ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾ ಇತ್ತೀಚಿಗೆ ಪೋಷಕರ 'ಸೆಕ್ಸ್' ಕುರಿತಂತೆ 'ಕೊಳಕು' ಜೋಕ್ ಮಾಡಿ ತೀವ್ರ ವಿವಾದಕ್ಕೆ ಗುರಿಯಾದ ಬೆನ್ನಲ್ಲೇ ಮಹಿಳಾ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಸ್ವಾತಿ ಸಚ್‌ದೇವ ಸೆಕ್ಸ್ ಟಾಯ್ ಬಗ್ಗೆ ತನ್ನ ತಾಯಿಯ ಪ್ರತಿಕ್ರಿಯೆಯನ್ನು ಜೋಕ್ ಮಾಡಿರುವ ವಿಡಿಯೋ ವೈರಲ್ ಆಗಿದ್ದು, ಭಾರಿ ಚರ್ಚೆ ಹಾಗೂ ಟೀಕೆಗೆ ಗುರಿಯಾಗಿದ್ದಾರೆ.
ಸ್ವಾತಿ ಸಚ್‌ದೇವ ಮನೆಯಲ್ಲಿ ಇತ್ತೀಚಿಗೆ ವೈಬ್ರೇಟರ್ (sex toy) ಇರುವುದು ಗೊತ್ತಾದ ನಂತರ ತಾಯಿಯ ಪ್ರತಿಕ್ರಿಯೆ ಕುರಿತ ಸಚ್ ದೇವ ಅವರ ವೇದಿಕೆ ಪ್ರದರ್ಶನದ ವಿಡಿಯೋ ಕ್ಲಿಪ್ ಶನಿವಾರ ವೈರಲ್ ಆಗಿದೆ. ಕೆಲವರು ಅದನ್ನು ಹಾಸ್ಯದ ರೀತಿಯಲ್ಲಿ ಸ್ವೀಕರಿಸಿದ್ದರೆ ಮತ್ತೆ ಕೆಲವರು, ಮಿತಿ ಮೀರಿದ ಹಾಸ್ಯ ಎಂದು ಟೀಕಿಸುತ್ತಿದ್ದಾರೆ.
ಬಿಯರ್ ಬೈಸೆಪ್ಸ್ ಸೇರಿದಂತೆ ಹಲವಾರು ಯೂಟ್ಯೂಬ್ ಚಾನೆಲ್‌ಗಳನ್ನು ನಡೆಸುತ್ತಿರುವ ಅಲ್ಲಾಬಾಡಿಯಾ, ರೈನಾ ನಡೆಸಿಕೊಡುವ 'ಇಂಡಿಯಾಸ್ ಗಾಟ್ ಲ್ಯಾಟೆಂಟ್' ಕಾರ್ಯಕ್ರಮದಲ್ಲಿ ಪೋಷಕರ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು. ಅಲ್ಲಾಬಾಡಿಯಾ ಟೀಕೆ ಎದುರಿಸುತ್ತಿರುವಾಗಲೇ ಸ್ವಾತಿ ಸಚ್‌ದೇವ ಅವರ ಹಾಸ್ಯ, ಮಿತಿ ಹಾಗೂ ಕುಟುಂಬದ ವಿಚಾರ ಬಂದಾಗ ಹೇಗಿರಬೇಕು ಎಂಬುದಾಗಿ ಆನ್ ಲೈನ್ ನಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.
"ನನ್ನ ತಾಯಿ ಕೂಲ್ ಅಮ್ಮನಾಗಲು ಪ್ರಯತ್ನಿಸುತ್ತಿದ್ದಾಳೆ. ಆದರೆ ಅದು ಆಗುತ್ತಿಲ್ಲ. ನನ್ನ ವೈಬ್ರೇಟರ್ ನ್ನು ( sex toy)ಅವರು ನೋಡಿದ ನಂತರ ನನಗೆ ದೊಡ್ಡ ದುರಂತವೇ ಆಯಿತು. ಸಂಪೂರ್ಣ ಆತ್ಮವಿಶ್ವಾಸದೊಂದಿಗೆ ನನ್ನ ಬಳಿಗೆ ಬಂದು ಸ್ನೇಹಿತೆ ಜೊತೆಗೆ ಮಾತನಾಡುವಂತೆ ಮಾಡಿದಳು. ಆಕೆ ಖಂಡಿತವಾಗಿಯೂ ನನ್ನ ವೈಬ್ರೇಟರ್ ಕೇಳುತ್ತಾಳೆ ಅಂದುಕೊಂಡಿದ್ದೆ. ಆಕೆ ಅದನ್ನು ಗ್ಯಾಜೆಟ್, ಆಟಿಕೆ ಎನ್ನಲು ಶುರು ಮಾಡಿದರು. ಬೆವರಿನೊಂದಿಗೆ ನಾನು, ಅಮ್ಮಾ ಇದು ಅಪ್ಪಾನಿಗೆ ಸೇರಿದ್ದು ಅಂದೆ. ನಾನ್ ಸೆನ್ಸ್ ಆಗಿ ಮಾತನಾಡಬೇಡ, ಅವರ ಆಯ್ಕೆ ನನಗೆ ಗೊತ್ತು ಎಂದು ಹೇಳಿದರು. ತದನಂತರ ನನ್ನ ತಾಯಿ ಅದನ್ನು ಹೊರಗೆ ತಂದು ನನ್ನನ್ನು ಕೇಳಲು ಪ್ರಾರಂಭಿಸಿದರು ಎಂದು ಸ್ವಾತಿ ಸಚ್‌ದೇವಾ ವೈರಲ್ ವೀಡಿಯೊ ಕ್ಲಿಪ್‌ನಲ್ಲಿ ಹೇಳಿದ್ದಾರೆ.
ಈ ವಿಡಿಯೋ ವೀಕ್ಷಿಸಿದ ಎಕ್ಸ್ ಬಳಕೆದಾರರೊಬ್ಬರು, ನಾಚಿಕೆಯಿಲ್ಲದ ಸ್ವಾತಿ ಸಚ್‌ದೇವ, ಹಾಸ್ಯದ ಹೆಸರಿನಲ್ಲಿ ಅಶ್ಲೀಲತೆಯನ್ನು ಹರಡುವುದರಲ್ಲಿ ನಿರತಳಾಗಿದ್ದಾಳೆ. ಹಣದ ವ್ಯಾಮೋಹದಲ್ಲಿ ತನ್ನ ಹೆತ್ತವರನ್ನು ಸಹ ಬಿಡುತ್ತಿಲ್ಲ. ನಾಚಿಕೆಯಿಲ್ಲದವಳು ಎಂದು ಆಕ್ರೋಶ ಕಿಡಿಕಾರಿದ್ದಾರೆ.
ಮತ್ತೊಬ್ಬ ಬಳಕೆದಾರರು, ಸ್ವಾತಿ ಸಚ್‌ದೇವ ಅವರು ದೆಹಲಿಯವರು ಮತ್ತು AMITY ನಲ್ಲಿ ಓದಿದ್ದಾರೆ. ಆಕೆಗೆ ಉತ್ತಮ ಕೆಲಸ ಸಿಕ್ಕಿಲ್ಲ. ಹೀಗಾಗಿ ವಯಸ್ಕರರ ಕಂಟೆಂಟ್ ನೊಂದಿಗೆ ಹಾಸ್ಯ ಮಾಡಲು ಶುರು ಮಾಡಿದ್ದಾರೆ. ಸ್ವಂತ ತಾಯಿಯನ್ನು ನಿಂದಿಸಿ, ಹಣ, ಖ್ಯಾತಿ ಗಳಿಸಲು ಬಯಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.