ಪಾಟ್ನಾ: ಜನ್ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಅವರು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರ ಬಿಹಾರ ಭೇಟಿಯನ್ನು ಟೀಕಿಸಿದ್ದು, ಅವರು ರಾಜ್ಯದ ಅಭಿವೃದ್ಧಿಗಾಗಿ ಇಲ್ಲಿ ಬಂದಿಲ್ಲ. ಕೇವಲ ಮತಕ್ಕಾಗಿ ಬರುತ್ತಿದ್ದಾರೆ ಎಂದು ಹೇಳಿದ್ದಾರೆ.
ANI ಜೊತೆ ಮಾತನಾಡಿದ ಪ್ರಶಾಂತ್ ಕಿಶೋರ್, "ಪ್ರಧಾನಿ ಮೊದಲ ಬಾರಿಗೆ ರಾಜ್ಯಕ್ಕೆ ಬರುತ್ತಿಲ್ಲ... ಪ್ರಧಾನಿ ಮೋದಿ ಬಿಹಾರದ ಕಲ್ಯಾಣಕ್ಕಾಗಿ ಅಥವಾಗಿ ಅಭಿವೃದ್ಧಿಗಾಗಿ ಬರುತ್ತಿಲ್ಲ. ಬದಲಾಗಿ ಬಿಜೆಪಿ ಮತ್ತು ಎನ್‌ಡಿಎ ಮೈತ್ರಿಕೂಟಕ್ಕೆ ಮತ ಸೆಳೆಯಲು ಬರುತ್ತಿದ್ದಾರೆ" ಎಂದರು.
ರಾಜ್ಯದಲ್ಲಿ ಹೊಸ ಅಭಿವೃದ್ಧಿ ಯೋಜನೆಗಳ ಕುರಿತು ಪ್ರಧಾನಿಯವರ ಹೇಳಿಕೆಯನ್ನು ಪ್ರಶ್ನಿಸಿದ ಕಿಶೋರ್, ಕೆಲವು ಯೋಜನೆಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ ಎಂದು ತಿರುಗೇಟು ನೀಡಿದರು.
"ಲೋಕೋಮೋಟಿವ್ ಕಾರ್ಖಾನೆ ಈಗಾಗಲೇ ಮರ್ಹೌರಾದಲ್ಲಿದೆ; ಅದು ಹೊಸದೇನಲ್ಲ" ಎಂದು ಪ್ರಶಾಂತ್ ಕಿಶೋರ್ ಅರು, ಸರ್ಕಾರದ ಭಾಷಣಗಳಲ್ಲಿ ಹೆಚ್ಚಾಗಿ ಹೈಲೈಟ್ ಮಾಡಲಾದ ಉತ್ಪಾದನಾ ಘಟಕವನ್ನು ಉಲ್ಲೇಖಿಸಿದರು.
ಬಿಹಾರದ ಜನ ಎದುರಿಸುತ್ತಿರುವ ನಿರ್ಣಾಯಕ ಸಮಸ್ಯೆಗಳನ್ನು ಪ್ರಧಾನಿ ಮೋದಿ ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದ ಅವರು, "ಮುಚ್ಚಲಾಗಿರುವ ಸಕ್ಕರೆ ಕಾರ್ಖಾನೆಯ ಬಗ್ಗೆ ಪ್ರಧಾನಿ ಮಾತನಾಡಬೇಕು. ಪದೇ ಪದೇ ನೀಡಿದ್ದ ಭರವಸೆಗಳನ್ನು ಈಡೇರಿಸದೇ ಇರುವುದರಿಂದ ಬಿಹಾರದ ನಿವಾಸಿಗಳು ವರ್ಷಗಳಿಂದ ಭ್ರಮನಿರಸನಗೊಂಡಿದ್ದಾರೆ ಎಂದರು.
"ಕಳೆದ 10-12 ವರ್ಷಗಳಿಂದ ಹಲವು ಘೋಷಣೆಗಳನ್ನು ಮಾಡಲಾಗುತ್ತಿದೆ. ಆದರೆ ಯಾವುದೇ ಜಾರಿಗೆ ಬಂದಿಲ್ಲ ಎಂದು ವಾಗ್ದಾಳಿ ನಡೆಸಿದರು.