ದೇಶ

ಹಿಮಪಾತದ ಭೀತಿ: ಬದರಿನಾಥದಲ್ಲಿ ಶಂಖ ನಾದಕ್ಕೆ ನಿರ್ಬಂಧ!

ಅಷ್ಟಕ್ಕೂ ಹಿಮಪಾತಕ್ಕೂ, ಶಂಖ ನಾದಕ್ಕೂ ಏನು ಸಂಬಂಧ ಎಂಬುದರ ಬಗ್ಗೆ ವಿವರಿಸಿದ ಅರ್ಚಕರು, ಶಂಖದಿಂದ ಉತ್ಪತ್ತಿಯಾಗುವ ಕಂಪನಗಳು ಸುತ್ತಮುತ್ತಲಿನ ಪರ್ವತ ಪ್ರದೇಶದಲ್ಲಿ ಹಿಮಕುಸಿತಕ್ಕೆ ಕಾರಣವಾಗಬಹುದು ಸ್ಥಳೀಯ ಪುರಾಣಗಳು ಹೇಳುತ್ತವೆ.

ಡೆಹ್ರಾಡೂನ್: ಉತ್ತರಾಖಂಡದ ಚಮೋಲಿ ಜಿಲ್ಲೆಯ ಪ್ರಸಿದ್ಧ ತೀರ್ಥಕ್ಷೇತ್ರ ಬದರಿನಾಥ ದೇವಾಲಯದಲ್ಲಿ ಹಿಮಪಾತದ ಭೀತಿಯಲ್ಲಿ 'ಶಂಖ' ನಾದವನ್ನು ನಿಷೇಧಿಸಲಾಗಿದೆ. ಒಂದೆಡೆ ಶಂಖ ನಾದ ಹಾಗೂ ವಿಷ್ಣು ದೇವರಿಗೂ ವಿಶೇಷವಾದ ಸಂಬಂಧವಿದೆ ಎಂದು ಹೇಳುತ್ತಿರುವಂತೆಯೇ ಮತ್ತೊಂದೆಡೆ ಬದರಿನಾಥ ದೇವಾಲಯದಲ್ಲಿ ಶಂಖ ನಾದವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಸ್ಥಳೀಯ ಅರ್ಚಕರೊಬ್ಬರು ಹೇಳಿದ್ದಾರೆ. ಧಾರ್ಮಿಕ ಪದ್ಧತಿಗಳು ಮತ್ತು ವೈಜ್ಞಾನಿಕ ತಾರ್ಕಿಕತೆ ಎರಡಕ್ಕೂ ದೇವಾಲಯ ಬದ್ಧತೆಯನ್ನು ಅವರು ಪ್ರತಿಪಾದಿಸಿದ್ದಾರೆ.

ಹಿಮಪಾತಕ್ಕೂ ಶಂಖನಾದಕ್ಕೂ ಏನು ಸಂಬಂಧ? ಅಷ್ಟಕ್ಕೂ ಹಿಮಪಾತಕ್ಕೂ, ಶಂಖ ನಾದಕ್ಕೂ ಏನು ಸಂಬಂಧ ಎಂಬುದರ ಬಗ್ಗೆ ವಿವರಿಸಿದ ಅರ್ಚಕರು, ಶಂಖದಿಂದ ಉತ್ಪತ್ತಿಯಾಗುವ ಕಂಪನಗಳು ಸುತ್ತಮುತ್ತಲಿನ ಪರ್ವತ ಪ್ರದೇಶದಲ್ಲಿ ಹಿಮಕುಸಿತಕ್ಕೆ ಕಾರಣವಾಗಬಹುದು ಸ್ಥಳೀಯ ಪುರಾಣಗಳು ಹೇಳುತ್ತವೆ.

ಈ ನಂಬಿಕೆಯು ನಮ್ಮ ಸಂಪ್ರದಾಯಗಳಲ್ಲಿ ಆಳವಾಗಿ ಬೇರೂರಿದ್ದು, ಇದನ್ನು ಭಕ್ತರು ಮತ್ತು ಸ್ಥಳೀಯರು ಗಂಭೀರವಾಗಿ ಪರಿಗಣಿಸಿದ್ದಾರೆ.ಇಂತಹ ಸೂಕ್ಷ್ಮ ವಾತಾವರಣದಲ್ಲಿ ಸಣ್ಣ ಕೆಲಸಗಳು ಕೂಡಾ ತುಂಬಾ ಪರಿಣಾಮ ಬೀರಬಹುದೆಂದು ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ಎಚ್ಚರಿಕೆ ನೀಡಲಾಗುತ್ತಿದೆ ಎಂದರು.

ಎಲ್ಲಾ ದಶಕಗಳಲ್ಲಿ ಹಿಮಪಾತ: ಬದರಿನಾಥದ ಮುಖ್ಯ ದೇವಾಲಯ ಹೊರತುಪಡಿಸಿ ಬದರಿಪುರಿಯ ಗಮನಾರ್ಹ ಭಾಗವು ಹಿಮಕುಸಿತದ ಅಪಾಯದಲ್ಲಿದೆ ಎಂದು ಪರಿಸರವಾದಿ ಮತ್ತು ಚಿಪ್ಕೋ ಚಳುವಳಿಯ ನಾಯಕ ಚಂಡಿ ಪ್ರಸಾದ್ ಭಟ್ ತಿಳಿಸಿದರು.

ಹಿಂದಿನ ಹಿಮಪಾತದ ಘಟನೆಗಳನ್ನು ಗಮನಿಸಿದರೆ, ಎಲ್ಲಾ ದಶಕಗಳಲ್ಲಿ ಬದರಿಪುರಿ ಹಿಮಪಾತದಿಂದ ಹಾನಿಗೊಳಗಾಗಿದೆ. 2014 ರಲ್ಲಿ ಬದರಿನಾಥದ ನಾರಾಯಣ ಪರ್ವತ ಪ್ರದೇಶದಲ್ಲಿ ದೊಡ್ಡ ಹಿಮಪಾತವಾಗಿ ತೀವ್ರ ಹಾನಿಯಾಗಿತ್ತು ಎಂದು ಐದು ದಶಕಗಳಿಂದ ಹಿಮಾಲಯ ಪರಿಸರವನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಭಟ್ ಹೇಳಿದರು.

92 ವರ್ಷದ ಭಟ್ ಅವರು ಪದ್ಮವಿಭೂಷಣ, ಪದ್ಮಶ್ರೀ, ಗಾಂಧಿ ಶಾಂತಿ ಪ್ರಶಸ್ತಿ ಮತ್ತು ಮ್ಯಾಗ್ಸೆಸೆ ಪ್ರಶಸ್ತಿ ಸೇರಿದಂತೆ ಪುರಸ್ಕಾರಗಳನ್ನು ಪಡೆದಿದ್ದಾರೆ.

ಕಾಂಚನಾ ಗಂಗಾ ಸೇರಿದಂತೆ ಹಲವು ಪರ್ವತಗಳು: ಸಾಮಾಜಿಕ ಕಾರ್ಯಕರ್ತ ಓಂ ಪ್ರಕಾಶ್ ಭಟ್ ಮಾತನಾಡಿ, ಬದರಿನಾಥ ಧಾಮದಲ್ಲಿ ನೀಲಕಂಠ ಪರ್ವತ, ನಾರ್-ನಾರಾಯಣ, ಕಾಂಚನ ಗಂಗಾ, ಸತೋಪಂಥ್, ಮನಾ ಮತ್ತು ಕುಬೇರ್ ಪರ್ವತಗಳಿವೆ. ಅಲ್ಲದೇ, ಹಿಮದಿಂದ ಆವೃತವಾಗಿರುವ ಅನೇಕ ಇತರ ಶಿಖರಗಳಿವೆ. ಹಿಂದೆ ಬದರಿನಾಥದಿಂದ ಮಾನಾ ಪ್ರದೇಶದವರೆಗೆ ಭಾರೀ ಹಿಮಪಾತವಾಗುತ್ತಿತ್ತು. ಈ ಹಿಮದಿಂದ ಆವೃತವಾದ ಶಿಖರಗಳಿಂದ ಹಿಮಪಾತದ ಭಯದಿಂದಾಗಿ, ಬದರಿನಾಥ ದೇವಾಲಯದಲ್ಲಿ ಶಂಖವನ್ನು ಊದುತ್ತಿರಲಿಲ್ಲ ಎಂದು ತಿಳಿಸಿದರು.

ಬದರಿನಾಥದಲ್ಲಿ ಅಭಿಷೇಕದ ಸಂದರ್ಭದಲ್ಲಿ ಶಂಖವನ್ನು ಬಳಸಲಾಗುತ್ತದೆ. ಇದನ್ನು ದೇವರಿಗೆ ಅರ್ಪಿಸುವ ನೈವೇದ್ಯ ಪವಿತ್ರಗೊಳಿಸಲು ಸಹ ಬಳಸಲಾಗುತ್ತದೆ." ಆದರೆ ಈಗ ಶಂಖ ಊದುವುದನ್ನು ನಿಷೇಧಿಸಲಾಗಿದೆ. ಇದು ಹಿಮಕುಸಿತವಾಗದಂತೆ ತಡೆಯಬಹುದು ಎಂದು ಬದರಿನಾಥದ ಧಾರ್ಮಿಕ ಅಧಿಕಾರಿ ಭುವನ್ ಚಂದ್ರ ಉನಿಯಾಲ್ ಹೇಳಿದರು.

ಕಣಿವೆ ಪ್ರದೇಶದಲ್ಲಿ ಹೆಚ್ಚಿದ ಮಾನವ ಚಟುವಟಿಕೆ: ಬದರಿನಾಥದಿಂದ ಮನಾವರೆಗೆ ಸಂಪೂರ್ಣ ಕಣಿವೆ ಸೂಕ್ಷ್ಮವಾಗಿದೆ. ಹಿಂದೆ ಪ್ರದೇಶದಲ್ಲಿ ಮಾನವ ಸಂಚಾರ ಕಡಿಮೆಯಾಗಿತ್ತು. ಶಂಖ ನಾದ ನಿರ್ಬಂಧದ ಹಿಂದಿನ ವೈಜ್ಞಾನಿಕ ಕಾರಣವೆಂದರೆ ಹಿಮದಿಂದ ಆವೃತವಾದ ಶಿಖರಗಳಲ್ಲಿ ಕಂಪನಗಳನ್ನು ತಡೆಯುವುದು. ಆದಾಗ್ಯೂ, ಈ ಪ್ರದೇಶದಲ್ಲಿ ಮಾನವ ಚಟುವಟಿಕೆಗಳು ಗಣನೀಯವಾಗಿ ಹೆಚ್ಚಿವೆ. ಇಲ್ಲಿ ಅತಿರೇಕದ ನಿರ್ಮಾಣ ನಡೆಯುತ್ತಿದೆ. ಇದು ಹಿಮಪಾತದ ಘಟನೆಗಳಿಗೆ ಕಾರಣವಾಗುತ್ತಿದೆ ಎಂದು ಹಿರಿಯ ವಿಜ್ಞಾನಿಯೊಬ್ಬರು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT