ಪಾಕಿಸ್ತಾನದ ಶಾಹೀನ್ ಕ್ಷಿಪಣಿ ಮತ್ತು ಭಾರತದ S 400 ವಾಯು ರಕ್ಷಣಾ ವ್ಯವಸ್ಥೆ 
ದೇಶ

ಭಾರತದ ಮೇಲೆ ಪರಮಾಣು ದಾಳಿ ಯತ್ನ? ವಿಧ್ವಂಸಕ Shaheen ಕ್ಷಿಪಣಿ ಹೊಡೆದುರುಳಿಸಿದ Indian Army; ಪಾಕಿಸ್ತಾನ ಆರೋಪ ನಿರಾಕರಣೆ!

ಪಾಕಿಸ್ತಾನ ಶಹೀನ್ ಕ್ಷಿಪಣಿಯನ್ನು ಪ್ರಯೋಗಿಸಿ, ಭಾರತಕ್ಕೆ ದೊಡ್ಡ ಹಿನ್ನಡೆಯನ್ನು ತರಲು ಪಾಕಿಸ್ತಾನ ಪ್ರಯತ್ನಿಸಿತ್ತು. ನಮ್ಮ ರಕ್ಷಣಾ ವ್ಯವಸ್ಥೆಯು ಅದನ್ನು ಹಿಮ್ಮೆಟ್ಟಿಸಿತ್ತು.

ನವದೆಹಲಿ: ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ಈ ಹಿಂದೆ ಭಾರತೀಯ ಸೇನೆ ನಡೆಸಿದ್ದ ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಪಾಕಿಸ್ತಾನ ಭಾರತದ ಮೇಲೆ ಪರಮಾಣು ದಾಳಿಗೆ ಯತ್ನಿಸಿತ್ತೇ ಎಂಬ ಆಘಾತಕಾರಿ ಪ್ರಶ್ನೆ ಇದೀಗ ಉದ್ಭವಾಗಿದೆ.

ಇದಕ್ಕೆ ಕಾರಣ ಪಾಕಿಸ್ತಾನ ಸೇನೆಯ Shaheen ಕ್ಷಿಪಣಿ... ಹೌದು.. ಭಾರತೀಯ ಸೇನಾ ಮೂಲಗಳು ಈ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡಿದ್ದು, ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ಭಾರತ ನಡೆಸುತ್ತಿದ್ದ ವೇಳೆ, ಪಾಕಿಸ್ತಾನದ ಸೇನಾಪಡೆ ರಾಷ್ಟ್ರ ರಾಜಧಾನಿ ದೆಹಲಿಯನ್ನು ಗುರಿಯಾಗಿಸಿಕೊಂಡು ತನ್ನ ಬಲಿಷ್ಠ ಮತ್ತು ಅಣ್ವಸ್ತ್ರ ಸಿಡಿತಲೆ ಸಾಮರ್ಥ್ಯದ ಶಾಹೀನ್ (Shaheen) ಕ್ಷಿಪಣಿಯನ್ನು ಪ್ರಯೋಗಿಸಿತ್ತು ಎಂದು ಭಾರತೀಯ ಸೇನಾಧಿಕಾರಿಗಳು ಹೇಳಿದ್ದಾರೆ.

ಈ ಸಂಬಂಧ ವಿಡಿಯೋ ಬಿಡುಗಡೆ ಮಾಡಿದ್ದ ಭಾರತೀಯ ಸೇನೆಯ @westerncomd_IA ತನ್ನ ಅಧಿಕೃತ ಖಾತೆಯಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಸೇನೆ ಬಳಸಿದ್ದ ಕ್ಷಿಪಣಿಗಳಲ್ಲಿ ಶಾಹೀನ್ ಕೂಡ ಒಂದಾಗಿತ್ತು ಎಂದು ಹೇಳಿದೆ. ಆದರೆ ಬಳಿಕ ಈ ವಿಡಿಯೋವನ್ನು ಡಿಲೀಟ್ ಮಾಡಲಾಗಿದ್ದು ಆ ವಿಡಿಯೋ ಕೇವಲ ಪ್ರಾತಿನಿಧ್ಯ ಉದ್ದೇಶಗಳಿಗಾಗಿ ಬಳಸಲಾದ ಫೈಲ್ ದೃಶ್ಯಾವಳಿ ಎಂದು ಬರೆಯುವುದನ್ನು ಮರೆತಿತ್ತು. ಹೀಗಾಗಿ ಕೂಡಲೇ ಆ ವಿಡಿಯೋವನ್ನು ಖಾತೆಯಿಂದ ಡಿಲೀಟ್ ಮಾಡಲಾಯಿತು.

ವಿಧ್ವಂಸಕ Shaheen ಕ್ಷಿಪಣಿ ಹೊಡೆದುರುಳಿಸಿದ S-400

ಪಾಕಿಸ್ತಾನ ಈ ವಿಧ್ವಂಸಕ Shaheen ಕ್ಷಿಪಣಿಯನ್ನು ಭಾರತ ಸರ್ಕಾರ ರಷ್ಯಾದಿಂದ ಆಮದು ಮಾಡಿಕೊಂಡ S 400 ಏರ್ ಡಿಫೆನ್ಸ್ ಸಿಸ್ಟಮ್ ನಿಂದ ಹೊಡೆದುರುಳಿಸಿತು ಎನ್ನಲಾಗಿದೆ. ಆದರೆ ಕ್ಷಿಪಣಿ ಹೊಡೆದುರುಳಿಸಿದ ಬಳಿಕ ಅದರ ಯಾವುದೇ ಅವಶೇಷ ಪತ್ತೆಯಾಗಿಲ್ಲ ಎಂದೂ ಸೇನೆ ಹೇಳಿದೆ.

ಪಾಕಿಸ್ತಾನ ಶಹೀನ್ ಕ್ಷಿಪಣಿಯನ್ನು ಪ್ರಯೋಗಿಸಿ, ಭಾರತಕ್ಕೆ ದೊಡ್ಡ ಹಿನ್ನಡೆಯನ್ನು ತರಲು ಪಾಕಿಸ್ತಾನ ಪ್ರಯತ್ನಿಸಿತ್ತು. ನಮ್ಮ ರಕ್ಷಣಾ ವ್ಯವಸ್ಥೆಯು ಅದನ್ನು ಹಿಮ್ಮೆಟ್ಟಿಸಿತ್ತು. ಆದರೆ, ಕ್ಷಿಪಣಿಯ ಅವಶೇಷಗಳು ಸಿಗಬೇಕಿತ್ತಲ್ಲವೇ ಎನ್ನುವ ಪ್ರಶ್ನೆ ಉದ್ಭವಿಸುವುದು ಸಹಜ. ಇದು ಭಾರತದ ಮಿಲಿಟರಿಯ ಹೊಸ ಕಾರ್ಯತಂತ್ರ ಮತ್ತು ದೇಶದ ಭದ್ರತೆ ಮತ್ತು ಗುಪ್ತಚರದ ಹಿನ್ನಲೆಯಲ್ಲಿ ಇದನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಮಿಲಿಟರಿ ಅಧಿಕಾರಿಗಳು ಹೇಳಿದ್ದಾರೆ.

S-400 ಜೊತೆಗೆ ಆಕಾಶ್ ಕ್ಷಿಪಣಿ ಸಾಥ್

ಭಾರತೀಯ ವಾಯುಸೇನೆಯ ವಿಡಿಯೋವನ್ನು ಅವಲೋಕಿಸಿದಾಗ, ಪಾಕಿಸ್ತಾನ ಹಲವಾರು ಪ್ರಬಲ ಅಸ್ತ್ರಗಳನ್ನು ಭಾರತದ ವಿರುದ್ದ ಬಳಸಿತ್ತು. ಭಾರತೀಯ ಸೇನೆಯ ಅಧಿಕೃತ ವಿಡಿಯೋ ಪ್ರಕಾರ ಪಾಕಿಸ್ತಾನವು ಶಹೀನ್ (Shaheen ballistic) ಕ್ಷಿಪಣಿಯ ಜೊತೆಗೆ, ಚೀನಾ ನಿರ್ಮಿತ ಎ-100 ಮತ್ತು ಫತೇ (Fateh I/II MLRS ) ಬಳಸಿಕೊಂಡಿತ್ತು. ಇದಕ್ಕೆ ಕೌಂಟರ್ ಕೊಡಲು ಭಾರತೀಯ ಸೇನೆ ಕೂಡ ತನ್ನ Smerch MLRS ಅನ್ನು ಪ್ರಯೋಗಿಸಿತ್ತು ಎಂದು ತಿಳಿದುಬಂದಿದೆ. ಪಾಕಿಸ್ತಾನದ ಶಹೀನ್ ಕ್ಷಿಪಣಿಯನ್ನು ತಡೆಯಲು ರಷ್ಯಾದ ಎಸ್ - 400 ಮತ್ತು ಭಾರತದಲ್ಲೇ ನಿರ್ಮಿಸಲಾದ ಆಕಾಶ್ ಕ್ಷಿಪಣಿಯನ್ನು ಭಾರತದ ಮಿಲಿಟರಿ ಬಳಸಿಕೊಂಡಿತ್ತು. ಶಹೀನ್ ಕ್ಷಿಪಣಿಯನ್ನು ಭಾರತ ತಡೆದ ರೀತಿ ಭಾರತದ ಅಡ್ವಾನ್ಸ್ ಟೆಕ್ನಾಲಜಿ ಹೊಂದಿರುವ ರೀತಿಯನ್ನು ತೋರಿಸುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಆರೋಪ ಅಲ್ಲಗಳೆದ ಪಾಪಿಸ್ತಾನ

ಇನ್ನು ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ಸೋಮವಾರ ಈ ಬಗ್ಗೆ ತನ್ನ ಪ್ರತಿಕ್ರಿಯೆ ನೀಡಿದ್ದು, ಭಾರತದ ವಿರುದ್ಧ ತಾನು ಶಾಹೀನ್ ಕ್ಷಿಪಣಿ ಪ್ರಯೋಗ ಮಾಡಿಯೇ ಇಲ್ಲ.. ಈ ಕುರಿತ ಎಲ್ಲ ಊಹಾಪೋಹಗಳು"ಆಧಾರರಹಿತ ಆರೋಪಗಳು" ಎಂದು ತಿರಸ್ಕರಿಸಿದೆ.

Shaheen ಕ್ಷಿಪಣಿಯ ಸಾಮರ್ಥ್ಯ

ಶಹೀನ್ ಕ್ಷಿಪಣಿಯು, ಪಾಕಿಸ್ತಾನದಲ್ಲಿ ಅಭಿವೃದ್ದಿ ಪಡಿಸಲಾದ ಮತ್ತು ಪರಮಾಣು ಸಾಮರ್ಥ್ಯದ ಕ್ಷಿಪಣಿಯಾಗಿದೆ. ಇದನ್ನು, ಭಾರತದ ವಿವಿಧ ನಗರಗಳನ್ನು ಗುರಿಯಾಗಿಸಿಯೇ ವಿನ್ಯಾಸಗೊಳಿಸಲಾಗಿದೆ. ಪಾಕಿಸ್ತಾನ ಈ ಬಾರಿ ಪ್ರಯೋಗಿಸಿದ್ದ ಕ್ಷಿಪಣಿಯಲ್ಲಿ ಪರಮಾಣು ಸಿಡಿತಲೆ ಇರಲಿಲ್ಲ. ಸಾಂಪ್ರದಾಯಿಕವಾಗಿ ಇದನ್ನು ಪಾಕಿಸ್ತಾನ ಬಳಸಿಕೊಂಡಿತ್ತು. ಪಾಕಿಸ್ತಾನದ ಫತೇ ಮತ್ತು MLRS ಅಸ್ತ್ರವು, ಪಾಕಿಸ್ತಾನದ ಸೇನೆಯು ಚೀನಾದ ವಿಜ್ಞಾನಿಗಳ ಸಹಾಯದೊಂದಿಗೆ ಮೇಲ್ದರ್ಜೆಗೇರಿಸಿಕೊಂಡಿದೆ. ಭಾರತದ ವಿವಿದ ನಗರಗಳನ್ನು ಗುರಿಯಾಗಿಸಿಕೊಂಡು ಸುಮಾರು 400 ಡ್ರೋನ್ ಅನ್ನು ಪಾಕಿಸ್ತಾನ ಪ್ರಯೋಗಿಸಿತ್ತು ಎಂದು ಕರ್ನಲ್ ಸೋಫಿಯಾ ಖುರೇಷಿ ಈ ಹಿಂದೆ ಹೇಳಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

ಡಿ ಕೆ ಶಿವಕುಮಾರ್ ಹಿಂದೂ ಜನರ ಭಾವನೆಗಳಿಗೆ ನೋವುಂಟುಮಾಡಿದ್ದು ಕ್ಷಮೆಯಾಚಿಸಬೇಕು: ಶೋಭಾ ಕರಂದ್ಲಾಜೆ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

SCROLL FOR NEXT