ನವದೆಹಲಿ: ಮಾಲೆಗಾಂವ್ ಸ್ಫೋಟ ಪ್ರಕರಣದ ಎಲ್ಲಾ ಏಳು ಆರೋಪಿಗಳನ್ನು ಖುಲಾಸೆಗೊಳಿಸಿರುವುದಕ್ಕೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಗುರುವಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.2008ರಲ್ಲಿ ನಡೆದಿದ್ದ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಮಾಜಿ ಬಿಜೆಪಿ ಸಂಸದೆ ಪ್ರಯಾಗ್ ಸಿಂಗ್ ಠಾಕೂರ್, ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಸೇರಿದಂತೆ ಎಲ್ಲಾ ಏಳು ಮಂದಿಯನ್ನು ಎನ್ ಐಎ ನ್ಯಾಯಾಲಯ ಗುರುವಾರ ಖುಲಾಸೆಗೊಳಿಸಿತು.
ಸೆಪ್ಟೆಂಬರ್ 29, 2008ರಂದು ಪವಿತ್ರ ರಂಜಾನ್ ಮಾಸದಲ್ಲಿ ಮಹಾರಾಷ್ಟ್ರದ ಮಾಲೆಗಾಂವ್ ನ ಮಸೀದಿಯೊಂದರ ಬಳಿ ಮೋಟಾರ್ ಸೈಕಲ್‌ನಲ್ಲಿ ಇಟ್ಟಿದ ಸ್ಫೋಟಕ ಸ್ಫೋಟಗೊಂಡ ಪರಿಣಾಮ ಆರು ಜನರು ಸಾವನ್ನಪ್ಪಿದ್ದರು. 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ನ್ಯಾಯಾಲಯದ ತೀರ್ಪಿನ ಬಳಿಕ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಒವೈಸಿ, ಮಾಲೆಗಾಂವ್ ಸ್ಫೋಟ ಪ್ರಕರಣದ ತೀರ್ಪು ನಿರಾಸೆ ಮೂಡಿಸಿದೆ. ಸ್ಫೋಟದಲ್ಲಿ ನಮಾಜ್ ಮಾಡ್ತಿದ್ದ ಆರು ಮಂದಿ ಸಾವನ್ನಪ್ಪಿದ್ದರು. ಸುಮಾರು 100 ಮಂದಿ ಗಾಯಗೊಂಡಿದ್ದರು. ಧರ್ಮವನ್ನು ಟಾರ್ಗೆಟ್ ಮಾಡಿ ಸ್ಫೋಟ ನಡೆಸಲಾಗಿತ್ತು. ಉದ್ದೇಶಪೂರ್ವಕವಾದ ಕಳಪೆ ತನಿಖೆ,ಪ್ರಾಸಿಕ್ಯೂಷನ್ ಖುಲಾಸೆಗೆ ಕಾರಣ ಎಂದಿದ್ದಾರೆ.
2006, 2008ರ ಮಾಲೆಗಾಂವ್ ಸ್ಫೋಟ ಪ್ರಕರಣ, ಮುಂಬೈ ರೈಲು ಸ್ಫೋಟ, ಸಂಜೋತಾ ಎಕ್ಸ್ ಪ್ರೆಸ್ ಸ್ಫೋಟ ಸೇರಿದಂತೆ ಹಲವು ಪ್ರಕರಣಗಳ ತನಿಖೆಯನ್ನು ಒವೈಸಿ ಪ್ರಶ್ನಿಸಿದ್ದು, ಈ ಘಟನೆಗಳಿಗೆ ಹೊಣೆ ಯಾರು ಕೇಳಿದ್ದಾರೆ.
ಸ್ಫೋಟ ನಡೆದ 17 ವರ್ಷಗಳ ನಂತರ ಸಾಕ್ಷಿಗಳ ಕೊರತೆಯಿಂದ ಎಲ್ಲಾ ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಮುಂಬೈ ರೈಲು ಸ್ಫೋಟದ ಖುಲಾಸೆಗೆ ತಡೆ ನೀಡಲು ಒತ್ತಾಯಿಸಿದ ರೀತಿಯಲ್ಲಿ ಮೋದಿ ಮತ್ತು ಫಡ್ನವಿಸ್ ಸರ್ಕಾರ ಈ ತೀರ್ಪಿಗೆ ಮೇಲ್ಮನವಿ ಸಲ್ಲಿಸುತ್ತವೆಯೇ? ಮಹಾರಾಷ್ಟ್ರದ "ಜಾತ್ಯತೀತ" ರಾಜಕೀಯ ಪಕ್ಷಗಳು ಉತ್ತರದಾಯಿತ್ವವನ್ನು ಬಯಸುತ್ತವೆಯೇ? 6 ಜನರನ್ನು ಕೊಂದವರು ಯಾರು?" ಎಂದು ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.
2016 ರಲ್ಲಿ ಪ್ರಕರಣದ ಅಂದಿನ ಪ್ರಾಸಿಕ್ಯೂಟರ್ ರೋಹಿಣಿ ಸಾಲಿಯಾನ್ ಅವರಿಗೆ ಆರೋಪಿಗಳ ಬಗ್ಗೆ "ಮೃದುವಾಗಿರುವಂತೆ NIA ಕೇಳಿಕೊಂಡಿತ್ತು ಎಂಬುದನ್ನು ನೆನಪಿಸಿಕೊಂಡಿರುವ ಒವೈಸಿ, "ನೆನಪಿಡಿ, 2017 ರಲ್ಲಿ NIA ಸಾಧ್ವಿ ಪ್ರಜ್ಞಾ ಅವರನ್ನು ದೋಷಮುಕ್ತಗೊಳಿಸಲು ಪ್ರಯತ್ನಿಸಿತ್ತು. ಅದೇ ವ್ಯಕ್ತಿ 2019 ರಲ್ಲಿ ಬಿಜೆಪಿ ಸಂಸದರಾಗುತ್ತಾರೆ. ಹೇಮಂತ್ ಕರ್ಕರೆ ಮಾಲೆಗಾಂವ್ ಸ್ಫೋಟದ ಪಿತೂರಿಯನ್ನು ಬಹಿರಂಗಪಡಿಸಿದ್ದಾರೆ. ದುರದೃಷ್ಟವಶಾತ್ 26/11 ದಾಳಿಯಲ್ಲಿ ಪಾಕಿಸ್ತಾನಿ ಭಯೋತ್ಪಾದಕರಿಂದ ಕೊಲ್ಲಲ್ಪಟ್ಟರು. ಬಿಜೆಪಿ ಸಂಸದರು ಕರ್ಕರೆಗೆ ಶಾಪ ಹಾಕಿದ್ದರು. ಅದರಿಂದಲೇ ಅವರು ಸಾವನ್ನಪ್ಪಿದ್ದರು ಎಂದು ಹೇಳಿದ್ದಾರೆ."
ತಮ್ಮ ತಪ್ಪು ತನಿಖೆಗೆ ಎನ್‌ಐಎ/ಎಟಿಎಸ್ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆಯೇ? ಎಂದು ಪ್ರಶ್ನಿಸಿರುವ ಒವೈಸಿ, ನಮಗೆ ಉತ್ತರ ಗೊತತಿದೆ. ಇದು 'ಭಯೋತ್ಪಾದನೆ ವಿರುದ್ಧ ಕಠಿಣ' ಮೋದಿ ಸರ್ಕಾರವಾಗಿದೆ. ಭಯೋತ್ಪಾದಕ ಆರೋಪಿಯನ್ನು ಸಂಸತ್ ಸದಸ್ಯನನ್ನಾಗಿ ಮಾಡಿದ್ದನ್ನು ಜಗತ್ತು ನೆನಪಿಸಿಕೊಳ್ಳುತ್ತದೆ" ಎಂದು ಟೀಕಿಸಿದ್ದಾರೆ.