ಸಂಜಯ್ ರಾವತ್, ಉದ್ಧವ್ ಠಾಕ್ರೆ 
ದೇಶ

ವಿದೇಶಕ್ಕೆ ಸರ್ವ ಪಕ್ಷ ನಿಯೋಗ; ಉಲ್ಟಾ ಹೊಡೆದ ಶಿವಸೇನಾ ಯುಬಿಟಿ!

ವಿವಿಧ ದೇಶಗಳಿಗೆ ತೆರಳುತ್ತಿರುವ ಸರ್ವ ಪಕ್ಷ ನಿಯೋಗದಲ್ಲಿ ತಮ್ಮ ಪಕ್ಷ ಭಾಗಿ ಕುರಿತು ಕೇಂದ್ರ ಸಚಿವ ಕಿರಣ್ ರಿಜಿಜು, ಉದ್ಧವ್ ಠಾಕ್ರೆ ಅವರೊಂದಿಗೆ ದೂರವಾಣಿ ಮೂಲಕ ಚರ್ಚಿಸಿರುವುದಾಗಿ ತಿಳಿಸಿದೆ.

ಮುಂಬೈ: ಪಾಕ್ ಪ್ರಯೋಜಿತ ಭಯೋತ್ಪಾದನೆ ವಿರುದ್ಧ ತನ್ನ ನಿಲುವನ್ನು ವಿವರಿಸಲು ವಿದೇಶಕ್ಕೆ ತೆರಳುತ್ತಿರುವ ಸರ್ವಪಕ್ಷ ನಿಯೋಗವನ್ನು ಬಹಿಷ್ಕರಿಸಲು ನಿನ್ನೆಯಷ್ಟೇ ಕರೆ ನೀಡಿದ್ದ ಶಿವಸೇನಾ ಯುಬಿಟಿ ಮಂಗಳವಾರ ಉಲ್ಟಾ ಹೊಡೆದಿದೆ.

ರಾಷ್ಟ್ರೀಯ ಹಿತಾಸಕ್ತಿಯಿಂದ ವಿದೇಶಕ್ಕೆ ತೆರಳಲಿರುವ ಭಾರತದ ಸರ್ವಪಕ್ಷ ನಿಯೋಗವನ್ನು ಬೆಂಬಲಿಸುವುದಾಗಿ ಹೇಳಿದೆ. ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಉದ್ಧವ್ ಠಾಕ್ರೆ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಈ ತೀರ್ಮಾನಕ್ಕೆ ಬರಲಾಗಿದೆ.

ಅವ್ಯವಸ್ಥೆ ಮತ್ತು ಅಸಮರ್ಪಕ ನಿರ್ವಹಣೆ ತಪ್ಪಿಸಲು ಈ ನಿಯೋಗಗಳ ಬಗ್ಗೆ ಪಕ್ಷಗಳಿಗೆ ತಿಳಿಸುವ 'ಶಿಷ್ಟಾಚಾರ'ವನ್ನು ಕೇಂದ್ರ ಸರ್ಕಾರ ಅನುಸರಿಸಬೇಕು ಎಂದು ಸೇನಾ-ಯುಬಿಟಿ ಹೇಳಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಶಿವಸೇನಾ- ಯುಬಿಟಿ, ವಿವಿಧ ದೇಶಗಳಿಗೆ ತೆರಳುತ್ತಿರುವ ಸರ್ವ ಪಕ್ಷ ನಿಯೋಗದಲ್ಲಿ ತಮ್ಮ ಪಕ್ಷ ಭಾಗಿ ಕುರಿತು ಕೇಂದ್ರ ಸಚಿವ ಕಿರಣ್ ರಿಜಿಜು, ಉದ್ಧವ್ ಠಾಕ್ರೆ ಅವರೊಂದಿಗೆ ದೂರವಾಣಿ ಮೂಲಕ ಚರ್ಚಿಸಿರುವುದಾಗಿ ತಿಳಿಸಿದೆ.

ಭಯೋತ್ಪಾದನೆ ವಿರುದ್ಧ ಭಾರತದ ನಿಲುವನ್ನು ವಿವರಿಸಲು ವಿದೇಶಕ್ಕೆ ಸರ್ವ ಪಕ್ಷ ತೆರಳುತ್ತಿದ್ದು, ರಾಜಕಾರಣಕ್ಕೆ ಅಲ್ಲ ಎಂಬುದಾಗಿ ಸ್ಪಷ್ಪಪಡಿಸಲಾಗಿದೆ.

ಈ ನಿಯೋಗದ ಮೂಲಕ ನಮ್ಮ ದೇಶಕ್ಕೆ ಯಾವುದು ಸರಿ ಮತ್ತು ಏನು ಬೇಕೋ ಅದನ್ನು ಮಾಡುತ್ತೇವೆ ಎಂದು ನಾವು ಸರ್ಕಾರಕ್ಕೆ ಭರವಸೆ ನೀಡಿದ್ದೇವೆ. ರಾಜ್ಯಸಭಾ ಸದಸ್ಯೆ ಪ್ರಿಯಾಂಕಾ ಚತುರ್ವೇದಿ, ಇತರ ಸಂಸದರ ನಿಯೋಗದಲ್ಲಿರುವವರು ಎಂದು ಶಿವಸೇನಾ ಯುಬಿಟಿ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ರಾಜ್ಯ ಸರ್ಕಾರಕ್ಕೆ ಹಿನ್ನಡೆ: ಸಿನಿಮಾ ಟಿಕೆಟ್ 200 ರೂಪಾಯಿ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ

ಸುಂಕಾಸ್ತ್ರ, H-1B ಶುಲ್ಕ ಹೆಚ್ಚಳ ವಿವಾದ: ಜೈಶಂಕರ್‌-ಮಾರ್ಕೊ ರುಬಿಯೊ ಭೇಟಿ ಬೆನ್ನಲ್ಲೇ ಭಾರತದ ಸಂಬಂಧ ನಿರ್ಣಾಯಕ ಎಂದ ಅಮೆರಿಕಾ

"False Hindu God": ಅಮೆರಿಕದಲ್ಲಿ ಹನುಮಂತನ ಪ್ರತಿಮೆ ಬಗ್ಗೆ ರಿಪಬ್ಲಿಕನ್ ನಾಯಕನ ವಿವಾದಾತ್ಮಕ ಹೇಳಿಕೆ!

GST ಕಡಿತ, ಹಬ್ಬದ ಸೀಸನ್ ನಲ್ಲಿ ಮಾರುತಿ ಸುಜುಕಿ ಕಾರುಗಳ ಬುಕ್ಕಿಂಗ್ ಗಗನಕ್ಕೆ; ಎಂದಿಗಿಂತ ಶೇ.50 ರಷ್ಟು ಹೆಚ್ಚಳ!

Dharmasthala Case: ದೂರುದಾರ ಚಿನ್ನಯ್ಯನಿಗೆ ಹಣಕಾಸು ನೆರವು ನೀಡಿದ್ದು ಯಾರು..? SIT ತನಿಖೆ ಮತ್ತಷ್ಟು ಚುರುಕು, ಹಲವರಿಗೆ ನೋಟಿಸ್..!

SCROLL FOR NEXT