TDP ಸಂಸದ ಅಪ್ಪಲ ನಾಯ್ಡು 
ದೇಶ

ಆಂಧ್ರ ಪ್ರದೇಶ: ಮೂರನೇ ಮಗುವಿಗೆ ಜನ್ಮ ನೀಡುವ ಮಹಿಳೆಗೆ 50,000 ರೂ ಪ್ರೋತ್ಸಾಹ ಧನ ಘೋಷಿಸಿದ TDP ಸಂಸದ!

ಗಂಡು ಮಗುವಿಗೆ ಜನ್ಮ ನೀಡುವ ಮಹಿಳೆಗೆ ಹಸುವನ್ನು ನೀಡಲಾಗುವುದು ಎಂದು ಅವರು ಪ್ರಕಟಿಸಿದ್ದಾರೆ. ತಮ್ಮ ಸಂಬಳದಿಂದ ನಗದು ಪ್ರೋತ್ಸಾಹಧನ ನೀಡುವುದಾಗಿ ಹೇಳಿದ್ದಾರೆ.

ಅಮರಾವತಿ: ಆಂಧ್ರಪ್ರದೇಶದ ಮುಖ್ಯಮಂತ್ರಿ ಮತ್ತು ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು, ದಂಪತಿಗಳು ಹೆಚ್ಚಿನ ಮಕ್ಕಳನ್ನು ಹೊಂದುವಂತೆ ಸಲಹೆ ನೀಡಿದ ಬೆನ್ನಲ್ಲೇ, ವಿಜಯನಗರದ ಪಕ್ಷದ ಸಂಸದ ಕಾಳಿಸೆಟ್ಟಿ ಅಪ್ಪಲ ನಾಯ್ಡು, ಮೂರನೇ ಮಗುವಿಗೆ ಜನ್ಮ ನೀಡುವ ಮಹಿಳೆಯರಿಗೆ ತಲಾ 50,000 ರೂ. ಆರ್ಥಿಕ ನೆರವು ನೀಡಲಾಗುವುದು ಎಂದು ಘೋಷಿಸಿದ್ದಾರೆ.

ಅಲ್ಲದೇ ಗಂಡು ಮಗುವಿಗೆ ಜನ್ಮ ನೀಡುವ ಮಹಿಳೆಗೆ ಹಸುವನ್ನು ನೀಡಲಾಗುವುದು ಎಂದು ಅವರು ಪ್ರಕಟಿಸಿದ್ದಾರೆ. ತಮ್ಮ ಸಂಬಳದಿಂದ ನಗದು ಪ್ರೋತ್ಸಾಹಧನ ನೀಡುವುದಾಗಿ ಹೇಳಿದ್ದಾರೆ.

ಅಪ್ಪಾ ನಾಯ್ಡು ಅವರ ಆಫರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಟಿಡಿಪಿ ಮುಖಂಡರು ಮತ್ತು ಕಾರ್ಯಕರ್ತರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಸಚಿವರ ಘೋಷಣೆಯನ್ನು ರೀ- ಪೋಸ್ಟ್ ಮಾಡುತ್ತಿದ್ದಾರೆ.

ಸಚಿವರ ಕೊಡುಗೆಯನ್ನು ಮಹಿಳೆಯರು ಕ್ರಾಂತಿಕಾರಿ ಎಂದು ಪ್ರಶಂಸಿಸಿದ್ದಾರೆ. ಮುಖ್ಯಮಂತ್ರಿ ನಾಯ್ಡು ಕೂಡಾ ಅಪ್ಪಾ ನಾಯ್ಡು ಅವರನ್ನು ಶ್ಲಾಘಿಸಿದ್ದಾರೆ. ವಿಜಯನಗರದ ರಾಜೀವ್ ಸ್ಪೋರ್ಟ್ಸ್ ಸಂಯುಕ್ತಾಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಶನಿವಾರ ಆಯೋಜಿಸಿದ್ದ ಸಭೆಯಲ್ಲಿ ಸಂಸದರು ಈ ವಿಷಯ ಪ್ರಕಟಿಸಿದ್ದಾರೆ.

ಇತ್ತೀಚಿಗೆ ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ,ದಕ್ಷಿಣ ಭಾರತದಲ್ಲಿ ಕ್ಷೀಣಿಸುತ್ತಿರುವ ಜನಸಂಖ್ಯೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಚಂದ್ರಬಾಬು ನಾಯ್ಡು, ಮಕ್ಕಳ ಸಂಖ್ಯೆ ಲೆಕ್ಕಿಸದೆ ಎಲ್ಲಾ ಮಹಿಳಾ ಉದ್ಯೋಗಿಗಳಿಗೆ ಹೆರಿಗೆಯ ಸಮಯದಲ್ಲಿ ಹೆರಿಗೆ ರಜೆ ನೀಡಲಾಗುವುದು ಎಂದು ಶನಿವಾರ ಘೋಷಿಸಿದರು.

ಈ ಹಿಂದೆ ಹೆರಿಗೆ ರಜೆಯನ್ನು ಇಬ್ಬರು ಮಕ್ಕಳಿಗೆ ಸೀಮಿತಗೊಳಿಸಲಾಗಿತ್ತು. ಈಗ, ನಾವು ಎಲ್ಲಾ ಮಕ್ಕಳನ್ನೂ ಒಳಗೊಂಡಂತೆ ಹೆರಿಗೆ ರಜೆಯನ್ನು ವಿಸ್ತರಿಸುತ್ತಿದ್ದೇವೆ. ಈ ಕ್ರಮವು ಕುಟುಂಬದ ಬೆಳವಣಿಗೆಯನ್ನು ಉತ್ತೇಜಿಸಲು, ಜನಸಂಖ್ಯೆಯ ಸಮತೋಲನವನ್ನು ಪರಿಹರಿಸಲು ಮತ್ತು ಮಹಿಳೆಯರಿಗೆ ಅವರ ವೃತ್ತಿಪರ ಮತ್ತು ವೈಯಕ್ತಿಕ ಜೀವನವನ್ನು ಸಮತೋಲನದಲ್ಲಿ ಬೆಂಬಲಿಸುವ ಗುರಿಯನ್ನು ಹೊಂದಿದೆ. ನಾವು ಮಹಿಳೆಯರನ್ನು ಸಬಲೀಕರಣಗೊಳಿಸಲು ಮತ್ತು ಆಂಧ್ರಪ್ರದೇಶಕ್ಕೆ ಬಲವಾದ ಭವಿಷ್ಯವನ್ನು ನಿರ್ಮಿಸಲು ಬದ್ಧರಾಗಿದ್ದೇವೆ" ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಯುವಕರನ್ನು ಜೈಲಿಗೆ ಕಳುಹಿಸುವುದು ಹೇಡಿತನ’; ಸಿಜೆಪಿ ಪ್ರತಿಭಟನೆಗೆ ರಾಹುಲ್‌ ಗಾಂಧಿ ಬೆಂಬಲ

ವಿಮಾನ ಹೈಜಾಕ್ ಬೆದರಿಕೆ ಎಚ್ಚರಿಕೆ: ಫ್ರಾಂಕ್‌ಫರ್ಟ್‌- ದೆಹಲಿ Air India ಜೈಪುರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್

ಹಲವು ರಾಜ್ಯಗಳಲ್ಲಿ ಭಾರೀ ಮಳೆ ಮುನ್ಸೂಚನೆ: ಕರ್ನಾಟಕಕ್ಕೂ ಗುಡುಗು, ಮಿಂಚಿನ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ!

ಚಲಿಸುವ ರೈಲಿನಲ್ಲಿ ಮೊಬೈಲ್ ಕಳ್ಳತನಕ್ಕೆ ಯತ್ನ: ಕಳ್ಳನ ಕೈ ಹಿಡಿದ ಪ್ರಯಾಣಿಕರು, ಬಿಹಾರದಲ್ಲಿ ರೋಚಕ Video ವೈರಲ್‌

ಬಂಡೀಪುರದಲ್ಲಿ ದಂತವಿಲ್ಲದ ಆನೆಯ ಕಳೇಬರ ಪತ್ತೆ; ನಟೋರಿಯಸ್ ಬವಾರಿಯಾ ಗ್ಯಾಂಗ್‌ ನಂಟಿನ ಶಂಕೆ