ಸಾಂದರ್ಭಿಕ ಚಿತ್ರ 
ದೇಶ

IAS ಅಧಿಕಾರಿಯಂತೆ ನಟನೆ: 'ಭಾರತ ಸರ್ಕಾರ' ಪ್ಲೇಟ್ ಕಾರಿನಲ್ಲಿ ಪ್ರಯಾಣ; ವ್ಯಕ್ತಿ ಬಂಧನ

'ಭಾರತ ಸರ್ಕಾರ' ಎಂಬ ಹೆಸರಿನ ನಾಮಫಲಕ ಹೊಂದಿರುವ ಕಾರಿನಲ್ಲಿ ಆತ ಓಡಾಡುತ್ತಿದ್ದ ಎಂದು ಅಧಿಕಾರಿ ಹೇಳಿದರು. ರಸ್ತೆ ನಿಯಮ ಉಲ್ಲಂಘನೆಗಾಗಿ ದಾದರ್‌ನಲ್ಲಿ ಸಂಚಾರಿ ಕಾನ್‌ಸ್ಟೆಬಲ್ ಒಬ್ಬರು ಆ ವ್ಯಕ್ತಿಯನ್ನು ತಡೆದಿದ್ದರು.

ಮುಂಬೈ: ಐಎಎಸ್ ಅಧಿಕಾರಿ ಎಂದು ಹೇಳಿಕೊಂಡು ಮುಂಬೈನ ಕಸ್ಟಮ್ಸ್ ಅತಿಥಿ ಗೃಹದಲ್ಲಿ ಉಳಿದುಕೊಂಡು 'ಭಾರತ ಸರ್ಕಾರ' ಎಂಬ ಹೆಸರಿನ ನಾಮಫಲಕವಿರುವ ಕಾರಿನಲ್ಲಿ ಪ್ರಯಾಣಿಸುತ್ತಿದ್ದ 32 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಿಹಾರ ಮೂಲದ ಚಂದ್ರಮೋಹನ್ ಸಿಂಗ್ ಬಂಧಿತ ಆರೋಪಿ. ಗೃಹ ಸಚಿವಾಲಯದ ಉದ್ಯೋಗಿ ಎಂದು ಹೇಳಿಕೊಂಡು ಕಸ್ಟಮ್ಸ್ ಸೌಲಭ್ಯದಲ್ಲಿ ಉಳಿದುಕೊಂಡಿದ್ದ. 'ಭಾರತ ಸರ್ಕಾರ' ಎಂಬ ಹೆಸರಿನ ನಾಮಫಲಕ ಹೊಂದಿರುವ ಕಾರಿನಲ್ಲಿ ಆತ ಓಡಾಡುತ್ತಿದ್ದ ಎಂದು ಅಧಿಕಾರಿ ಹೇಳಿದರು. ರಸ್ತೆ ನಿಯಮ ಉಲ್ಲಂಘನೆಗಾಗಿ ದಾದರ್‌ನಲ್ಲಿ ಸಂಚಾರಿ ಕಾನ್‌ಸ್ಟೆಬಲ್ ಒಬ್ಬರು ಆ ವ್ಯಕ್ತಿಯನ್ನು ತಡೆದಿದ್ದರು, ಆದರೆ ತಾನು ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿ ಎಂದು ಹೇಳಿಕೊಂಡು ಆತ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸುಳಿವಿನ ಮೇರೆಗೆ ಪೊಲೀಸರು ಶನಿವಾರ ಮಲಾಡ್ ಪ್ರದೇಶದ ಹೋಟೆಲ್‌ನ ಹೊರಗೆ ಚಾಲಕನೊಂದಿಗೆ ಕಾರಿನಲ್ಲಿ ಸಿಂಗ್‌ನನ್ನು ಪತ್ತೆಹಚ್ಚಿದರು. ಆರಂಭದಲ್ಲಿ ಅವರು ಐಎಎಸ್ ಅಧಿಕಾರಿ ಎಂದು ನಟಿಸಿ ನಕಲಿ ಗುರುತಿನ ಚೀಟಿಯನ್ನು ತೋರಿಸಿದ್ದ, ಆದರೆ ತನಿಖೆಯ ಸಮಯದಲ್ಲಿ, ದಾಖಲೆಗಳು ನಕಲಿ ಎಂದು ಅವರು ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿ ಹೇಳಿದರು.

ಆತನ ಬಳಿ ಮತ್ತೊಂದು ದಾಖಲೆಯೂ ಪೊಲೀಸರಿಗೆ ಸಿಕ್ಕಿದ್ದು, ಅದರಲ್ಲಿ ಆ ವ್ಯಕ್ತಿ ರಕ್ಷಣಾ ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದಾನೆಂದು ಹೇಳಲಾಗಿದೆ ಎಂದು ಅವರು ಹೇಳಿದರು. ಆರೋಪಿಯನ್ನು ಶನಿವಾರ ಬಂಧಿಸಿ ಸಂಬಂಧಿತ ಕಾನೂನು ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ಹೇಳಿದರು. ಈತ ಐಎಎಸ್ ಅಧಿಕಾರಿ ಎಂದು ನಟಿಸುವುದರ ಹಿಂದಿನ ಉದ್ದೇಶವೇನೆಂದು ಎಂಬ ಬಗ್ಗೆ ಪೊಲೀಸರಿಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್