ಅಖಿಲೇಶ್ ಯಾದವ್ 
ದೇಶ

ಪಹಲ್ಗಾಮ್ ಗುಪ್ತಚರ ವೈಫಲ್ಯಕ್ಕೆ ಹೊಣೆ ಯಾರು?: ಅಖಿಲೇಶ್ ಯಾದವ್

ಪಾಕಿಸ್ತಾನದೊಂದಿಗಿನ ಸಂಘರ್ಷವನ್ನು ಭಾರತ ಹಠಾತ್ತನೆ ಕೊನೆಗೊಳಿಸಿದ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು ಮತ್ತು "ಯಾರ ಒತ್ತಡದಲ್ಲಿ ಕದನ ವಿರಾಮ ಘೋಷಿಸಲಾಯಿತು?" ಎಂದು ಪ್ರಶ್ನಿಸಿದರು.

ನವದೆಹಲಿ: ಪಹಲ್ಗಾಮ್ ಉಗ್ರ ದಾಳಿಯ ನಂತರ ಆಪರೇಷನ್ ಸಿಂದೂರ್ ನಡೆಸಿರುವುದು "ಸರ್ಕಾರದ ಗುಪ್ತಚರ ವೈಫಲ್ಯದ ಸಂಕೇತ" ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮಂಗಳವಾರ ಹೇಳಿದ್ದಾರೆ.

ಇಂದು ಲೋಕಸಭೆಯಲ್ಲಿ ಆಪರೇಷನ್ ಸಿಂದೂರ್ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅಖಿಲೇಶ್ ಯಾದವ್ ಅವರು, ಪಾಕಿಸ್ತಾನದೊಂದಿಗಿನ ಸಂಘರ್ಷವನ್ನು ಭಾರತ ಹಠಾತ್ತನೆ ಕೊನೆಗೊಳಿಸಿದ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು ಮತ್ತು "ಯಾರ ಒತ್ತಡದಲ್ಲಿ ಕದನ ವಿರಾಮ ಘೋಷಿಸಲಾಯಿತು?" ಎಂದು ಕೇಳಿದರು.

ಭಾರತದ ವಿದೇಶಾಂಗ ನೀತಿ "ಸಂಪೂರ್ಣವಾಗಿ ಕುಸಿದಿದೆ" ಎಂದು ಆರೋಪಿಸಿದ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ, ಚೀನಾ "ನಮ್ಮ ಭೂಮಿ ಮತ್ತು ಮಾರುಕಟ್ಟೆಯನ್ನು ಕಬಳಿಸುವ" "ದೈತ್ಯ" ಎಂದರು.

"ಪಹಲ್ಗಾಮ್ ದಾಳಿಯಲ್ಲಿ ಗುಪ್ತಚರ ವೈಫಲ್ಯಕ್ಕೆ ಯಾರು ಜವಾಬ್ದಾರಿ ತೆಗೆದುಕೊಳ್ಳುತ್ತಾರೆ?" ಎಂದು ಅಖಿಲೇಶ್ ಯಾದವ್ ಪ್ರಶ್ನಿಸಿದರು.

"ಪಹಲ್ಗಾಮ್ ದಾಳಿಯ ನಂತರ ಆಪರೇಷನ್ ಸಿಂದೂರ್ ಆರಂಭಿಸಿರುವುದು ಸರ್ಕಾರದ ಗುಪ್ತಚರ ವೈಫಲ್ಯದ ಸಂಕೇತವಾಗಿದೆ" ಎಂದು ವಾಗ್ದಾಳಿ ನಡೆಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯದುವೀರ್ ಒಡೆಯರ್ ರಿಂದ ಬನ್ನಿ ಮರಕ್ಕೆ ಶಮಿ ಪೂಜೆ: ಅರಮನೆ ದಸರಾ ಮುಕ್ತಾಯ

ಭಾರತದಲ್ಲಿ ಪ್ರತಿ ಗಂಟೆಗೆ ಒಬ್ಬ ರೈತ ಆತ್ಮಹತ್ಯೆ: NCRB ವರದಿ

1st Test: ಇತಿಹಾಸ ಬರೆದ Jasprit Bumrah, ಕನ್ನಡಿಗ Javagal Srinath ಹಳೇ ದಾಖಲೆ ಕೊನೆಗೂ ಪತನ!

1st Test: Siraj, Bumrah ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ West Indies, ಮೊದಲ ಇನ್ನಿಂಗ್ಸ್ 162 ರನ್ ಗೆ ಆಲೌಟ್!

ಸ್ವದೇಶಿ-ಸ್ವಾವಲಂಬನೆಗೆ ಪರ್ಯಾಯವಿಲ್ಲ: RSS ಮುಖ್ಯಸ್ಥ ಮೋಹನ್ ಭಾಗವತ್

SCROLL FOR NEXT