ವಶಪಡಿಸಿಕೊಂಡ ವಸ್ತುಗಳು 
ದೇಶ

ಸಂಗ್ರೂರ್ ಜೈಲಿನಲ್ಲಿ ಡ್ರಗ್ಸ್ ಜಾಲ ಭೇದಿಸಿದ ಪಂಜಾಬ್ ಪೊಲೀಸರು; ಡಿಎಸ್ಪಿ ಸೇರಿ 18 ಜನರ ಬಂಧನ

ಸಂಗ್ರೂರ್ ಜೈಲಿನಲ್ಲಿ ನಿಯೋಜಿಸಲಾಗಿದ್ದ ಉಪ ಪೊಲೀಸ್ ವರಿಷ್ಠಾಧಿಕಾರಿ(ಡಿಎಸ್ಪಿ-ಭದ್ರತಾ) ಗುರುಪ್ರೀತ್ ಸಿಂಗ್ ಅವರನ್ನು ಜೈಲಿನೊಳಗಿಂದಲೇ ಕಾರ್ಯನಿರ್ವಹಿಸುತ್ತಿದ್ದ ಮಾದಕವಸ್ತು ಕಳ್ಳಸಾಗಣೆ ಜಾಲದಲ್ಲಿ ಭಾಗಿಯಾದ ಆರೋಪದ ಮೇಲೆ ಬಂಧಿಸಲಾಗಿದೆ.

ಚಂಡೀಗಢ: ಪಂಜಾಬ್ ಪೊಲೀಸರು ಸಂಗ್ರೂರ್ ಜೈಲಿನಿಂದ ಕಾರ್ಯನಿರ್ವಹಿಸುತ್ತಿದ್ದ ಸುಸಂಘಟಿತ ಡ್ರಗ್ಸ್ ಕಳ್ಳಸಾಗಣೆ ಜಾಲವನ್ನು ಭೇದಿಸಿದ್ದು, ಜೈಲಿನ ಉಪ ಪೊಲೀಸ್ ವರಿಷ್ಠಾಧಿಕಾರಿ(ಭದ್ರತಾ) ಸೇರಿದಂತೆ 18 ಜನರನ್ನು ಬಂಧಿಸಿದ್ದಾರೆ.

ಸಂಗ್ರೂರ್ ಜೈಲಿನಲ್ಲಿ ನಿಯೋಜಿಸಲಾಗಿದ್ದ ಉಪ ಪೊಲೀಸ್ ವರಿಷ್ಠಾಧಿಕಾರಿ(ಡಿಎಸ್ಪಿ-ಭದ್ರತಾ) ಗುರುಪ್ರೀತ್ ಸಿಂಗ್ ಅವರನ್ನು ಜೈಲಿನೊಳಗಿಂದಲೇ ಕಾರ್ಯನಿರ್ವಹಿಸುತ್ತಿದ್ದ ಮಾದಕವಸ್ತು ಕಳ್ಳಸಾಗಣೆ ಜಾಲದಲ್ಲಿ ಭಾಗಿಯಾದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪಂಜಾಬ್ ಪೊಲೀಸ್ ಮಹಾನಿರ್ದೇಶಕ(ಡಿಜಿಪಿ) ಗೌರವ್ ಯಾದವ್ ಅವರು ದೃಢಪಡಿಸಿದ್ದಾರೆ.

"ವಿಶ್ವಾಸಾರ್ಹ ಗುಪ್ತಚರ ಮಾಹಿತಿಯ ಮೇರೆಗೆ, ಸಂಗ್ರೂರ್ ಜೈಲಿನೊಳಗೆ ನಡೆಸಿದ ದಾಳಿಯಲ್ಲಿ 12 ಮೊಬೈಲ್ ಫೋನ್‌ಗಳು, ನಾಲ್ಕು ಸ್ಮಾರ್ಟ್‌ವಾಚ್‌ಗಳು, 50 ಗ್ರಾಂ ಅಫೀಮು, 12 ಗ್ರಾಂ ಹೆರಾಯಿನ್ ಮತ್ತು ಇತರ ನಿಷಿದ್ಧ ವಸ್ತುಗಳು ಪತ್ತೆಯಾಗಿವೆ.

ಪ್ರಾಥಮಿಕ ತನಿಖೆಯಲ್ಲಿ ಪರ್ಶಾಂತ್ ಎಂದು ಗುರುತಿಸಲಾದ ಜೈಲಿನ ಉದ್ಯೋಗಿ ಸಹ ಭಾಗಿಯಾಗಿರುವುದು ಪತ್ತೆಯಾಗಿದ್ದು, ಡ್ರಗ್ಸ್ ಕಳ್ಳಸಾಗಣೆ ಚಟುವಟಿಕೆಗೆ ಅನುಕೂಲ ಮಾಡಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ" ಎಂದು ಯಾದವ್ ಹೇಳಿದ್ದಾರೆ.

ಸಂಗ್ರೂರ್ ಜೈಲಿನಲ್ಲಿರುವ ಕೈದಿ ಗುರ್ವಿಂದರ್ ಸಿಂಗ್ ಅವರ ಸಹಚರ ಅಮೃತಸರ ಮೂಲದ ಮಾದಕವಸ್ತು ಕಳ್ಳಸಾಗಣೆದಾರ ಮನ್ಪ್ರೀತ್ ಸಿಂಗ್ ಅವರನ್ನು ಸಹ ಬಂಧಿಸಲಾಗಿದೆ. ಮನ್‌ಪ್ರೀತ್ ಬಳಿಯಿದ್ದ 4 ಕೆಜಿ ಹೆರಾಯಿನ್, 5.5 ಲಕ್ಷ ರೂ. ಹಣ ಮತ್ತು ಎರಡು ಜೀವಂತ ಕಾರ್ಟ್ರಿಡ್ಜ್‌ಗಳೊಂದಿಗೆ 9 ಎಂಎಂ ಗ್ಲಾಕ್ ಪಿಸ್ತೂಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ತನಿಖೆ ಮುಂದುವರೆದಿದ್ದು, ಮತ್ತಷ್ಟು ಜನರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಡಿಜಿಪಿ ಗೌರವ್ ಯಾದವ್ ಅವರು ತಿಳಿಸಿದ್ದಾರೆ.

ಯಾವುದೇ ವ್ಯಕ್ತಿ, ಹುದ್ದೆ ಅಥವಾ ಸ್ಥಾನಮಾನವನ್ನು ಲೆಕ್ಕಿಸದೆ, ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಕಂಡುಬಂದರೆ ಯಾರನ್ನೂ ಬಿಡುವುದಿಲ್ಲ ಎಂದು ಡಿಜಿಪಿ ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West Asia war: ಕುವೈತ್‌ ಪ್ರಮುಖ ತೈಲ ಶುದ್ಧೀಕರಣ ಘಟಕದ ಮೇಲೆ ಇರಾನ್ ಡ್ರೋನ್ ದಾಳಿ, ಭಾರೀ ಬೆಂಕಿ

ಇಂಧನ ಮೂಲಸೌಕರ್ಯಗಳ ಮೇಲೆ ದಾಳಿ ಬೇಡ: ಟ್ರಂಪ್ ಸೂಚನೆ ಬೆನ್ನಲ್ಲೇ ಹಿಂದೆ ಸರಿದ ಇಸ್ರೇಲ್, ಇರಾನ್ 'ನಾಶವಾಗಿದೆ' ಎಂದ ನೆತನ್ಯಾಹು

ಇಂಧನ ಮೂಲಸೌಕರ್ಯದ ಮೇಲೆ ದಾಳಿ ಮಾಡಿ ದೊಡ್ಡ ತಪ್ಪು ಮಾಡಿದ್ದೀರಿ, ಮತ್ತೆ ದಾಳಿಯಾದರೆ ಒತ್ತಡಕ್ಕೆ ಮಣಿಯದೆ ಅನಿಯಂತ್ರಿತ ದಾಳಿ: ಇರಾನ್ ಕಠಿಣ ಎಚ್ಚರಿಕೆ

West Asia war: ಇರಾನ್ ಗ್ಯಾಸ್ ಫೀಲ್ಡ್ ಮೇಲಿನ ದಾಳಿ ‘ಸೋಲೋ ಆಪರೇಷನ್’; ಅಮೆರಿಕಾ ಪಾತ್ರವಿಲ್ಲ- ಇಸ್ರೇಲ್ ಸ್ಪಷ್ಟನೆ

ಯುಗಾದಿ ಆಯ್ತು, ಇದೀಗ ಎಲ್ಲೆಡೆ ಹೊಸ ತೊಡಕು ಸಂಭ್ರಮ: ಮಾಂಸ ಖರೀದಿಗೆ ಪಾಪಣ್ಣ ಮಟನ್‌ ಸ್ಟಾಲ್‌ ಮುಂದೆ ಜನರ ಕ್ಯೂ..!

SCROLL FOR NEXT