ನೋಯ್ಡಾದಲ್ಲಿ ರಸ್ತೆ ಕಾಳಗ 
ದೇಶ

Video: ವೈಯುಕ್ತಿಕ ದ್ವೇಷಕ್ಕೆ ತಿರುಗಿದ Instagram ಕಮೆಂಟ್ ಕಾಳಗ; SUV ಕಾರಿನಿಂದ ಗುದ್ದಿದ ದುಷ್ಕರ್ಮಿ; ಗಾಳಿಯಲ್ಲಿ ಹಾರಿ ಮೋರಿಗೆ ಬಿದ್ದ ಸಂತ್ರಸ್ಥ

ಉತ್ತರ ಪ್ರದೇಶದ ನೋಯ್ಡಾದ ಸೆಕ್ಟರ್ 24 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಯುವಕನೊಬ್ಬನನ್ನು ಹತ್ತಾರು ಮಂದಿ ಥಳಿಸಿದ್ದು ಬಳಿಕ SUV ಕಾರು ಚಾಲಕ ಆತನಿಗೆ ಗುದ್ದಿ ಆತನ ಹತ್ಯೆಗೆ ಪ್ರಯತ್ನಿಸಿರುವ ಭೀಕರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ನೋಯ್ಡಾ: ಸಾಮಾಜಿಕ ಜಾಲತಾಣ Instagram ನಲ್ಲಿ ಶುರುವಾದ ಕಮೆಂಟ್ ಕಾಳಗ ವೈಯುಕ್ತಿಕ ದ್ವೇಷಕ್ಕೆ ತಿರುಗಿದ ಪರಿಣಾಮ ವ್ಯಕ್ತಿಯೋರ್ವನನ್ನು ಕಾರಿನಲ್ಲಿ ಗುದ್ದಿ ಹತ್ಯೆ ಮಾಡಲು ಪ್ರಯತ್ನಿಸಿರುವ ಭೀಕರ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.

ಉತ್ತರ ಪ್ರದೇಶದ ನೋಯ್ಡಾದ ಸೆಕ್ಟರ್ 24 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಯುವಕನೊಬ್ಬನನ್ನು ಹತ್ತಾರು ಮಂದಿ ಥಳಿಸಿದ್ದು ಬಳಿಕ SUV ಕಾರು ಚಾಲಕ ಆತನಿಗೆ ಗುದ್ದಿ ಆತನ ಹತ್ಯೆಗೆ ಪ್ರಯತ್ನಿಸಿರುವ ಭೀಕರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ವಿಡಿಯೋದಲ್ಲಿರುವಂತೆ ಇಬ್ಬರು ವ್ಯಕ್ತಿಗಳ ನಡುವೆ ನಡು ರಸ್ತೆಯಲ್ಲಿ ಜಗಳವಾಗಿದ್ದು ಈ ವೇಳೆ ವ್ಯಕ್ತಿಯೋರ್ವ ತನ್ನ ಸ್ನೇಹಿತರೊಂದಿಗೆ ಸೇರಿ ಯುವಕನನ್ನು ಮನಸೋ ಇಚ್ಛೆ ಥಳಿಸಿದ್ದಾನೆ. ಯುವಕನ ಶರ್ಟ್ ಹರಿದು ಆತನ ಮುಖದಿಂದ ರಕ್ತ ಬರುವಂತೆ ಥಳಿಸಿದ್ದು, ಬಳಿಕ ಯುವಕ ರಸ್ತೆಯಲ್ಲಿ ನಡೆದು ಬರುತ್ತಿದ್ದಾಗ ಆತನ ಮೇಲೆ ಕಾರಿನಿಂದ ದಾಳಿ ನಡೆಸಿದ್ದಾರೆ.

ಯುವಕ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದಾಗ ಆತನಿಗೆ ಹಿಂಬದಿಯಿಂದ ರಭಸವಾಗಿ ಗುದ್ದಲಾಗಿದೆ. ಪರಿಣಾಮ ಸಂತ್ರಸ್ಥ ಯುವಕ ಗಾಳಿಯಲ್ಲಿ ನೇರವಾಗಿ ಹೋಗಿ ಮೋರಿಯಲ್ಲಿ ಬಿದ್ದಿದ್ದಾನೆ. ಇವಿಷ್ಟೂ ವಿಡಿಯೋ ರಸ್ತೆ ಬದಿಯಲ್ಲಿ ನಿಂತಿದ್ದ ಮತ್ತೋರ್ವ ಯುವಕ ತನ್ನ ಮೊಬೈಲ್ ನಲ್ಲಿ ಸೆರೆಹಿಡಿದ್ದಾನೆ.

Instagram ನಲ್ಲಿ ಶುರುವಾದ ಕಮೆಂಟ್ ಕಾಳಗ

ಪೊಲೀಸ್ ಮೂಲಗಳ ಪ್ರಕಾರ ಸಾಮಾಜಿಕ ಜಾಲತಾಣ Instagram ನಲ್ಲಿ ಶುರುವಾದ ಕಮೆಂಟ್ ಕಾಳಗ ವೈಯುಕ್ತಿಕ ದ್ವೇಷಕ್ಕೆ ತಿರುಗಿದೆ. ಇಬ್ಬರೂ ಪರಸ್ಪರ ರಸ್ತೆಯಲ್ಲೇ ಜಗಳ ಮಾಡಿದ್ದಾರೆ. ಮೊದಲು ವಾಕ್ಸಮರ ನಡೆದಿತ್ತು. ಬಳಿಕ ನೋಡ ನೋಡುತ್ತಲೇ ಹಿಂಸಾಚಾರಕ್ಕೆ ತಿರುಗಿದೆ. ಈ ವೇಳೆ ಹತ್ತಾರು ಮಂದಿ ಸೇರಿ ಯುವಕನನ್ನು ಥಳಿಸಿದ್ದಾರೆ. ಬಳಿಕ ಅದೇ ಯುವಕನ ಮೇಲೆ ಕಾರಿನಿಂದ ಗುದ್ದಲಾಗಿದೆ.

ಡಿಕ್ಕಿ ಎಷ್ಟು ಬಲವಾಗಿತ್ತೆಂದರೆ, ಯುವಕ ಹಾರಿ ಥಾರ್‌ ಕಾರಿನ ಬಾನೆಟ್ ಮೇಲೆ ಗಾಳಿಯಲ್ಲಿ ಹಾರುತ್ತಾನೆ. ಅದೃಷ್ಟವಶಾತ್, ಅವನು ರಸ್ತೆಯ ಅಂಚಿನಲ್ಲಿದ್ದನು. ಅವನು ಹಾರಿ ರಸ್ತೆಯ ಬದಿಯಲ್ಲಿ ನಿರ್ಮಿಸಲಾದ ಚರಂಡಿಗೆ ಬಿದ್ದನು. ಒಂದು ವೇಳೆ ಇದು ಸಂಭವಿಸದಿದ್ದರೆ, ಆ ವ್ಯಕ್ತಿ ಥಾರ್‌ನ ಚಕ್ರಗಳ ಅಡಿಯಲ್ಲಿ ಸಿಲುಕಿ ಸಾವನ್ನಪ್ಪುತ್ತಿದ್ದನು. ಅಂತಹ ಸಂದರ್ಭದಲ್ಲಿ, ಅವನು ಗಂಭೀರವಾಗಿ ಗಾಯಗೊಂಡಿದ್ದನು ಅಥವಾ ಅವನು ತನ್ನ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದನು ಎನ್ನಲಾಗಿದೆ.

ಪೊಲೀಸರಿಂದ ತನಿಖೆ

ಇನ್ನು ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಸ್ಥಳದಲ್ಲಿದ್ದ ಸಿಸಿಟಿವಿ ವಿಡಿಯೋಗಳನ್ನು ಪರಿಶೀಲಿಸುತ್ತಿದ್ದು, ತನಿಖೆ ನಡೆಸುತ್ತಿದ್ದಾರೆ. ಎಸ್ ಯುವಿ ಚಾಲಕನ ವಿರುದ್ಧ ಸೆಕ್ಟರ್ 24 ಪೊಲೀಸರು ಅತಿವೇಗದ ಚಾಲನೆ, ನೋವುಂಟುಮಾಡುವುದು ಮತ್ತು ಕ್ರಿಮಿನಲ್ ಬೆದರಿಕೆಗೆ ಸಂಬಂಧಿಸಿದ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. "ಆರೋಪಿಗಳ ಬಂಧನಕ್ಕಾಗಿ ಪೊಲೀಸ್ ತಂಡವನ್ನು ರಚಿಸಲಾಗಿದೆ, ಸೆಕ್ಟರ್ -24 ಪೊಲೀಸ್ ಠಾಣೆಯಿಂದ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ" ಎಂದು ಎಡಿಸಿಪಿ ಶುಕ್ಲಾ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

ಧರ್ಮಸ್ಥಳ ಪ್ರಕರಣ NIA ತನಿಖೆ ಮಾಡಿದರೆ ಆಕ್ಷೇಪವಿಲ್ಲ: ಸಚಿವ ಸತೀಶ್ ಜಾರಕಿಹೊಳಿ

ಭಾರತ- ಫಿಜಿ ರಕ್ಷಣಾ ಸಹಕಾರ ಕ್ರಿಯಾ ಯೋಜನೆ ಸಿದ್ಧ: ಇಂಡೋ ಪೆಸಿಫಿಕ್‌ ವಲಯದಲ್ಲಿ ಚೀನಾದ ಪ್ರಾಬಲ್ಯ ತಡೆಗೆ ಮಾಸ್ಟರ್ ಪ್ಲಾನ್!

US tariff deadline: ಅಮೆರಿಕದ ಶೇ. 50 ರಷ್ಟು ಸುಂಕ ಆಗಸ್ಟ್ 27 ರಿಂದ ಜಾರಿ; ಮಂಗಳವಾರ ಮಹತ್ವದ PMO ಸಭೆ; ಮೋದಿ ಹೇಳಿದ್ದೇನು? Video

SCROLL FOR NEXT