ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

'ಮಾತು ಕೊಟ್ಟಿಲ್ಲ..': 'ಸುಂಕ ಕಡಿತಕ್ಕೆ ಭಾರತ ಒಪ್ಪಿದೆ' ಎಂಬ Donald Trump ಹೇಳಿಕೆಗೆ ಮೋದಿ ಸರ್ಕಾರ ತಿರುಗೇಟು

ಸುಂಕ ವಿಚಾರವಾಗಿ ಜಾಗತಿಕವಾಗಿ ಕದನಕ್ಕೇ ಇಳಿದಿರುವ ಡೊನಾಲ್ಡ್ ಟ್ರಂಪ್ ತಮ್ಮ ದೇಶದ ವಸ್ತುಗಳ ಮೇಲೆ ಹೆಚ್ಚಿನ ಸುಂಕ ವಿಧಿಸಿರುವ ದೇಶಗಳ ವಿರುದ್ಧ ಹೆಚ್ಚಿನ ಸುಂಕದ ಎಚ್ಚರಿಕೆ ನೀಡಿದ್ದಾರೆ.

ಮೋದಿ-ಟ್ರಂಪ್
Srinivasa Murthy VN
Updated On : 11 Mar 2025, 3:39 pm

ನವದೆಹಲಿ: ಸುಂಕ ಕಡಿತ ವಿಚಾರವಾಗಿ ಹಗ್ಗ ಜಗ್ಗಾಟ ನಡೆಸುತ್ತಿರುವ ಅಮೆರಿಕಕ್ಕೆ ಭಾರತ ತಿರುಗೇಟು ನೀಡಿದ್ದು, ಸುಂಕ ಕಡಿತ ವಿಚಾರವಾಗಿ ಮಾತು ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಸರ್ಕಾರ ಅಮೆರಿಕದ ವಸ್ತುಗಳ ಮೇಲಿನ "ತಮ್ಮ ಸುಂಕ ಕಡಿತಗೊಳಿಸಲು" ಒಪ್ಪಿಕೊಂಡಿದೆ ಎಂದು ಘೋಷಿಸಿದ ಕೆಲವು ದಿನಗಳ ಅಂತರದಲ್ಲೇ ಭಾರತ ಸರ್ಕಾರದಿಂದ ಈ ರೀತಿಯ ಪ್ರತಿಕ್ರಿಯೆ ನೀಡಿದೆ.

ಸುಂಕ ವಿಚಾರವಾಗಿ ಜಾಗತಿಕವಾಗಿ ಕದನಕ್ಕೇ ಇಳಿದಿರುವ ಡೊನಾಲ್ಡ್ ಟ್ರಂಪ್ ತಮ್ಮ ದೇಶದ ವಸ್ತುಗಳ ಮೇಲೆ ಹೆಚ್ಚಿನ ಸುಂಕ ವಿಧಿಸಿರುವ ದೇಶಗಳ ವಿರುದ್ಧ ಹೆಚ್ಚಿನ ಸುಂಕದ ಎಚ್ಚರಿಕೆ ನೀಡಿದ್ದಾರೆ. ಅದೇ ರೀತಿ ಭಾರತದ ವಿರುದ್ಧವೂ ಮಾತನಾಡಿದ್ದ ಟ್ರಂಪ್, ಭಾರತ ಎಷ್ಟು ಸುಂಕ ವಿಧಿಸುತ್ತದೆಯೇ ಅಷ್ಟೇ ಪ್ರಮಾಣದ ಸುಂಕವನ್ನು ಅಮೆರಿಕ ಭಾರತದ ಮೇಲೆ ವಿಧಿಸುತ್ತದೆ ಎಂದು ಹೇಳಿದ್ದರು.

Advertisement

Advertisement

Also Read

ವೇಗವಾಗಿ ಕರಗುತ್ತಿದೆ ಜಗತ್ತಿನ ಶ್ರೀಮಂತ ಉದ್ಯಮಿ Elon Musk ಸಂಪತ್ತು; ಜನವರಿಯಿಂದ 132 ಬಿಲಿಯನ್ ಡಾಲರ್ ಇಳಿಕೆ!

ಅಲ್ಲದೆ ಟ್ರಂಪ್ ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಮುಂದಿನ ತಿಂಗಳು ಏಪ್ರಿಲ್ 2 ರಿಂದ ಪ್ರಾರಂಭವಾಗುವ ಪರಸ್ಪರ ಸುಂಕಗಳನ್ನು ಘೋಷಿಸಿದ್ದಾರೆ. ಟ್ರಂಪ್ ಕಳೆದ ವಾರ ಮತ್ತೊಮ್ಮೆ ಭಾರತದ "ಬೃಹತ್ ಸುಂಕ"ಗಳನ್ನು ಟೀಕಿಸಿದ್ದರು. 'ದುಬಾರಿ ಸುಂಕದಿಂದಾಗಿ ಭಾರತಕ್ಕೆ ಏನನ್ನೂ ಮಾರಾಟ ಮಾಡಲು ಸಾಧ್ಯವಿಲ್ಲ, ಇದು ಬಹುತೇಕ ನಿರ್ಬಂಧಿತವಾಗಿದೆ. ಭಾರತ ಸರ್ಕಾರ ಈಗ ತಮ್ಮ ಸುಂಕಗಳನ್ನು ಕಡಿತಗೊಳಿಸಲು ಒಪ್ಪಿಕೊಂಡಿದ್ದಾರೆ. ಭಾರತ ಸುಂಕ ನೀತಿ ಬಯಲಾಗಿದ್ದು, ಇದೀಗ ಅವರು ಸುಂಕ ಕಡಿತಕ್ಕೆ ಒಪ್ಪಿಕೊಂಡಿದ್ದಾರೆ ಎಂದು ಟ್ರಂಪ್ ಹೇಳಿದ್ದರು.

ಮಾತು ಕೊಟ್ಟಿಲ್ಲ ಎಂದ ಭಾರತ

ಇನ್ನು ಅಮೆರಿಕ ಅಧ್ಯಕ್ಷರ ಈ ಹೇಳಿಕೆ ಸಂಸತ್ ಸದನದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಯಿತು. ವಿಪಕ್ಷಗಳ ನಾಯಕರು ಸುಂಕ ಕಡಿತದ ವಿಚಾರವಾಗಿ ಭಾರತ ಅಮೆರಿಕ ಎದುರು ಮಂಡಿಯೂರಿದೆ ಎಂದು ಟೀಕಿಸಿದರೆ ಇದಕ್ಕೆ ತಿರುಗೇಟು ನೀಡಿರುವ ಸರ್ಕಾರ ಸುಂಕ ಕಡಿತ ವಿಚಾರವಾಗಿ ಅಮೆರಿಕಕ್ಕೆ ಯಾವುದೇ ಮಾತುಕೊಟ್ಟಿಲ್ಲ ಎಂದು ಹೇಳಿದೆ.

ಅಂತೆಯೇ "ಅಮೆರಿಕದ ಅಧ್ಯಕ್ಷರು ಪದೇ ಪದೇ ಎತ್ತುತ್ತಿರುವ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಸೆಪ್ಟೆಂಬರ್ ವರೆಗೆ ಸಮಯ ಕೇಳಿದೆ" ಎಂದು ತಿಳಿದುಬಂದಿದೆ. ಈ ಬಗ್ಗೆ ಮಾತನಾಡಿರುವ ಭಾರತದ ವಾಣಿಜ್ಯ ಕಾರ್ಯದರ್ಶಿ ಸುನಿಲ್ ಬಾರ್ತ್ವಾಲ್ಅವರು, "ಭಾರತ ಮತ್ತು ಅಮೆರಿಕಗಳು ಪರಸ್ಪರ ಪ್ರಯೋಜನಕಾರಿ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದತ್ತ ಕೆಲಸ ಮಾಡುತ್ತಿವೆ, ಕೇವಲ ತಕ್ಷಣದ ಸುಂಕ ಹೊಂದಾಣಿಕೆಗಳನ್ನು ಪಡೆಯುವ ಬದಲು ದೀರ್ಘಾವಧಿಯ ವ್ಯಾಪಾರ ಸಹಕಾರದ ಮೇಲೆ ಸರ್ಕಾರ ಗಮನ ಕೇಂದ್ರೀಕರಿಸುತ್ತಿವೆ" ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments