ನಟ ಅರ್ಜುನ್ ರಾಂಪಾಲ್ 
ದೇಶ

ನಟ ಅರ್ಜುನ್ ರಾಂಪಾಲ್ ವಿರುದ್ಧದ ಜಾಮೀನು ರಹಿತ ಬಂಧನ ವಾರಂಟ್ ರದ್ದುಗೊಳಿಸಿದ ಬಾಂಬೆ ಹೈಕೋರ್ಟ್

ರಾಮ್‌ಪಾಲ್ ವಿರುದ್ಧ ದಾಖಲಾಗಿರುವ ಅಪರಾಧವು ಗರಿಷ್ಠ ಮೂರು ವರ್ಷಗಳ ಶಿಕ್ಷೆಗೆ ಅರ್ಹವಾಗಿದ್ದು, ಅದು ಜಾಮೀನು ನೀಡಬಹುದಾದ ಅಪರಾಧ ಎಂದು ನ್ಯಾಯಮೂರ್ತಿ ಸೇತ್ನಾ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಮುಂಬೈ: 2019 ರ ತೆರಿಗೆ ವಂಚನೆ ಪ್ರಕರಣದಲ್ಲಿ ನಟ ಅರ್ಜುನ್ ರಾಂಪಾಲ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದ್ದ ಸ್ಥಳೀಯ ನ್ಯಾಯಾಲಯದ ಆದೇಶವನ್ನು ಬಾಂಬೆ ಹೈಕೋರ್ಟ್ ಬುಧವಾರ ರದ್ದುಗೊಳಿಸಿದೆ.

ವಾರಂಟ್ ರದ್ದು ಕೋರಿ ನಟ ಅರ್ಜುನ್ ರಾಂಪಾಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅದ್ವೈತ್ ಸೇಥ್ನಾ ಅವರ ರಜಾ ಕಾಲದ ಪೀಠ, ಮೇ 16 ರಂದು ಮ್ಯಾಜಿಸ್ಟ್ರೇಟ್ ಕೋರ್ಟ್ ಹೊರಡಿಸಿದ ಆದೇಶ ಕಾನೂನಿಗೆ ವಿರುದ್ಧವಾಗಿದೆ ಎಂದು ಹೇಳಿದೆ.

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 276C(2) ಅಡಿಯಲ್ಲಿನ ಅಪರಾಧಕ್ಕಾಗಿ ಐ-ಟಿ ಇಲಾಖೆ ತನಿಖೆ ಆರಂಭಿಸಿದ 2019 ರ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ತಮ್ಮ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಅರ್ಜುನ್ ರಾಂಪಾಲ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಈ ಸೆಕ್ಷನ್ ತೆರಿಗೆ, ದಂಡ ಅಥವಾ ಬಡ್ಡಿ ಪಾವತಿಯನ್ನು ಉದ್ದೇಶಪೂರ್ವಕವಾಗಿ ತಪ್ಪಿಸಲು ಪ್ರಯತ್ನಿಸುವ ವ್ಯಕ್ತಿಗೆ ಸಂಬಂಧಿಸಿದೆ.

ನಟನ ಮನವಿಯ ಪ್ರಕಾರ, ಅವರ ವಕೀಲರು ಹಾಜರಾತಿಯಿಂದ ವಿನಾಯಿತಿ ಕೋರಿ ಮ್ಯಾಜಿಸ್ಟ್ರೇಟ್ ಮುಂದೆ ಅರ್ಜಿ ಸಲ್ಲಿಸಿದ್ದರು. ಆದಾಗ್ಯೂ, ನ್ಯಾಯಾಲಯ ಅದನ್ನು ತಿರಸ್ಕರಿಸಿ, ರಾಂಪಾಲ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದೆ ಎಂದು ಹೈಕೋರ್ಟ್ ಹೇಳಿದೆ.

ರಾಮ್‌ಪಾಲ್ ವಿರುದ್ಧ ದಾಖಲಾಗಿರುವ ಅಪರಾಧವು ಗರಿಷ್ಠ ಮೂರು ವರ್ಷಗಳ ಶಿಕ್ಷೆಗೆ ಅರ್ಹವಾಗಿದ್ದು, ಅದು ಜಾಮೀನು ನೀಡಬಹುದಾದ ಅಪರಾಧ ಎಂದು ನ್ಯಾಯಮೂರ್ತಿ ಸೇತ್ನಾ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎಸ್ ಜಾನಕಿ ಇನ್ನಿಲ್ಲ: ದಕ್ಷಿಣ ಭಾರತದ ಗಾನ ಕೋಗಿಲೆ ಮೈಸೂರಿನಲ್ಲಿ ನಿಧನ!

5th T20I: ಬಟ್ಲರ್, ಬ್ರೂಕ್ ಅರ್ಭಟ; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು, ಸರಣಿ ವೈಟ್‌ವಾಶ್

ಖಿನ್ನತೆಗೆ ಜಾರಿದ್ದೆ, ಗುಣಪಡಿಸಲು ಮಗು ಮಾಡಿಕೊಳ್ಳಿ ಎಂದು ವೈದ್ಯರು ಹೇಳಿದ್ರು; ಹುಡುಗನ ಎಲ್ಲಿ ಹುಡುಕಲಿ?: Endometriosis ಭಯಾನಕತೆ ಬಿಚ್ಚಿಟ್ಟ ಶಮಿತಾ ಶೆಟ್ಟಿ

17 ಭಾಷೆಗಳಲ್ಲಿ 48 ಸಾವಿರ ಹಾಡುಗಳಿಗೆ ಧ್ವನಿ: 2013ರಲ್ಲಿ ಪದ್ಮಭೂಷಣ ತಿರಸ್ಕರಿಸಿದ್ದ ದಿಟ್ಟ ಗಾಯಕಿ ಎಸ್ ಜಾನಕಿ!

ಪುಣೆಯಲ್ಲಿ ತ್ಯಾಜ್ಯದ ಗುಡ್ಡ ಬಿದ್ದು ಕಟ್ಟಡ ಕುಸಿತ: 8 ಮಂದಿ ಸಾವು; 14 ಜನರ ರಕ್ಷಣೆ, ಒಬ್ಬರು ಇನ್ನೂ ನಾಪತ್ತೆ!