ನಿತಿನ್ ಗಡ್ಕರಿ 
ದೇಶ

ನಮ್ಮ ಸಮಾಜದಲ್ಲಿ ಮುಸ್ಲಿಂ ಸಮುದಾಯಕ್ಕೆ ಶಿಕ್ಷಣದ ಅಗತ್ಯವಿದೆ: ನಿತಿನ್ ಗಡ್ಕರಿ

ನಾವು ಮಸೀದಿಯಲ್ಲಿ ನೂರು ಬಾರಿ ಪ್ರಾರ್ಥಿಸಬಹುದು. ಆದರೆ, ನಾವು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳದಿದ್ದರೆ, ನಮ್ಮ ಭವಿಷ್ಯ ಏನಾಗುತ್ತದೆ?

ನಾಗ್ಪುರ: ಜಾತಿ ಆಧಾರಿತ ರಾಜಕೀಯದ ವಿರುದ್ಧ ಕಿಡಿಕಾರಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ಮುಸ್ಲಿಂ ಸಮುದಾಯದಲ್ಲಿ ಶಿಕ್ಷಣದ ತುರ್ತು ಅಗತ್ಯವನ್ನು ಒತ್ತಿ ಹೇಳಿದ್ದಾರೆ.

ಶನಿವಾರ ನಾಗ್ಪುರದಲ್ಲಿ ನಡೆದ ಸೆಂಟ್ರಲ್ ಇಂಡಿಯಾ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್‌ನ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಣವು ಅಭಿವೃದ್ಧಿ ಮತ್ತು ಪ್ರಗತಿಗೆ ಪ್ರಮುಖವಾಗಿದೆ. ನಮ್ಮ ಸಮಾಜದಲ್ಲಿ, ಶಿಕ್ಷಣದ ಅಗತ್ಯವಿರುವ ಸಮುದಾಯವೆಂದರೆ ಮುಸ್ಲಿಂ ಸಮುದಾಯ ಎಂದು ಒತ್ತಿ ಹೇಳಿದರು.

'ದುರದೃಷ್ಟವಶಾತ್, ಮುಸ್ಲಿಂ ಸಮುದಾಯದಲ್ಲಿ ಟೀ ಅಂಗಡಿಗಳು, ಪಾನ್ ಅಂಗಡಿಗಳು, ಸ್ಕ್ರ್ಯಾಪ್ ವ್ಯವಹಾರ, ಟ್ರಕ್ ಚಾಲನೆ ಮತ್ತು ಶುಚಿಗೊಳಿಸುವಿಕೆಯಂತಹ ಕೆಲವೇ ಕೆಲವು ವೃತ್ತಿಗಳು ಮಾತ್ರ ಪ್ರಾಮುಖ್ಯತೆಯನ್ನು ಪಡೆದಿವೆ' ಎಂದರು.

'ನಮ್ಮ ಸಮಾಜದ ಜನರು ಎಂಜಿನಿಯರ್‌ಗಳು, ವೈದ್ಯರು, ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಾದರೆ, ನಮ್ಮ ಸಮಾಜವು ಅಭಿವೃದ್ಧಿ ಹೊಂದುತ್ತದೆ. ನಾವು ಮಸೀದಿಯಲ್ಲಿ ನೂರು ಬಾರಿ ಪ್ರಾರ್ಥಿಸಬಹುದು. ಆದರೆ, ನಾವು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳದಿದ್ದರೆ, ನಮ್ಮ ಭವಿಷ್ಯ ಏನಾಗುತ್ತದೆ?' ಎಂದು ಅವರು ಕೇಳಿದರು.

ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರನ್ನು ಉಲ್ಲೇಖಿಸಿದ ಅವರು, 'ಒಬ್ಬ ವ್ಯಕ್ತಿಯು ಜಾತಿ, ಪಂಗಡ, ಧರ್ಮ, ಭಾಷೆ ಅಥವಾ ಲಿಂಗದಿಂದ ಶ್ರೇಷ್ಠನಾಗುವುದಿಲ್ಲ. ಆತ ಗುಣಗಳಿಂದ ಶ್ರೇಷ್ಠನಾಗುತ್ತಾನೆ ಎಂದು ನಾನು ನಂಬುತ್ತೇನೆ. ಅದಕ್ಕಾಗಿಯೇ ನಾವು ಜಾತಿ, ಪಂಗಡ, ಧರ್ಮ, ಭಾಷೆ ಅಥವಾ ಲಿಂಗದ ಆಧಾರದ ಮೇಲೆ ಯಾರ ವಿರುದ್ಧವೂ ತಾರತಮ್ಯ ಮಾಡಬಾರದು. ಡಾ. ಕಲಾಂ ಪರಮಾಣು ವಿಜ್ಞಾನಿಯಾದರು. ಅವರ ಕೊಡುಗೆಗಳು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಅವರ ಹೆಸರನ್ನು ಪ್ರಸಿದ್ಧಿಪಡಿಸಿದವು' ಎಂದು ಹೇಳಿದರು.

'ಮತಗಳಿಗಾಗಿ ಜಾತಿ ನಾಯಕರನ್ನು ಮೆಚ್ಚಿಸುವಲ್ಲಿ ತಮಗೆ ಯಾವುದೇ ಆಸಕ್ತಿ ಇಲ್ಲ. ನಾನು ರಾಜಕೀಯದಲ್ಲಿದ್ದೇನೆ. ಜಾತಿ ನಾಯಕರು ಆಗಾಗ್ಗೆ ನನ್ನನ್ನು ಭೇಟಿ ಮಾಡಲು ಬರುತ್ತಾರೆ. ಆದರೆ, ನಾನು ಸ್ಪಷ್ಟವಾಗಿದ್ದೇನೆ. ನನಗೆ ಮತಗಳು ಸಿಗಲಿ ಅಥವಾ ಸಿಗದಿದ್ದರೂ ನಾನು ನನ್ನ ಸ್ವಂತ ಮೌಲ್ಯಗಳ ಮೇಲೆ ಬದುಕುತ್ತೇನೆ' ಎಂದು ಪ್ರತಿಪಾದಿಸಿದರು.

'ನಾನು ಒಮ್ಮೆ 50,000 ಜನರಿದ್ದ ಸಭೆಯಲ್ಲಿ 'ಜೋ ಕರೇಗಾ ಜಾತ್ ಕಿ ಬಾತ್, ಉಸ್ಕೆ ಕಸ ಕೆ ಮಾರುಂಗಾ ಲಾತ್' (ಜಾತಿಯ ಬಗ್ಗೆ ಮಾತನಾಡುವ ಯಾರನ್ನಾದರೂ ನಾನು ಬಲವಾಗಿ ಒದೆಯುತ್ತೇನೆ) ಎಂದು ಹೇಳಿದ್ದೆ. ಶಿಕ್ಷಣವು ಕೇವಲ ವೈಯಕ್ತಿಕ ಲಾಭಕ್ಕಾಗಿ ಅಲ್ಲ, ಬದಲಾಗಿ ಸಮಾಜ ಮತ್ತು ಇಡೀ ರಾಷ್ಟ್ರದ ಪ್ರಗತಿಗೆ ಸಹಕಾರಿಯಾಗಿದೆ. ಶಿಕ್ಷಣವು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಮಾತ್ರ ಪ್ರಯೋಜನ ನೀಡುವುದಿಲ್ಲ. ಇದು ಸಮಾಜ ಮತ್ತು ರಾಷ್ಟ್ರವನ್ನು ಅಭಿವೃದ್ಧಿಪಡಿಸುತ್ತದೆ. ಜ್ಞಾನವು ಶಕ್ತಿಯಾಗಿದೆ ಮತ್ತು ಈ ಶಕ್ತಿಯನ್ನು ಅಳವಡಿಸಿಕೊಳ್ಳುವುದು ನಿಮ್ಮ ಧ್ಯೇಯವಾಗಿರಬೇಕು' ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT