ಇಂಡಿಗೋ ವಿಮಾನ ಸಾಂದರ್ಭಿಕ ಚಿತ್ರ 
ದೇಶ

ತಾಂತ್ರಿಕ ದೋಷ: ಲೇಹ್‌ಗೆ ತೆರಳುತ್ತಿದ್ದ ಇಂಡಿಗೋ ವಿಮಾನ ದೆಹಲಿಗೆ ವಾಪಸ್

ದೆಹಲಿಯಿಂದ ಲೇಹ್‌ಗೆ ಹಾರಾಟ ನಡೆಸುತ್ತಿದ್ದ 6E2006 ವಿಮಾನ ಎರಡು ಗಂಟೆಗಳಿಗೂ ಹೆಚ್ಚು ಕಾಲ ಹಾರಾಟ ನಡೆಸಿದ ನಂತರ ರಾಷ್ಟ್ರ ರಾಜಧಾನಿಗೆ ಮರಳಿದೆ.

ನವದೆಹಲಿ: ದೆಹಲಿಯಿಂದ ಗುರುವಾರ ಬೆಳಗ್ಗೆ ಲೇಹ್‌ಗೆ ತೆರಳುತ್ತಿದ್ದ ಇಂಡಿಗೋ ವಿಮಾನವು ಎರಡು ಗಂಟೆಗಳಿಗೂ ಹೆಚ್ಚು ಕಾಲ ಹಾರಾಟ ನಡೆಸಿ ನಂತರ ತಾಂತ್ರಿಕ ಸಮಸ್ಯೆಯಿಂದಾಗಿ ರಾಷ್ಟ್ರ ರಾಜಧಾನಿಗೆ ವಾಪಸ್ ಆಗಿದೆ.

ವಿಮಾನ ಟ್ರ್ಯಾಕಿಂಗ್ ವೆಬ್‌ಸೈಟ್ Flightradar24.com ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ದೆಹಲಿಯಿಂದ ಲೇಹ್‌ಗೆ ಹಾರಾಟ ನಡೆಸುತ್ತಿದ್ದ 6E2006 ವಿಮಾನ ಎರಡು ಗಂಟೆಗಳಿಗೂ ಹೆಚ್ಚು ಕಾಲ ಹಾರಾಟ ನಡೆಸಿದ ನಂತರ ರಾಷ್ಟ್ರ ರಾಜಧಾನಿಗೆ ಮರಳಿದೆ.

"ಜೂನ್ 19, 2025 ರಂದು ದೆಹಲಿಯಿಂದ ಲೇಹ್‌ಗೆ ಹಾರಾಟ ನಡೆಸುತ್ತಿದ್ದ ಇಂಡಿಗೋ ವಿಮಾನ 6E 2006, ತಾಂತ್ರಿಕ ಸಮಸ್ಯೆಯಿಂದಾಗಿ ಲೇಹ್‌ನಲ್ಲಿ ಲ್ಯಾಂಡಿಂಗ್ ಮಾಡಲು ಸಾಧ್ಯವಾಗದ ಕಾರಣ ಮೂಲ ಸ್ಥಾನಕ್ಕೆ ಮರಳಿತು. ಕಾರ್ಯವಿಧಾನಗಳ ಪ್ರಕಾರ, ಪೈಲಟ್ ದೆಹಲಿಗೆ ಮರಳಿದರು" ಎಂದು ವಿಮಾನಯಾನ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಮಾನವು ಕಾರ್ಯಾಚರಣೆ ಪುನರಾರಂಭಿಸುವ ಮೊದಲು ಅಗತ್ಯ ಪರಿಶೀಲನೆಗೆ ಒಳಗಾಗುತ್ತಿದೆ ಎಂದು ವಕ್ತಾರರು ಹೇಳಿದ್ದಾರೆ.

ಈ ಮಧ್ಯೆ, ಪ್ರಯಾಣಿಕರು ಲೇಹ್‌ಗೆ ತೆರಳಲು ಪರ್ಯಾಯ ವಿಮಾನ ವ್ಯವಸ್ಥೆ ಮಾಡಲಾಗಿದೆ ಮತ್ತು ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸುವುದಾಗಿ ಎಂದು ವಕ್ತಾರರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬೆಂಗಳೂರಿನ ಐದು ಹೊಸ ಪಾಲಿಕೆಗಳಿಗೆ 368 ವಾರ್ಡ್ ರಚನೆ: ಪಶ್ಚಿಮ ಪಾಲಿಕೆಗೆ ಗರಿಷ್ಠ 111 ವಾರ್ಡ್

ಬಿಹಾರ SIR ನಂತರ ಚುನಾವಣಾ ಆಯೋಗದಿಂದ ಅಂತಿಮ ಮತದಾರರ ಪಟ್ಟಿ ಬಿಡುಗಡೆ

ಟ್ರೋಫಿ 'ಕಳ್ಳ' ಮೊಹ್ಸಿನ್ ನಖ್ವಿಗೆ ಸಂಕಷ್ಟ? ಏಷ್ಯಾ ಕಪ್ ಟ್ರೋಫಿ ಮರಳಿ ಪಡೆಯಲು ಅಖಾಡಕ್ಕೀಳಿದ BCCI; ಷರತ್ತು ಹಾಕಿದ ನಖ್ವಿ!

ರಾಜ್ಯ ಸರ್ಕಾರದಿಂದ "ಮಹಿಷಾಸುರ ಟ್ಯಾಕ್ಸ್" : ಬೆಂಗಳೂರು-ಮೈಸೂರು ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಬಿಜೆಪಿ ಕಿಡಿ!

Karur stampede: ದುರಂತದ ಬಳಿಕ ಕರೂರಿಗೆ ಭೇಟಿ ನೀಡಲಿಲ್ಲ ಏಕೆಂದರೆ...; ಡಿಎಂಕೆ ವಿರುದ್ಧ ನಟ ವಿಜಯ್ ವಾಗ್ದಾಳಿ

SCROLL FOR NEXT