ಬಾಂಗ್ಲಾದೇಶ ಮಾಜಿ ಪ್ರಧಾನಿ ಶೇಖ್ ಹಸೀನಾ  online desk
ದೇಶ

ಬಾಂಗ್ಲಾದಲ್ಲಿ ಮತ್ತೆ ಕ್ಷಿಪ್ರ ಕ್ರಾಂತಿ: ಬಾಂಗ್ಲಾದೇಶಕ್ಕೆ ಶೀಘ್ರವೇ ತೆರಳಲು ಶೇಖ್ ಹಸೀನಾ ಯೋಜನೆ!

ಸುದ್ದಿ ಸಂಸ್ಥೆ ANI ಜೊತೆ ಮಾತನಾಡುತ್ತಾ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರನ್ನು "ಅವರು ಎಲ್ಲಿಂದ ಬಂದರೋ ಅಲ್ಲಿಗೆ ಹಿಂತಿರುಗಿ" ಎಂದು ಅವರು ಒತ್ತಾಯಿಸಿದ್ದಾರೆ.

ಪದಚ್ಯುತ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಮತ್ತು ಯುನೈಟೆಡ್ ಸ್ಟೇಟ್ಸ್ ಅವಾಮಿ ಲೀಗ್ ಉಪಾಧ್ಯಕ್ಷೆ ರಬ್ಬಿ ಆಲಂ ಶೀಘ್ರವೇ ಅವರ ಪದವಿಗಳೊಂದಿಗೆ ದೇಶಕ್ಕೆ ಮರಳಲಿದ್ದಾರೆ ಎಂದು ಶೇಖ್ ಹಸೀನಾ ಆಪ್ತರೊಬ್ಬರು ಹೇಳಿದ್ದಾರೆ.

ಸುದ್ದಿ ಸಂಸ್ಥೆ ANI ಜೊತೆ ಮಾತನಾಡುತ್ತಾ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರನ್ನು "ಅವರು ಎಲ್ಲಿಂದ ಬಂದರೋ ಅಲ್ಲಿಗೆ ಹಿಂತಿರುಗಿ" ಎಂದು ಅವರು ಒತ್ತಾಯಿಸಿದ್ದಾರೆ.

ಬಾಂಗ್ಲಾದೇಶದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಆಲಂ, ಬಾಂಗ್ಲಾ ಮೇಲೆ "ದಾಳಿ" ನಡೆಯುತ್ತಿದೆ ಎಂದು ಹೇಳಿದರು ಮತ್ತು ಅಂತರರಾಷ್ಟ್ರೀಯ ಸಮುದಾಯವು ಕಾರ್ಯಪ್ರವೃತ್ತವಾಗಬೇಕು ಎಂದು ಒತ್ತಾಯಿಸಿದರು.

"ಬಾಂಗ್ಲಾದೇಶ ದಾಳಿಗೆ ಒಳಗಾಗಿದೆ, ಮತ್ತು ಅದನ್ನು ಅಂತರರಾಷ್ಟ್ರೀಯ ಸಮುದಾಯವು ಪರಿಹರಿಸಬೇಕಾಗಿದೆ. ರಾಜಕೀಯ ದಂಗೆಯಾಗಿದ್ದಿದ್ದರೆ ಅದು ಸರಿ, ಆದರೆ ಬಾಂಗ್ಲಾದೇಶದಲ್ಲಿ ಅದು ನಡೆಯುತ್ತಿಲ್ಲ. ಇದು ಭಯೋತ್ಪಾದಕ ದಂಗೆ" ಎಂದು ಅವರು ANI ಗೆ ತಿಳಿಸಿದ್ದಾರೆ.

'ಪ್ರಧಾನಿ ಮೋದಿಗೆ ಧನ್ಯವಾದಗಳು'

ಶೇಖ್ ಹಸೀನಾ ಅವರಿಗೆ "ಸುರಕ್ಷಿತ" ಪ್ರಯಾಣ ಮಾರ್ಗವನ್ನು ಒದಗಿಸಿದ್ದಕ್ಕಾಗಿ ಆಲಂ ಭಾರತ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಗೆ ಕೃತಜ್ಞತೆ ಸಲ್ಲಿಸಿದರು, ಅನೇಕ ಬಾಂಗ್ಲಾದೇಶಿ ನಾಯಕರು ಭಾರತದಲ್ಲಿ ಆಶ್ರಯ ಪಡೆದಿದ್ದಾರೆ ನಮ್ಮ ಅನೇಕ ನಾಯಕರಿಗೆ ಭಾರತದಲ್ಲಿ ಆಶ್ರಯ ನೀಡಲಾಗಿದೆ, ಆಶ್ರಯ ಒದಗಿಸಿದ್ದಕ್ಕಾಗಿ ನಾವು ಭಾರತ ಸರ್ಕಾರಕ್ಕೆ ತುಂಬಾ ಕೃತಜ್ಞರಾಗಿರುತ್ತೇವೆ. ನಮ್ಮ ಪ್ರಧಾನಿ ಶೇಖ್ ಹಸೀನಾ ಅವರಿಗೆ ಸುರಕ್ಷಿತ ಪ್ರಯಾಣ ಮಾರ್ಗವನ್ನು ಒದಗಿಸಿದ್ದಕ್ಕಾಗಿ ನಾನು ಪ್ರಧಾನಿ ನರೇಂದ್ರ ಮೋದಿಯವರಿಗೂ ಧನ್ಯವಾದ ಹೇಳುತ್ತೇನೆ. ನಾವು ಭಾರತದ ಜನರಿಗೆ ಕೃತಜ್ಞರಾಗಿರುತ್ತೇವೆ" ಎಂದು ಆಲಂ ಹೇಳಿದ್ದಾರೆ.

ಶೇಖ್ ಹಸೀನಾ ಮತ್ತೆ ಪ್ರಧಾನಿಯಾಗಲಿದ್ದಾರೆ

ಮುಹಮ್ಮದ್ ಯೂನಸ್ ಬಗ್ಗೆ ತಮ್ಮ ತಿರಸ್ಕಾರವನ್ನು ವ್ಯಕ್ತಪಡಿಸಿದ ಅವರು, ಯೂನಸ್ ಬಾಂಗ್ಲಾದೇಶಕ್ಕೆ ಸೇರಿದವರಲ್ಲ ಮತ್ತು ಶೇಖ್ ಹಸೀನಾ "ಪ್ರಧಾನಿಯಾಗಿ ಹಿಂತಿರುಗುತ್ತಿರುವುದರಿಂದ ಯೂನಸ್ ಎಲ್ಲಿಂದ ಬಂದರು ಅಲ್ಲಿಗೆ ವಾಪಸ್ ಹೋಗಬೇಕೆಂದು ಹೇಳಿದರು.

"ಬಾಂಗ್ಲಾದೇಶ ಸಲಹೆಗಾರರನ್ನು ನೀವು ಎಲ್ಲಿಂದ ಬಂದಿದ್ದೀರಿ ಎಂದು ನಾವು ಕೇಳಲು ಬಯಸುತ್ತೇವೆ. ನೀವು, ಡಾ. ಯೂನಸ್, ಬಾಂಗ್ಲಾದೇಶಕ್ಕೆ ಸೇರಿದವರಲ್ಲ. "ಶೇಖ್ ಹಸೀನಾ ಮತ್ತೆ ಪ್ರಧಾನಿಯಾಗಲಿದ್ದಾರೆ ಎಂಬ ಸಂದೇಶ ಬಾಂಗ್ಲಾದೇಶದ ಜನರಿಗೆ ಇದೆ," ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT