ಹೊಗೇನಕಲ್‌ ಜಲಾಶಯ 
ದೇಶ

ಕಬಿನಿ, KRS ಜಲಾಶಯಗಳಿಂದ ಹೆಚ್ಚಿನ ಒಳ ಹರಿವು: ತುಂಬಿ ತುಳುಕುತ್ತಿರುವ ತಮಿಳುನಾಡು ಜಲಾಶಯಗಳು!

ಕರ್ನಾಟಕದಿಂದ ಭಾರೀ ಪ್ರಮಾಣದ ನೀರಿನ ಒಳಹರಿವಿನಿಂದಾಗಿ, ರಾಜ್ಯದ ಅತಿ ದೊಡ್ಡದಾದ ಮೆಟ್ಟೂರು ಅಣೆಕಟ್ಟು ಜುಲೈ 25 ರಂದು ನಾಲ್ಕನೇ ಬಾರಿಗೆ 120 ಅಡಿ ತನ್ನ ಪೂರ್ಣ ಸಾಮರ್ಥ್ಯವನ್ನು ತಲುಪಿತು.

ಕೊಯಮತ್ತೂರು: ಕರ್ನಾಟಕದ ಕಬಿನಿ ಮತ್ತು ಕೆಎಸ್‌ಆರ್‌ ಜಲಾಶಯಗಳಿಂದ ಭಾರಿ ಪ್ರಮಾಣದ ನೀರು ಹರಿದುಬರುತ್ತಿರುವುದರಿಂದ ತಮಿಳುನಾಡಿನ ಪ್ರಮುಖ ಅಣೆಕಟ್ಟುಗಳು ತುಂಬಿ ತುಳುಕುತ್ತಿದ್ದು, ರೈತರಲ್ಲಿ ಸಂತಸ ಮೂಡಿಸಿದೆ. ಸೋಮವಾರ ಹೊಗೇನಕಲ್‌ನಲ್ಲಿ ನೀರಿನ ಮಟ್ಟ 1.25 ಲಕ್ಷ ಕ್ಯೂಸೆಕ್‌ಗೆ ತಲುಪಿದ್ದು, ಮುಂದಿನ ದಿನಗಳಲ್ಲಿ ಒಳಹರಿವು ಹೆಚ್ಚಾಗುವ ನಿರೀಕ್ಷೆಯಿದೆ.

ಕರ್ನಾಟಕದಿಂದ ಭಾರೀ ಪ್ರಮಾಣದ ನೀರಿನ ಒಳಹರಿವಿನಿಂದಾಗಿ, ರಾಜ್ಯದ ಅತಿ ದೊಡ್ಡದಾದ ಮೆಟ್ಟೂರು ಅಣೆಕಟ್ಟು ಜುಲೈ 25 ರಂದು ನಾಲ್ಕನೇ ಬಾರಿಗೆ 120 ಅಡಿ ತನ್ನ ಪೂರ್ಣ ಸಾಮರ್ಥ್ಯವನ್ನು ತಲುಪಿತು. ಸದ್ಯ ಒಂದು ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.

ಮೆಟ್ಟೂರು ಜಲಾಶಯದಿಂದ ಕಾವೇರಿಗೆ ಬಿಡಲಾಗಿದ್ದ ಹೆಚ್ಚುವರಿ ನೀರು ಸೋಮವಾರ ಮುಕ್ಕೊಂಬು ಬ್ಯಾರೇಜ್‌ಗೆ ತಲುಪಿತು. ಮುನ್ನೆಚ್ಚರಿಕೆ ಕ್ರಮವಾಗಿ ಸೋಮವಾರ ತಿರುಚ್ಚಿಗೆ ಆಗಮಿಸಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) ರಕ್ಷಣಾ ತಂಡ ಕಾವೇರಿ ದಡದಲ್ಲಿ ವಾಸಿಸುವ ಜನರಿಗೆ ಪ್ರವಾಹದ ಎಚ್ಚರಿಕೆ ನೀಡಿದೆ.

ಸೋಮವಾರ ಮಧ್ಯಾಹ್ನದಿಂದ ಮುಕ್ಕೊಂಬು ಬ್ಯಾರೇಜ್‌ಗೆ ಒಂದು ಲಕ್ಷ ಕ್ಯೂಸೆಕ್ ನೀರು ಬರುತ್ತಿದೆ. ಅಧಿಕಾರಿಗಳು ಕಾವೇರಿಗೆ 23,000 ಕ್ಯೂಸೆಕ್, ಕೊಲ್ಲಿಡಂಗೆ 73,000 ಕ್ಯೂಸೆಕ್ ಮತ್ತು ಉತ್ತರ ನಾಲೆಗಳಿಗೆ 1,000 ಕ್ಯೂಸೆಕ್ ನೀರು ಬಿಡುಗಡೆ ಮಾಡಿದರು. ರಾತ್ರಿ ವೇಳೆಗೆ ಒಳಹರಿವು 1.15 ಲಕ್ಷ ಕ್ಯೂಸೆಕ್‌ಗೆ ಏರಿಕೆಯಾಗಿರುವ ನಿರೀಕ್ಷೆಯಿದೆ.

ಕಾವೇರಿಗೆ 22,000 ಕ್ಯೂಸೆಕ್‌, ಕೊಳ್ಳಿಡಾಂಗೆ 6,000 ಕ್ಯೂಸೆಕ್‌ ನೀರು ಹರಿದು ಬರುತ್ತಿದ್ದು, ಒಟ್ಟು ಒಳಹರಿವು 29,000 ಕ್ಯುಸೆಕ್‌ ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಮುಖ ಜಲಾಶಯಗಳು ಭರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡು ರಾಜ್ಯದ ರೈತರು ಈ ಹಂಗಾಮಿನಲ್ಲಿ ನೀರಾವರಿಗೆ ಸಮರ್ಪಕ ನೀರು ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!