ಪ್ರಾತಿನಿಧಿಕ ಚಿತ್ರ 
ದೇಶ

ಜಮ್ಮು ಮತ್ತು ಕಾಶ್ಮೀರ: ವಾಟ್ಸಾಪ್ ಮೂಲಕ ದೂರು, ಮೊದಲ e-FIR ದಾಖಲಿಸಿದ ಬಾರಾಮುಲ್ಲಾ ಪೊಲೀಸರು!

ತೋಟಗಾರಿಕಾ ಇಲಾಖೆಯ ಸರ್ಕಾರಿ ನೌಕರರಾಗಿರುವ ಶ್ರೀನಗರದ ಬೆಮಿನಾ ನಿವಾಸಿಯೊಬ್ಬರು ವಾಟ್ಸಾಪ್ ಮೂಲಕ ಅದೇ ಇಲಾಖೆಯಲ್ಲಿ ಉದ್ಯೋಗಿಯಾಗಿರುವ ಶಕೀಲ್ ಉರ್ ರೆಹಮಾನ್ ಎಂಬುವವರ ವಿರುದ್ಧ ವಾಟ್ಸಾಪ್ ಮೂಲಕ ದೂರು ದಾಖಲಿಸಿದ್ದಾರೆ.

ಬಾರಾಮುಲ್ಲಾ: ಡಿಜಿಟಲ್ ಪೋಲೀಸಿಂಗ್‌ನ ಮಹತ್ವದ ಹೆಜ್ಜೆಯಾಗಿ, ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಪಟ್ಟಾನ್ ಪೊಲೀಸ್ ಠಾಣೆಯು ಫೆಬ್ರುವರಿ 28 ರಂದು ವಾಟ್ಸಾಪ್ ಮೂಲಕ ಸಲ್ಲಿಸಿದ ದೂರಿನ ನಂತರ ತನ್ನ ಮೊದಲ ಎಲೆಕ್ಟ್ರಾನಿಕ್ ಪ್ರಥಮ ಮಾಹಿತಿ ವರದಿಯನ್ನು (ಇ-ಎಫ್‌ಐಆರ್) ದಾಖಲಿಸಿದೆ ಎಂದು ಬಾರಾಮುಲ್ಲಾ ಪೊಲೀಸರು ತಿಳಿಸಿದ್ದಾರೆ.

ತೋಟಗಾರಿಕಾ ಇಲಾಖೆಯ ಸರ್ಕಾರಿ ನೌಕರರಾಗಿರುವ ಶ್ರೀನಗರದ ಬೆಮಿನಾ ನಿವಾಸಿಯೊಬ್ಬರು ವಾಟ್ಸಾಪ್ ಮೂಲಕ ಅದೇ ಇಲಾಖೆಯಲ್ಲಿ ಉದ್ಯೋಗಿಯಾಗಿರುವ ಶಕೀಲ್ ಉರ್ ರೆಹಮಾನ್ ಎಂಬುವವರ ವಿರುದ್ಧ ವಾಟ್ಸಾಪ್ ಮೂಲಕ ದೂರು ದಾಖಲಿಸಿದ್ದಾರೆ.

ದೂರುದಾರರು ಲೈಂಗಿಕ ಕಿರುಕುಳ, ಅತ್ಯಾಚಾರ ಯತ್ನ ಮತ್ತು ಕ್ರಿಮಿನಲ್ ಬೆದರಿಕೆಯ ಆರೋಪ ಹೊರಿಸಿದ್ದಾರೆ.

ದೂರನ್ನು ಪರಿಶೀಲಿಸಿದ ನಂತರ, ಸಂಬಂಧಿತ ಕಾನೂನು ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಪ್ರಕರಣದಲ್ಲಿ ಇ-ಎಫ್‌ಐಆರ್ ದಾಖಲಿಸಿದ್ದಾರೆ.

ಸದ್ಯ ಈ ಸಂಬಂಧ ತನಿಖೆ ನಡೆಯುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸೆ.20 ರಿಂದ 108 ಸೇವೆ ಬಂದ್: ಸರ್ಕಾರಕ್ಕೆ ಸಿಬ್ಬಂದಿ ಡೆಡ್‌ಲೈನ್; 3,500 ನೌಕರರಿಂದ ಸಾಮೂಹಿಕ ರಾಜೀನಾಮೆ ಎಚ್ಚರಿಕೆ!

ಸರ್ಕಾರಿ ಶಾಲಾ ಮಕ್ಕಳಿಗೆ ಭರ್ಜರಿ ಗುಡ್ ನ್ಯೂಸ್: ವೃತ್ತಿಪರ ಕೋರ್ಸ್‌ಗಳಲ್ಲಿ ಶೇ. 7.5 ರಷ್ಟು ಒಳಮೀಸಲಾತಿ, ಕರಡು ನಿಯಮ ಪ್ರಕಟ!

ಅಧಿಕಾರ ಬರುತ್ತದೆ, ಹೋಗುತ್ತದೆ ನಿಜ, ಕನಿಷ್ಠ ಸೌಜನ್ಯವೂ ಇಲ್ಲವೇ: ಬೈರತಿ ಸುರೇಶ್ ನಡವಳಿಕೆಗೆ ಮಹಾದೇವಪ್ಪ ಅಸಮಾಧಾನ

KPSC Scam: ನಿನಗೆ 5 ರೂಪಾಯಿ ರೇಷನ್ ಕೂಡ ಸಿಗದ ಹಾಗೆ ಮಾಡುತ್ತೇವೆ; ಅಕ್ರಮ ವಿರುದ್ಧ ದೂರು ದಾಖಲಿಸಿದ್ದವರಿಗೆ ಬೆದರಿಕೆ ಕರೆ

NICE ವಿವಾದ: ದೇವೇಗೌಡರು ಬೇಕಿದ್ರೆ ಕೋರ್ಟ್‌ಗೆ ಹೋಗಲಿ, ಉಪವಾಸ ಮಾಡಲಿ; ಮಾಜಿ ಪ್ರಧಾನಿ ಪತ್ರಕ್ಕೆ CM ಡಿಕೆಶಿ ತಿರುಗೇಟು