ಏರ್ ಇಂಡಿಯಾ ವಿಮಾನ ಪತನ 
ದೇಶ

ವಿಮಾನ ಸಂಖ್ಯೆ 'AI 171' ಕೈಬಿಡಲು ಏರ್ ಇಂಡಿಯಾ ನಿರ್ಧಾರ

ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಪತನಗೊಂಡ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನವು ಅಹಮದಾಬಾದ್‌ನಿಂದ ಲಂಡನ್ ಗ್ಯಾಟ್ವಿಕ್‌ ಮಾರ್ಗದಲ್ಲಿ 'AI 171' ವಿಮಾನವನ್ನು ನಿರ್ವಹಿಸುತ್ತಿತ್ತು.

ಮುಂಬೈ: ಗುಜರಾತ್ ನ ಅಹಮದಾಬಾದ್‍ನಲ್ಲಿ ಗುರುವಾರ ಬೋಯಿಂಗ್ ಡ್ರೀಮ್‍ಲೈನರ್ 787-8 ವಿಮಾನ ಪತನವಾಗಿ 241 ಜನ ಸಾವನ್ನಪ್ಪಿದ ನಂತರ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಸಂಖ್ಯೆ '171' ಅನ್ನು ಕೈಬಿಡಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಪತನಗೊಂಡ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನವು ಅಹಮದಾಬಾದ್‌ನಿಂದ ಲಂಡನ್ ಗ್ಯಾಟ್ವಿಕ್‌ ಮಾರ್ಗದಲ್ಲಿ 'AI 171' ವಿಮಾನವನ್ನು ನಿರ್ವಹಿಸುತ್ತಿತ್ತು.

ಮಾರಕ ವಿಮಾನ ಅಪಘಾತಗಳ ನಂತರ ವಿಮಾನಯಾನ ಸಂಸ್ಥೆಗಳು ನಿರ್ದಿಷ್ಟ ವಿಮಾನ ಸಂಖ್ಯೆಯನ್ನು ಬಳಸುವುದನ್ನು ನಿಲ್ಲಿಸುವುದು ಸಾಮಾನ್ಯ ಎಂದು ಶನಿವಾರ ಮೂಲಗಳು ತಿಳಿಸಿವೆ.

ಜೂನ್ 17 ರಿಂದ, ಅಹಮದಾಬಾದ್-ಲಂಡನ್ ಗ್ಯಾಟ್ವಿಕ್‌ನ ವಿಮಾನ ಸಂಖ್ಯೆ 'AI 171' ಬದಲಿಗೆ 'AI 159' ಆಗಿರುತ್ತದೆ. ಬುಕಿಂಗ್ ವ್ಯವಸ್ಥೆಯಲ್ಲಿ ಅಗತ್ಯ ಬದಲಾವಣೆಗಳನ್ನು ಶುಕ್ರವಾರ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಏರ್ ಇಂಡಿಯಾ ಎಕ್ಸ್‌ಪ್ರೆಸ್ ತನ್ನ ವಿಮಾನ ಸಂಖ್ಯೆ 'IX 171' ಅನ್ನು ತೆಗೆದುಹಾಕಲು ನಿರ್ಧರಿಸಿದೆ ಎಂದು ಮತ್ತೊಂದು ಮೂಲ ತಿಳಿಸಿದೆ.

'171' ವಿಮಾನ ಸಂಖ್ಯೆಯನ್ನು ಸ್ಥಗಿತಗೊಳಿಸುವುದು ಅಗಲಿದ ಆತ್ಮಗಳಿಗೆ ಗೌರವದ ಸಂಕೇತವಾಗಿದೆ ಎಂದು ಅವರು ಹೇಳಿದ್ದಾರೆ.

ಅಪಘಾತದ ನೋವಿನ ನೆನಪುಗಳನ್ನು ಅಳಿಸುವುದು ಇದರ ಹಿಂದಿನ ಉದ್ದೇಶವಾಗಿದೆ. ಈ ವಿಷಯದ ಬಗ್ಗೆ ಅಧಿಕಾರಿಗಳು ಈ ಮಾಹಿತಿಯನ್ನು ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

207 ಮೀಟರ್ ಎತ್ತರಕ್ಕೆ ಉಕ್ಕಿದ ಯಮುನೆ; ದೆಹಲಿಯ ತಗ್ಗು ಪ್ರದೇಶ, ಮಾರುಕಟ್ಟೆಗಳು ಜಲಾವೃತ

7 ವರ್ಷದ ಹಿಂದೆ ವ್ಯಕ್ತಿ ನಾಪತ್ತೆ: ಹೊಸ ಪತ್ನಿ ಜೊತೆಗಿನ Video ನೋಡಿ ಹಳೇ ಪತ್ನಿ ಶಾಕ್; Instagram Reels ನಿಂದ ಸಿಕ್ಕಿಬಿದ್ದ ರೋಚಕ ಕಥೆ!

VIKRAM-32: ಭಾರತದ ಹೊಸ ಬಾಹ್ಯಾಕಾಶ ದರ್ಜೆಯ ಮೈಕ್ರೋಪ್ರೊಸೆಸರ್; Microchip ಮಹತ್ವ, ವಿಶೇಷತೆ ಏನು? ಇಲ್ಲಿದೆ ಮಾಹಿತಿ!

Indian Stock Market: GST ಕೌನ್ಸಿಲ್ ಸಭೆ ಎಫೆಕ್ಟ್; Sensex 410 ಅಂಕ ಏರಿಕೆ, ರೂಪಾಯಿ ಮೌಲ್ಯವೂ ಹೆಚ್ಚಳ!

ಪಾಕ್ ಹುಟ್ಟಡಗಿಸಿದ್ದ 'Game-Changer': ಭಾರತದ ಬತ್ತಳಿಕೆ ಸೇರಲಿವೆ ಮತ್ತಷ್ಟು S-400 ಏರ್ ಡಿಫೆನ್ಸ್ ಸಿಸ್ಟಮ್ಸ್!

SCROLL FOR NEXT