ಸಾಂದರ್ಭಿಕ ಚಿತ್ರ  
ದೇಶ

ಒಡಿಶಾ: ಬೀಚ್‌ ಬಳಿ ಸ್ನೇಹಿತನ ಸಮ್ಮುಖದಲ್ಲೇ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ, 8 ಮಂದಿ ಬಂಧನ

ಗೋಪಾಲ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಪಂಥನಿವಾಸ್‌ನ ಹಿಂದಿನ ನಿರ್ಜನ ಪ್ರದೇಶದಲ್ಲಿ ಯುವಕರು ಅಪರಾಧ ಎಸಗಿದ್ದಾರೆ.

ಬೆರ್ಹಾಂಪುರ/ಭುವನೇಶ್ವರ: ಆಘಾತಕಾರಿ ಘಟನೆಯೊಂದರಲ್ಲಿ, 20 ವರ್ಷದ ಕಾಲೇಜು ವಿದ್ಯಾರ್ಥಿನಿ ಮೇಲೆ ಒಡಿಶಾ ರಾಜ್ಯದ ಭುವನೇಶ್ವರದ ಗೋಪಾಲ್‌ಪುರ ಬೀಚ್‌ನಲ್ಲಿ ಯುವಕರು ವಿದ್ಯಾರ್ಥಿನಿಯ ಸ್ನೇಹಿತನ ಮುಂದೆಯೇ ಸಾಮೂಹಿಕ ಅತ್ಯಾಚಾರ ಎಸಗಿರುವ ಪೈಶಾಚಿಕ ಕೃತ್ಯ ನಡೆದಿದೆ.

ಗೋಪಾಲ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಪಂಥನಿವಾಸ್‌ನ ಹಿಂದಿನ ನಿರ್ಜನ ಪ್ರದೇಶದಲ್ಲಿ ಯುವಕರು ಅಪರಾಧ ಎಸಗಿದ್ದಾರೆ. ಗಂಜಾಂ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಬಾಲಕಿಯ ಮೇಲೆ ಸರದಿಯಂತೆ ಎರಡು ಗಂಟೆಗಳಿಗೂ ಹೆಚ್ಚು ಸಮಯ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂದರ್ಭದಲ್ಲಿ ಧೈರ್ಯ ತೋರಿಸಿದ ಅತ್ಯಾಚಾರ ಸಂತ್ರಸ್ತೆ ರಾತ್ರಿ 11 ಗಂಟೆಗೆ ದೂರು ನೀಡಲು ಗೋಪಾಲಪುರ ಪೊಲೀಸ್ ಠಾಣೆಗೆ ಹೋದರು. ಪೊಲೀಸರು ತ್ವರಿತವಾಗಿ ಕ್ರಮ ಕೈಗೊಂಡು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಎಂಟು ಆರೋಪಿಗಳನ್ನು ಬಂಧಿಸಿದರು, ಎಲ್ಲಾ ಶಂಕಿತ ಆರೋಪಿಗಳು 19 ರಿಂದ 23 ವರ್ಷ ವಯಸ್ಸಿನವರಾಗಿದ್ದು, ಹಿಂಜಿಲಿಗೆ ಸೇರಿದವರಾಗಿದ್ದಾರೆ.

ಸಂತ್ರಸ್ತೆ ತನ್ನ ಸಹಪಾಠಿಯೊಂದಿಗೆ ಸಂಜೆ 6.30 ರ ಸುಮಾರಿಗೆ ಬೀಚ್ ನಲ್ಲಿ ಕುಳಿತು ಮಾತನಾಡುತ್ತಿದ್ದಾಗ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಆರೋಪಿಗಳು ಕುಕೃತ್ಯ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಸಂತ್ರಸ್ತೆ ಮತ್ತು ಆಕೆಯ ಸ್ನೇಹಿತ ದೂರದಲ್ಲಿ ಕುಳಿತಿದ್ದ ಯುವಕರನ್ನು ಗಮನಿಸಿದರು. ಕತ್ತಲಾದ ನಂತರ, ಯುವಕರು ಹುಡುಗಿಯ ಸ್ನೇಹಿತನ ಮೇಲೆ ದಾಳಿ ಮಾಡಿ ಆತನನ್ನು ಬಂಧಿಸಿ ನಂತರ ಅವರಲ್ಲಿ ಮೂವರು ಹುಡುಗಿಯನ್ನು ಎಳೆದೊಯ್ದು ಅತ್ಯಾಚಾರವೆಸಗಲು ಆರಂಭಿಸಿದರು.

ಸಂತ್ರಸ್ತೆ ಎಷ್ಟೇ ಕೂಗಿಕೊಂಡರೂ, ಬೇಡಿಕೊಂಡರೂ ಬಿಡಲಿಲ್ಲ. ಅಪರಾಧ ಎಸಗಿ ಸ್ಥಳದಿಂದ ಪರಾರಿಯಾದರು, ನಂತರ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿ, ಏಳು ಮಂದಿ ಶಂಕಿತರನ್ನು ಬಂಧಿಸಿದರು. ನಂತರ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಯಿತು. ಹೆಚ್ಚಿನ ಆರೋಪಿಗಳು ಶಾಲೆ ಮತ್ತು ಕಾಲೇಜು ಬಿಟ್ಟವರು ಎಂದು ಪೊಲೀಸರು ತಿಳಿಸಿದ್ದಾರೆ.

ಉಳಿದ ಇಬ್ಬರು ಆರೋಪಿಗಳನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಬೆರ್ಹಾಂಪುರ್ ಎಸ್ಪಿ ಸರವಣ ವಿವೇಕ್ ಎಂ ಹೇಳಿದ್ದಾರೆ. ಸಂತ್ರಸ್ತೆ ಮತ್ತು ಬಂಧಿತ ಎಂಟು ಯುವಕರನ್ನು ವೈದ್ಯಕೀಯ ಪರೀಕ್ಷೆಗಾಗಿ ಬೆರ್ಹಾಂಪುರ್‌ನ ಎಂಕೆಸಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

ಬೆಂಗಳೂರಿಗೂ ಎಂಟ್ರಿ ಕೊಟ್ಟಿತೇ ಮಹಾಮಾರಿ ಎಬೋಲಾ? ಆಫ್ರಿಕಾದಿಂದ ಬಂದ ಮಹಿಳೆಯಲ್ಲಿ ಸೋಂಕಿನ ಲಕ್ಷಣ ಪತ್ತೆ, ಆರೋಗ್ಯ ಇಲಾಖೆ ಹೈ ಅಲರ್ಟ್

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

SCROLL FOR NEXT