ಕೊತಗುಡೆಂ: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯ ರಾಷ್ಟ್ರೀಯ ಉದ್ಯಾನ ಪ್ರದೇಶದಲ್ಲಿ ಶನಿವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಇಬ್ಬರು ನಕ್ಸಲೀಯರನ್ನು ಹೊಡೆದುರುಳಿಸಿದ್ದಾರೆ.
ಶುಕ್ರವಾರ ರಾತ್ರಿಯಿಂದ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ನಕ್ಸಲೀಯರನ್ನು ಹತ್ಯೆ ಮಾಡಲಾಗಿದೆ. ಇದರೊಂದಿಗೆ ಕಳೆದ ಮೂರು ದಿನಗಳಲ್ಲಿ ನಾಲ್ವರು ನಕ್ಸಲೀಯರನ್ನು ಹೊಡೆದುರುಳಿಸಲಾಗಿದೆ.
ರಾಷ್ಟ್ರೀಯ ಉದ್ಯಾನದಲ್ಲಿ ಹಿರಿಯ ನಕ್ಸಲ್ ನಾಯಕರೊಬ್ಬರು ಅಡಗಿರುವ ಮಾಹಿತಿ ಪಡೆದುಕೊಂಡ ಬಳಿಕ ಜಿಲ್ಲಾ ಮೀಸಲು ಪಡೆ (DRG)ಕೋಬ್ರಾ (ಕಮಾಂಡೋ ಬೆಟಾಲಿಯನ್ )ಮತ್ತು ವಿಶೇಷ ಕಾರ್ಯಪಡೆ (STF)ಒಳಗೊಂಡ ಜಂಟಿ ತಂಡ ಗುರುವಾರದಿಂದ ಶೋಧ ಕಾರ್ಯಾಚರಣೆ ನಡೆಸುತಿತ್ತು.
ಕಳೆದೆರಡು ದಿನಗಳಲ್ಲಿ ಭದ್ರತಾ ಪಡೆಗಳು ತೆಲಂಗಾಣ ರಾಜ್ಯ ಸಮಿತಿ ಸದಸ್ಯ ಮೈಲಾರಪು ಅಡೆಲು ಅಲಿಯಾಸ್ ಭಾಸ್ಕರ್ ಮತ್ತು ಸಿಪಿಐ (ಮಾವೋವಾದಿ) ಕೇಂದ್ರ ಸಮಿತಿ ಸದಸ್ಯ ಮತ್ತು ಕ್ರಾಂತಿಕಾರಿ ರಾಜಕೀಯ ಶಾಲೆ (RePoS) ಉಸ್ತುವಾರಿ ತೆಂಟು ಲಕ್ಷ್ಮೀನರಸಿಂಹ ಚಲಂ ಅಲಿಯಾಸ್ ಗೌತಮ್ ಮತ್ತು ಎಂಬ ಇಬ್ಬರು ಪ್ರಮುಖ ನಕ್ಸಲ್ ನಾಯಕರನ್ನು ಹೊಡೆದುರುಳಿಸಿದ್ದಾರೆ.