ನೂಡಲ್ಸ್ ತಿನ್ನುತ್ತಿದ್ದ ಪ್ರೇಮಿಗಳಿಗೆ ಪೋಷಕರಿಂದಲೇ ಧರ್ಮದೇಟು 
ದೇಶ

'ಪ್ರೇಯಸಿ ಜೊತೆ ನೂಡಲ್ಸ್ ತಿನ್ನುತ್ತಿದ್ದ ಪ್ರೇಮಿಗೆ ಪೋಷಕರಿಂದಲೇ ಧರ್ಮದೇಟು'; Video Viral

ಉತ್ತರ ಪ್ರದೇಶದ ಕಾನ್ಪುರದಲ್ಲಿ ಈ ಘಟನೆ ನಡೆದಿದ್ದು, 21 ವರ್ಷದ ಯುವಕ ರೋಹಿತ್ ಮತ್ತು ಆತನ 19 ವರ್ಷದ ಪ್ರೇಯಸಿಯನ್ನು ಶುಕ್ರವಾರ ಪೋಷಕರು ಸಾರ್ವಜನಿಕವಾಗಿ ಥಳಿಸಿದ ಘಟನೆ ನಡೆದಿದೆ.

ಕಾನ್ಪುರ: ತುಂಬಿದ ಮಾರುಕಟ್ಟೆಯಲ್ಲಿ ಪ್ರೇಯಸಿ ಜೊತೆ ನೂಡಲ್ಸ್ ತಿನ್ನುತ್ತಿದ್ದ ಪುತ್ರನಿಗೆ ಆತನ ಪೋಷಕರೇ ಧರ್ಮದೇಟು ನೀಡುತ್ತಿರುವ ವಿಡಿಯೊವೊಂದು ವ್ಯಾಪಕ ವೈರಲ್ ಆಗುತ್ತಿದೆ.

ಉತ್ತರ ಪ್ರದೇಶದ ಕಾನ್ಪುರದಲ್ಲಿ ಈ ಘಟನೆ ನಡೆದಿದ್ದು, 21 ವರ್ಷದ ಯುವಕ ರೋಹಿತ್ ಮತ್ತು ಆತನ 19 ವರ್ಷದ ಪ್ರೇಯಸಿಯನ್ನು ಶುಕ್ರವಾರ ಪೋಷಕರು ಸಾರ್ವಜನಿಕವಾಗಿ ಥಳಿಸಿದ ಘಟನೆ ನಡೆದಿದೆ. ಇಲ್ಲಿನ ಗುಜೈನಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಮ್‌ಗೋಪಾಲ್ ಜಂಕ್ಷನ್ ನಲ್ಲಿ ಈ ಘಟನೆ ನಡೆದಿದ್ದು, ಈ ಘಟನೆಯ ವಿಡಿಯೋ ವೈರಲ್ ಆಗಿದೆ.

ಪೊಲೀಸರ ಪ್ರಕಾರ, ರೋಹಿತ್ ಎಂಬ ವ್ಯಕ್ತಿ ತನ್ನ ಗೆಳತಿಯೊಂದಿಗೆ ನೂಡಲ್ಸ್ ತಿನ್ನುತ್ತಿದ್ದಾಗ ಆತನ ಹೆತ್ತವರಾದ ಶಿವಕರನ್ ಮತ್ತು ಸುಶೀಲಾ ಸ್ಥಳಕ್ಕೆ ಬಂದರು. ಈ ವೇಳೆ ರೋಹಿತ್ ನೊಂದಿಗೆ ಅವರು ಜಗಳ ಮಾಡಿದ್ದು, ನೋಡ ನೋಡುತ್ತಲೇ ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಇದನ್ನು ತಡೆಯಲು ಬಂದ ಆತನ ಪ್ರೇಯಸಿ ಮೇಲೂ ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಮೂಲಗಳ ಪ್ರಕಾರ ರೋಹಿತ್ ಪ್ರೀತಿಯನ್ನು ಆತನ ಪೋಷಕರು ಒಪ್ಪಿರಲಿಲ್ಲ. ಅದಾಗ್ಯೂ ರೋಹಿತ್ ತನ್ನ ಪ್ರೀತಿ ಮುಂದುವರೆಸಿದ್ದ. ಶುಕ್ರವಾರ ರಾಮ್‌ಗೋಪಾಲ್ ಜಂಕ್ಷನ್ ನಲ್ಲಿ ಇಬ್ಬರೂ ಮತ್ತೆ ಸೇರಿದ್ದಾಗ ಅಲ್ಲಿಯೇ ಇದ್ದ ಪೋಷಕರು ಇದನ್ನು ನೋಡಿ ಗಲಾಟೆ ಮಾಡಿದ್ದಾರೆ. ಈ ವಿಚಾರ ತಿಳಿಯುತ್ತಲೇ ಸ್ಥಳಕ್ಕಾಗಮಿಸಿದ ಪೊಲೀಸರು ಇಬ್ಬರನ್ನೂ ಕರೆಸಿ ಬುದ್ದಿವಾದ ಹೇಳಿ ಕಳುಹಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಮುಂದಿನ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ" ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವೈರಲ್ ವಿಡಿಯೋ

ಪ್ರಸ್ತುತ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ರೋಹಿತ್ ಮತ್ತು ಆಕೆಯ ಪ್ರೇಯಸಿ ದ್ವಿಚಕ್ರವಾಹನದಲ್ಲಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾಗ ರೋಹಿತ್ ತಾಯಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಬಳಿಕ ನೋಡ ನೋಡುತ್ತಲೇ ತಾಯಿ ಸುಶೀಲಾ ರೋಹಿತ್ ಗೆ ಥಳಿಸಿದ್ದಾರೆ. ಈ ವೇಳೆ ಸ್ಥಳೀಯ ನಿವಾಸಿಗಳು ಮತ್ತು ದಾರಿಹೋಕರು ಇಬ್ಬರನ್ನೂ ಬೇರ್ಪಡಿಸಲು ಪ್ರಯತ್ನಿಸುತ್ತಿರುವಾಗ, ಸುಶೀಲಾ ಯುವತಿಯ ಕೂದಲನ್ನು ಹಿಡಿದು ಹಲ್ಲೆ ನಡೆಸುತ್ತಿರುವುದನ್ನು ಸಹ ಕಾಣಬಹುದು. ರೋಹಿತ್‌ನ ತಂದೆ ಕೂಡ ಆತನಿಗೆ ಚಪ್ಪಲಿಯಿಂದ ಹೊಡೆಯುತ್ತಿರುವುದು ಕಂಡುಬರುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ತೀವ್ರ ವಿರೋಧದ ನಡುವೆಯೂ ಬಾನು ಮುಷ್ತಾಕ್ ಗೆ ದಸರಾ ಉದ್ಘಾಟನೆಗೆ ಜಿಲ್ಲಾಡಳಿತ ಅಧಿಕೃತ ಆಹ್ವಾನ! Video

ಪಾಕ್ ಹುಟ್ಟಡಗಿಸಿದ್ದ 'Game-Changer': ಭಾರತದ ಬತ್ತಳಿಕೆ ಸೇರಲಿವೆ ಮತ್ತಷ್ಟು S-400 ಏರ್ ಡಿಫೆನ್ಸ್ ಸಿಸ್ಟಮ್ಸ್!

Indian Stock Market: GST ಕೌನ್ಸಿಲ್ ಸಭೆ ಎಫೆಕ್ಟ್, Sensex 410 ಅಂಕ ಏರಿಕೆ, ರೂಪಾಯಿ ಮೌಲ್ಯವೂ ಏರಿಕೆ!

Dharmasthala: ಸೌಜನ್ಯಾ ಪ್ರಕರಣದಲ್ಲಿ SIT ಮುಂದೆ ಹಾಜರಾದ Uday jain ಹೇಳಿದ್ದೇನು?

ವಿದೇಶಿಗರಿಂದ ಧರ್ಮೋಪದೇಶ ನಿಷೇಧ: ಮಿಲಾದ್-ಉನ್-ನಬಿ ಆಯೋಜಕರಿಗೆ ಪರಮೇಶ್ವರ ಸ್ಪಷ್ಟನೆ

SCROLL FOR NEXT