ಪಕ್ಷದ ಕಚೇರಿಯಲ್ಲೇ ಮಹಿಳೆ ಜೊತೆ ಚಕ್ಕಂದ 
ದೇಶ

Uttar Pradesh: ಪಕ್ಷದ ಕಚೇರಿಯಲ್ಲೇ ಮಹಿಳೆ ಜೊತೆ ಚಕ್ಕಂದ ಆರೋಪ; BJP ನಾಯಕನಿಗೆ ನೋಟಿಸ್!

ಮಧ್ಯಪ್ರದೇಶದಲ್ಲಿ ಬಿಜೆಪಿ ನಾಯಕ ಮನೋಹರ್‌ಲಾಲ್ ಧಕಾಡ್ ಅವರ ಸೆಕ್ಸ್ ವಿಡಿಯೋ ವಿವಾದದ ಬೆನ್ನಲ್ಲೇ ಸಿವ್ನಿ ಮಾಲ್ವಾದ ನಾಯಕ ಕಮಲ್ ರಘುವಂಶಿ ಅವರ ಹಳೆಯ ಅಶ್ಲೀಲ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.

ಲಖನೌ: ಮಧ್ಯಪ್ರದೇಶ ಬಿಜೆಪಿ ನಾಯಕರ ಅಶ್ಲೀಲ ವಿಡಿಯೋ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಇತ್ತ ಅಂತಹುದೇ ಮತ್ತೊಂದು ಅಶ್ಲೀಲ ವಿಡಿಯೋ ಉತ್ತರ ಪ್ರದೇಶದಲ್ಲೂ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದೆ.

ಮಧ್ಯಪ್ರದೇಶದಲ್ಲಿ ಬಿಜೆಪಿ ನಾಯಕ ಮನೋಹರ್‌ಲಾಲ್ ಧಕಾಡ್ ಅವರ ಸೆಕ್ಸ್ ವಿಡಿಯೋ ವಿವಾದದ ಬೆನ್ನಲ್ಲೇ ಸಿವ್ನಿ ಮಾಲ್ವಾದ ನಾಯಕ ಕಮಲ್ ರಘುವಂಶಿ ಅವರ ಹಳೆಯ ಅಶ್ಲೀಲ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ. ಇದರ ನಡುವೆ ಇತ್ತ ಉತ್ತರಪ್ರದೇಶದಲ್ಲೂ ಇಂತಹುದೇ ಮತ್ತೊಂದು ವಿಡಿಯೋ ವಿಚಾರ ಉತ್ತರ ಪ್ರದೇಶ ಬಿಜೆಪಿ ನಾಯಕರಿಗೆ ತಲೆ ಬಿಸಿ ತಂದಿದೆ.

ಅದರಲ್ಲೂ ಬಿಜೆಪಿಯ ಹಿರಿಯ ನಾಯಕರೊಬ್ಬರು ಪಕ್ಷದ ಕಚೇರಿಯಲ್ಲೇ ಮಹಿಳೆ ಜೊತೆ ಅಶ್ಲೀಲವಾಗಿ ವರ್ತಿಸಿದ ವಿಡಿಯೋ ಪಕ್ಷ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದು, ಈ ಸಂಬಂಧ ಬಿಜೆಪಿ ನಾಯಕತ್ವಕ್ಕೆ ಔಪಚಾರಿಕ ದೂರು ನೀಡಿದ್ದಾರೆ. ಏಳು ದಿನಗಳಲ್ಲಿ ವಿವರಿಸುವಂತೆ ಪಕ್ಷವು ಕೇಳಿದೆ.

ಬಿಜೆಪಿ ಗೊಂಡಾ ಮುಖ್ಯಸ್ಥ ಅಮರ್ ಕಿಶೋರ್ ಕಶ್ಯಪ್ ಎಂಬುವವರು ಬಿಜೆಪಿ ಕಚೇರಿಯಲ್ಲೇ ಮಹಿಳೆಯೊಂದಿಗೆ ಅಶ್ಲೀಲವಾಗಿ ನಡೆದುಕೊಂಡ ವಿಡಿಯೋ ವ್ಯಾಪರ ವೈರಲ್ ಆಗುತ್ತಿದೆ.

ಪಕ್ಷದ ಕಚೇರಿಯಲ್ಲೇ ಮಹಿಳೆ ಜೊತೆ ಚಕ್ಕಂದ

ರಾಜ್ಯ ರಾಜಧಾನಿ ಲಕ್ನೋದಿಂದ ಸುಮಾರು 120 ಕಿ.ಮೀ ದೂರದಲ್ಲಿರುವ ಗೊಂಡಾದಲ್ಲಿರುವ ಜಿಲ್ಲಾ ಪಕ್ಷದ ಕಚೇರಿಯಲ್ಲಿ ಮಹಿಳೆಯೊಬ್ಬರೊಂದಿಗಿನ ಅಮರ್ ಕಿಶೋರ್ ಕಶ್ಯಪ್ "ಅನುಚಿತ" ವೀಡಿಯೊ ವ್ಯಾಪಕ ವೈರಲ್ ಆಗುತ್ತಿದೆ. ಈ ಸಂಬಂಧ 7 ದಿನಗಳಲ್ಲಿ ಉತ್ತರಿಸುವಂತೆ ಉತ್ತರ ಪ್ರದೇಶ ಬಿಜೆಪಿ ನೋಟಿಸ್ ಕೊಟ್ಟಿದೆ. ಈ ವಿಡಿಯೋವನ್ನು "ನಾಚಿಕೆಗೇಡಿನದು" ಎಂದು ಪಕ್ಷದ ಕಾರ್ಯಕರ್ತರೊಬ್ಬರು ಬಣ್ಣಿಸಿದ್ದಾರೆ ಮತ್ತು ಬಿಜೆಪಿ ನಾಯಕತ್ವಕ್ಕೆ ಔಪಚಾರಿಕ ದೂರು ದಾಖಲಿಸಿದ್ದಾರೆ.

"ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾದ ವೀಡಿಯೊವು ಪಕ್ಷದ ಖ್ಯಾತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಮತ್ತು ಅಶಿಸ್ತಿನ ವರ್ಗಕ್ಕೆ ಬರುವ ನಡವಳಿಕೆಯನ್ನು ಬೆಳಕಿಗೆ ತಂದಿದೆ" ಎಂದು ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಗೋವಿಂದ್ ನಾರಾಯಣ್ ಶುಕ್ಲಾ ಅವರು ಕಶ್ಯಪ್ ಅವರಿಗೆ ನೋಟಿಸ್ ನೀಡಿದ್ದಾರೆ.

"ರಾಜ್ಯ ಅಧ್ಯಕ್ಷರ ಸೂಚನೆಗಳ ಪ್ರಕಾರ, ಏಳು ದಿನಗಳಲ್ಲಿ ಬಿಜೆಪಿ ರಾಜ್ಯ ಕಚೇರಿಗೆ ಲಿಖಿತ ವಿವರಣೆಯನ್ನು ಸಲ್ಲಿಸಲು ನಿಮ್ಮನ್ನು ಕೇಳಲಾಗಿದೆ. ನಿಗದಿತ ಸಮಯದಲ್ಲಿ ತೃಪ್ತಿದಾಯಕ ಪ್ರತಿಕ್ರಿಯೆಯನ್ನು ನೀಡಲು ವಿಫಲವಾದರೆ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು" ಎಂದು ನೋಟಿಸ್ ನಲ್ಲಿ ಕೇಳಲಾಗಿದೆ.

ಅಸ್ವಸ್ಥ ಮಹಿಳೆ?

ಇದೇ ವೇಳೆ ಈ ವೀಡಿಯೊವನ್ನು ಏಪ್ರಿಲ್ 12 ರಂದು ರೆಕಾರ್ಡ್ ಮಾಡಲಾಗಿದ್ದು, ಪಕ್ಷದ ಕಚೇರಿಗೆ ಬಂದಿದ್ದ ಪಕ್ಷದ ಸದಸ್ಯೆ ಅಸ್ವಸ್ಥಳಾಗಿ ವಿಶ್ರಾಂತಿ ಪಡೆಯಲು ಬಯಸಿದ್ದಳು. ಈ ವೇಳೆ ಆಕೆಗೆ ವಿಶ್ರಾಂತಿಗೆ ಸ್ಥಳ ನೀಡಿ ಕಚೇರಿಯ ಮೊದಲ ಅಂತಸ್ತಿನಲ್ಲಿ ಕೊಠಡಿ ನೀಡಲು ಬಂದಾಗ ಆಕೆಯನ್ನು ತಬ್ಬಿಕೊಂಡು ಚುಂಬಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸ್ಪಷ್ಟನೆ

ಇನ್ನು ಈ ವಿಚಾರವಾಗಿ ಸ್ಪಷ್ಟನೆ ನೀಡಿರುವ ಆರೋಪಿ ಬಿಜೆಪಿ ನಾಯಕ, ಆಕೆ ತೀವ್ರ ಅಸ್ವಸ್ಥಳಾಗಿದ್ದಳು. ಮೆಟ್ಟಿಲು ಹತ್ತುವಾಗ ಪ್ರಜ್ಞೆ ತಪ್ಪುವ ಸ್ಥಿತಿಯಲ್ಲಿ ಬೀಳುತ್ತಿದ್ದರು. ಆಗ ನಾನು ಆಕೆಯನ್ನು ಹಿಡಿದುಕೊಂಡೆ ಅಷ್ಟೇ.. ಅದನ್ನೇ ಬೇರೆ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ನಮ್ಮ ಕಾರ್ಯಕರ್ತರಿಗೆ ನಾವು ನೆರವು ನೀಡದೇ ಮತ್ತಾರು ನೀಡುತ್ತಾರೆ ಎಂದು ತಮ್ಮ ಕೃತ್ಯವನ್ನು ಕಶ್ಯಪ್ ಸಮರ್ಥಿಸಿಕೊಂಡಿದ್ದಾರೆ.

ಅಮರ್ ಕಿಶೋರ್ ಕಶ್ಯಪ್ ಮಹಿಳೆ ತನಗೆ ಅಸ್ವಸ್ಥಳಾಗಿರುವುದಾಗಿ ಮತ್ತು ವಿಶ್ರಾಂತಿ ಪಡೆಯಲು ಸ್ಥಳ ಬೇಕು ಎಂದು ಕರೆದಿದ್ದಾಳೆ ಎಂದು ಹೇಳಿದ್ದಾಳೆ.

"ಆ ಮಹಿಳೆ ನಮ್ಮ ಪಕ್ಷದ ಸಕ್ರಿಯ ಸದಸ್ಯೆ. ಅವರು ನನಗೆ ಕರೆ ಮಾಡಿ, 'ಅಧ್ಯಕ್ಷರೇ, ನನಗೆ ಹುಷಾರಿಲ್ಲ. ನಾನು ವಿಶ್ರಾಂತಿ ಪಡೆಯಲು ಬಯಸುತ್ತೇನೆ. ಸ್ವಲ್ಪ ಸಮಯ ಉಳಿಯಲು ಸ್ಥಳ ನೀಡಿ' ಎಂದು ಹೇಳಿದರು. ಹಾಗಾಗಿ ನಾನು ಅವರನ್ನು ಎತ್ತಿಕೊಂಡು ಕಚೇರಿಗೆ ಕರೆತಂದೆ," ಎಂದು ಶ್ರೀ ಕಶ್ಯಪ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

SCROLL FOR NEXT