ಸುಪ್ರೀಂಕೋರ್ಟ್ 
ದೇಶ

ದೇಶದ ಮೀಸಲಾತಿ ರೈಲಿನ ಕಂಪಾರ್ಟ್ ಮೆಂಟ್ ಇದ್ದಂತೆ; ಒಳಗಡೆ ಇದ್ದವರು ಇತರರು ಒಳಗೆ ಬರಲು ಬಯಸಲ್ಲ- ಸುಪ್ರೀಂ ಕೋರ್ಟ್

ನಾಲ್ಕು ತಿಂಗಳಲ್ಲಿ ಚುನಾವಣೆಯನ್ನು ಪೂರ್ಣಗೊಳಿಸಲು ರಾಜ್ಯ ಚುನಾವಣಾ ಆಯೋಗಕ್ಕೆ ಆದೇಶಿಸಿದ ನ್ಯಾಯಪೀಠ, ಸೂಕ್ತ ಪ್ರಕರಣಗಳಲ್ಲಿ ಹೆಚ್ಚಿನ ಸಮಯ ಪಡೆಯಲು ರಾಜ್ಯ ಚುನಾವಣಾ ಆಯೋಗಕ್ಕೆ (ಎಸ್‌ಇಸಿ) ಸ್ವಾತಂತ್ರ್ಯವನ್ನು ನೀಡಿತು.

ನವದೆಹಲಿ: ದೇಶದಲ್ಲಿನ ಮೀಸಲಾತಿಯನ್ನು ಮಂಗಳವಾರ ಒಂದು ರೈಲಿಗೆ ಹೋಲಿಸಿದ ಸುಪ್ರೀಂಕೋರ್ಟ್, ಕಂಪಾರ್ಟ್‌ಮೆಂಟ್‌ ಒಳಗಡೆ ಕುಳಿತವರು ಇತರರು ಒಳಗಡೆ ಬರಲು ಬಯಸುವುದಿಲ್ಲ ಎಂದು ಹೇಳಿತು.

ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇತರ ಹಿಂದುಳಿದ ವರ್ಗ (ಒಬಿಸಿ) ಮೀಸಲಾತಿ ವಿರೋಧಿಸುವ ಅರ್ಜಿ ಕುರಿತ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರನ್ನೊಳಗೊಂಡ ನ್ಯಾಯ ಪೀಠ ಈ ರೀತಿ ಅಭಿಪ್ರಾಯಪಟ್ಟಿತು.

ಅರ್ಜಿದಾರರಾದ ಮಂಗೇಶ್ ಶಂಕರ್ ಸಾಸಾನೆ ಪರ ವಾದ ಮಂಡಿಸಿದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಅವರು, ಒಬಿಸಿ ಸಮುದಾಯ ರಾಜಕೀಯವಾಗಿ ಹಿಂದುಳಿದಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳದೆ ಮಹಾರಾಷ್ಟ್ರ ಸರ್ಕಾರದ ಜಯಂತ್ ಕುಮಾರ್ ಬಂಥಿಯಾ ನೇತೃತ್ವದ ಆಯೋಗವು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆ ಸಮುದಾಯಕ್ಕೆ ಶೇಕಡಾ 27 ರಷ್ಟು ಮೀಸಲಾತಿ ನೀಡಿದೆ ಎಂದು ಹೇಳಿದರು.

ಶಂಕರನಾರಾಯಣನ್ ಅವರತ್ತ ತಿರುಗಿದ ನ್ಯಾಯಮೂರ್ತಿ ಕಾಂತ್, "ವಿಷಯ ಏನೆಂದರೆ, ಈ ದೇಶದಲ್ಲಿ, ಮೀಸಲಾತಿ ವ್ಯವಹಾರವು ರೈಲ್ವೆಯಂತಾಗಿದೆ. ಕಂಪಾರ್ಟ್‌ಮೆಂಟ್‌ಗೆ ಪ್ರವೇಶಿಸಿದವರು ಬೇರೆಯವರು ಬರಲು ಬಯಸುವುದಿಲ್ಲ. ಇದು ಇಡೀ ಆಟವಾಗಿದೆ. ಇದು ನಿಸ್ಸಂಶಯವಾಗಿ ಅರ್ಜಿದಾರರ ಆಟವೂ ಆಗಿದೆ ಎಂದರು.

ಕಂಪಾರ್ಟ್‌ಮೆಂಟ್‌ಗಳನ್ನು ಹಿಂಭಾಗದಲ್ಲಿಯೂ ಸೇರಿಸಲಾಗುತ್ತಿದೆ. OBC ಗಳು ರಾಜಕೀಯವಾಗಿ ಹಿಂದುಳಿದಿದ್ದಾರೆ ಎಂದು ಸ್ವಯಂಪ್ರೇರಿತವಾಗಿ ಊಹಿಸಲಾಗುವುದಿಲ್ಲ." OBC ಗಳಲ್ಲಿ, ರಾಜಕೀಯವಾಗಿ ಹಿಂದುಳಿದ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗಗಳನ್ನು ಮೀಸಲಾತಿಯ ಉದ್ದೇಶಕ್ಕಾಗಿ ಗುರುತಿಸಬೇಕು ಎಂದು ಹೇಳಿದರು.

ರಾಜ್ಯಗಳು ಹೆಚ್ಚಿನ ವರ್ಗಗಳನ್ನು ಗುರುತಿಸಲು ಬದ್ಧವಾಗಿರುತ್ತವೆ. ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳು ಇರುತ್ತವೆ. ಅವರೇಕೆ ಪ್ರಯೋಜನದಿಂದ ವಂಚಿತರಾಗಬೇಕು? ಇದನ್ನು ಒಂದು ನಿರ್ದಿಷ್ಟ ಕುಟುಂಬ ಅಥವಾ ಗುಂಪಿಗೆ ಏಕೆ ಸೀಮಿತಗೊಳಿಸಬೇಕು? ಎಂದು ನ್ಯಾಯಮೂರ್ತಿ ಕಾಂತ್ ಪ್ರಶ್ನಿಸಿದರು.

ಅರ್ಜಿಯ ಮೇಲೆ ನೋಟಿಸ್ ಜಾರಿ ಮಾಡಿದ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರದ ಪ್ರತಿಕ್ರಿಯೆಯನ್ನು ಕೇಳಿದೆ. ಇದೇ ವೇಳೆ ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿ ಮೀಸಲಾತಿಗೆ ಸಂಬಂಧಿಸಿದ ಮತ್ತೊಂದು ವಿಷಯದಲ್ಲಿ 2022 ರ ಬಂಥಿಯಾ ಆಯೋಗದ ವರದಿಯ ಹಿಂದಿನ ಅವಧಿಗೆ ಅನುಗುಣವಾಗಿ ನಾಲ್ಕು ವಾರಗಳಲ್ಲಿ ಚುನಾವಣೆಗಳನ್ನು ನಡೆಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ನ್ಯಾಯ ಪೀಠ ಆದೇಶಿಸಿದೆ.

ನಾಲ್ಕು ತಿಂಗಳಲ್ಲಿ ಚುನಾವಣೆಯನ್ನು ಪೂರ್ಣಗೊಳಿಸಲು ರಾಜ್ಯ ಚುನಾವಣಾ ಆಯೋಗಕ್ಕೆ ಆದೇಶಿಸಿದ ನ್ಯಾಯಪೀಠ, ಸೂಕ್ತ ಪ್ರಕರಣಗಳಲ್ಲಿ ಹೆಚ್ಚಿನ ಸಮಯ ಪಡೆಯಲು ರಾಜ್ಯ ಚುನಾವಣಾ ಆಯೋಗಕ್ಕೆ (ಎಸ್‌ಇಸಿ) ಸ್ವಾತಂತ್ರ್ಯವನ್ನು ನೀಡಿತು.

ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶವು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿರುವ ಅರ್ಜಿಗಳ ನಿರ್ಧಾರಗಳಿಗೆ ಒಳಪಟ್ಟಿರುತ್ತದೆ ಎಂದು ಅದು ಹೇಳಿದೆ. ಈ ಹಿಂದೆ ಆಗಸ್ಟ್ 22, 2022 ರಂದು, ರಾಜ್ಯದ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ರಾಜ್ಯ ಚುನಾವಣಾ ಆಯೋಗ ಮತ್ತು ಮಹಾರಾಷ್ಟ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT