ತೇಜ್ ಪ್ರತಾಪ್ ಸಿಂಗ್ ಯಾದವ್ 
ದೇಶ

'ಡ್ಯಾನ್ಸ್ ಮಾಡು, ಇಲ್ಲದಿದ್ದರೆ ಸಸ್ಪೆಂಡ್ ಆಗ್ತೀಯಾ': ಪೊಲೀಸ್ ಅಧಿಕಾರಿಗೆ ತೇಜ್ ಪ್ರತಾಪ್ ವಾರ್ನಿಂಗ್; ವಿಡಿಯೋ

ಶುಕ್ರವಾರ ಪಾಟ್ನಾದಲ್ಲಿನ ತನ್ನ ನಿವಾಸದ ಬಳಿ ಹೋಳಿ ಸಂಭ್ರಮಾಚರಣೆ ವೇಳೆಯಲ್ಲಿ ಕರ್ತವ್ಯದಲ್ಲಿ ನಿರತರಾಗಿದ್ದ ಪೊಲೀಸ್ ಅಧಿಕಾರಿಗೆ ತೇಜ್ ಪ್ರತಾಪ್ ಡ್ಯಾನ್ಸ್ ಮಾಡುವಂತೆ ಹೇಳಿದ್ದಾರೆ.

ಪಾಟ್ನಾ: ಯೂರ್ನಿಫಾರ್ಮ್ ನಲ್ಲಿದ್ದ ಪೊಲೀಸ್ ಅಧಿಕಾರಿಗೆ ಡ್ಯಾನ್ಸ್ ಮಾಡುವಂತೆ ರಾಷ್ಟ್ರೀಯ ಜನತಾದಳ (ಆರ್ ಜೆಡಿ) ನಾಯಕ ತೇಜ್ ಪ್ರತಾಪ್ ಯಾದವ್ ಆದೇಶಿಸಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.

ಹೌದು. ಶುಕ್ರವಾರ ಪಾಟ್ನಾದಲ್ಲಿನ ತನ್ನ ನಿವಾಸದ ಬಳಿ ಹೋಳಿ ಸಂಭ್ರಮಾಚರಣೆ ವೇಳೆಯಲ್ಲಿ ಕರ್ತವ್ಯದಲ್ಲಿ ನಿರತರಾಗಿದ್ದ ಪೊಲೀಸ್ ಅಧಿಕಾರಿಗೆ ತೇಜ್ ಪ್ರತಾಪ್ ಡ್ಯಾನ್ಸ್ ಮಾಡುವಂತೆ ಹೇಳಿದ್ದಾರೆ. ಡ್ಯಾನ್ಸ್ ಮಾಡಲು ನಿರಾಕರಿಸಿದರೆ ಸಸ್ಪೆಂಡ್ ಆಗ್ತೀಯಾ ಎಂದು ಹೇಳುವುದು ವಿಡಿಯೋದಲ್ಲಿ ಸೆರೆಯಾಗಿದೆ. ವಿಡಿಯೋ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಪಕ್ಷದ ಕಾರ್ಯಕರ್ತರೊಂದಿಗೆ ಹೋಳಿ ಹಬ್ಬ ಆಚರಿಸುತ್ತಿದ್ದ ಯಾದವ್, ಗೀತೆಯೊಂದನ್ನು ಡ್ಯಾನ್ಸ್ ಮಾಡುವಂತೆ ಪೊಲೀಸ್ ಅಧಿಕಾರಿಗೆ ನಿರ್ದೇಶಿಸುವುದು ವಿಡಿಯೋದಲ್ಲಿದೆ. ಯಾದವ್ ನಡೆಗೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ಟೀಕಿಸುತ್ತಿದ್ದರೆ ಮತ್ತೆ ಕೆಲವರು ಹೋಳಿಯಲ್ಲಿ ಇದು ಚಿಕ್ಕ ತಮಾಷೆ ಅಷ್ಟೇ ಎಂದಿದ್ದಾರೆ.

ನಾನು ಸಾಂಗ್ ಹೇಳ್ತಿನಿ, ನೀನು ಡ್ಯಾನ್ಸ್ ಮಾಡು. ಇಲ್ಲದಿದ್ದರೆ ಸಸ್ಪೆಂಡ್ ಆಗ್ತೀಯಾ. ಕೆಟ್ಟದಾಗಿ ಯೋಚಿಸಬೇಡ. ಇದು ಹೋಳಿ ಎಂದು ತೇಜ್ ಪ್ರತಾಪ್ ಯಾದವ್ ಪೊಲೀಸ್ ಅಧಿಕಾರಿಗೆ ಹೇಳ್ತಾರೆ. ಈ ಘಟನೆಗೆ ಮೈತ್ರಿ ಪಾಲುದಾರ ಪಕ್ಷ ಕಾಂಗ್ರೆಸ್ ಸೇರಿದಂತೆ ಜೆಡಿಯು, ಬಿಜೆಪಿ ತೀವ್ರವಾಗಿ ಟೀಕಿಸಿವೆ. ಜಂಗಲ್ ರಾಜ್ ಕೊನೆಯಾಗಿದೆ. ಆದರೆ, ಡ್ಯಾನ್ಸ್ ಮಾಡದಿದ್ದರೆ ಸಸ್ಪೆಂಡ್ ಮಾಡುವುದಾಗಿ ಲಾಲು ಪುತ್ರ ಪೊಲೀಸ್ ಅಧಿಕಾರಿಗೆ ಬೆದರಿಕೆ ಹಾಕಿದ್ದಾರೆ.

ಬಿಹಾರ ಈಗ ಬದಲಾಗಿದೆ. ಬಿಹಾರದಲ್ಲಿ ಬದಲಾದ ಪರಿಸರದಲ್ಲಿ ಇಂತಹ ನಡವಳಿಕೆಗಳು ನಡೆಯುವುದಿಲ್ಲ ಎಂಬುದನ್ನು ತೇಜಸ್ವಿ ಯಾದವ್, ತೇಜ್ ಪ್ರತಾಪ್ ಯಾದವ್ ಅಥವಾ ಅಥವಾ ಲಾಲು ಪ್ರಸಾದ್ ಯಾದವ್ ಕುಟುಂಬದಲ್ಲಿ ಯಾವುದೇ ಸದಸ್ಯರು ಅರ್ಥ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಜೆಡಿಯು ವಕ್ತಾರ ರಾಜೀವ್ ರಂಜನ್ ಪ್ರಸಾದ್ ಹೇಳಿದ್ದಾರೆ.

ಕಾನೂನನ್ನು ಕೈಗೆ ತೆಗೆದುಕೊಳ್ಳುವುದು ಆರ್ ಜೆಡಿಯ ಸಂಪ್ರದಾಯವಾಗಿದೆ ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನವಲ್ಲ ಆರೋಪಿಸಿದ್ದಾರೆ. ಇದು ದುರಾದೃಷ್ಟಕರ ಘಟನೆಯಾಗಿದೆ. ತೇಜ್ ಪ್ರತಾಪ್ ಹೇಳಿರುವುದನ್ನು ಖಂಡಿಸುತ್ತೇನೆ. ಸಸ್ಪೆಂಡ್ ಮಾಡುವ ಅಧಿಕಾರ ನನಗಿಲ್ಲ ಎಂಬುದನ್ನು ಅವರು ಅರಿತಿಲ್ಲ ಎಂದು ಕಾಂಗ್ರೆಸ್ ನಾಯಕ ರಶೀದ್ ಅಲ್ವಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!