೇಶನಗಳನ್ನು ತಕ್ಷಣ ಮತ್ತು ಭವಿಷ್ಯಕ್ಕಾಗಿ ನೀಡಬೇಕಾಗಿದೆ. ಇದರಿಂದ ತಾಲೂಕು ಮಟ್ಟದಲ್ಲಿ ವಾಸಿಸುವ ಮಹಿಳೆಯರಿಗೆ ಅರಿವು ಮೂಡಿಸಬೇಕಾಗಿದೆ. ಅರೆ ಕಾನೂನು ಸ್ವಯಂಸೇವಕರು, ವಿಶೇಷವಾಗಿ ಮಹಿಳೆಯರಿಗೆ ತರಬೇತಿ ನೀಡಿ ತಾಲೂಕು ಮಟ್ಟದಲ್ಲಿ ನೇಮಕ ಮಾಡಿಕೊಳ್ಳಬೇಕು, ಮಹಿಳೆಯರು ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ಅಂಗನವಾಡಿ ಕಾರ್ಯಕರ್ತೆಯರ ಸಹಾಯವನ್ನೂ ತೆಗೆದುಕೊಳ್ಳಬಹುದು ಎಂದು ಪೀಠ ಹೇಳಿತು.

ಅರ್ಜಿದಾರರಾದ ಸುಪ್ರೀಂ ಕೋರ್ಟ್ ಮಹಿಳಾ ವಕೀಲರ ಸಂಘದ ಪರ ವಾದ ಮಂಡಿಸಿದ ಹಿರಿಯ ವಕೀಲ ಮಹಾಲಕ್ಷ್ಮಿ ಪಾವನಿ, ಎರಡು ದಿನಗಳ ಹಿಂದೆ ಅಪ್ರಾಪ್ತ ಬಾಲಕಿಯನ್ನು ಸುಟ್ಟು ಹಾಕಲಾಗಿದ್ದು, ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಇದೇ ರೀತಿಯ ಘಟನೆಗಳು ನಡೆದಿವೆ. ಇದು ಎಷ್ಟು ದಿನ ಮುಂದುವರಿಯುತ್ತದೆ? ನ್ಯಾಯಾಲಯವು ಮಹಿಳೆಯರ ಸುರಕ್ಷತೆಗಾಗಿ ಕೆಲವು ನಿರ್ದೇಶನಗಳನ್ನು ನೀಡಬೇಕಾಗಿದೆ ಎಂದು ಮನವಿ ಮಾಡಿಕೊಂಡರು.

ನಮಗೆ ನಾಚಿಕೆಯಾಗುತ್ತಿದೆ ಮತ್ತು ಈ ಘಟನೆಗಳು ಇನ್ನೂ ನಡೆಯುತ್ತಿರುವುದು ದುರದೃಷ್ಟಕರವಾಗಿದೆ. ಇದು ವಿರೋಧಿ ದಾವೆಯಲ್ಲ, ನಮಗೆ ಕೇಂದ್ರ ಮತ್ತು ಎಲ್ಲಾ ಪಕ್ಷಗಳಿಂದ ಸಲಹೆಗಳು ಬೇಕಾಗುತ್ತದೆ ಎಂದು ಎಂದು ಹೇಳಿದ ನ್ಯಾಯ ಪೀಠ, ಮುಂದಿನ ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿತು.

ಕೇಂದ್ರದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ, ಲೈಂಗಿಕ ಅಪರಾಧಿಗಳನ್ನು ಗುರುತಿಸಲು ಮತ್ತು ಸಮಯೋಚಿತ ಕ್ರಮಗಳಿಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು ಮತ್ತು ಫೇಸ್ ಸ್ಕ್ಯಾನ್ ವ್ಯವಸ್ಥೆಯನ್ನು ಅಳವಡಿಸಲಾಗುವುದು ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಮದರ್ ಆಫ್ ಆಲ್ ಡೀಲ್': ಅಂತಿಮ ಹಂತ ತಲುಪಿದ ಭಾರತ-ಯುರೋಪಿಯನ್ ಒಕ್ಕೂಟದ FTA ಮಾತುಕತೆ!

ರಾಜ್ಯಗಳ ಮೇಲೆ ಕೇಂದ್ರದ ನಿಯಂತ್ರಣ; ಶೀಘ್ರದಲ್ಲೇ ದಕ್ಷಿಣ ಭಾರತದ ಸಿಎಂಗಳ ಸಮ್ಮೇಳನ: ಸಿದ್ದರಾಮಯ್ಯ

ರಾಯಚೂರು: ಸಿಂಧನೂರು ಬಳಿ ಭೀಕರ ಸರಣಿ ಅಪಘಾತ; ಸ್ಥಳದಲ್ಲೇ ಐವರು ಸಾವು

ಭಟ್ಕಳ: ಮಹಿಳೆಯರಿಗೆ ಅಶ್ಲೀಲ ಸಂದೇಶ, ಬ್ಲಾಕ್‌ಮೇಲ್; 18 ನಕಲಿ ಇಮೇಲ್ ಐಡಿ ಹೊಂದಿದ್ದ ಯುವಕನ ಬಂಧನ!

ಭೋಪಾಲ್‌: ಲಿಫ್ಟ್ ಶಾಫ್ಟ್‌ಗೆ ಬಿದ್ದು ವ್ಯಕ್ತಿಯ ಸಾವು; 10 ದಿನಗಳ ನಂತರ ಮೃತದೇಹ ಪತ್ತೆ

SCROLL FOR NEXT