ಶಬರಿಮಲೆ ದೇವಸ್ಥಾನ 
ದೇಶ

ಶಬರಿಮಲೆ ದೇವಸ್ಥಾನದ ಚಿನ್ನ ಕಳ್ಳತನ ಪ್ರಕರಣ: ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಬಂಧನ

ಸುಧೀಶ್ ಅವರಿಗೆ ತಿಳಿದಿದ್ದರೂ, ಫಲಕಗಳನ್ನು ತಾಮ್ರ ಎಂದು ಉಲ್ಲೇಖಿಸುವ ಶಿಫಾರಸು ಪತ್ರವನ್ನು ಬರೆದಿದ್ದಾರೆ ಎಂದು ತನಿಖೆಯಲ್ಲಿ ಕಂಡುಬಂದಿದೆ.

ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಚಿನ್ನ ನಾಪತ್ತೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(SIT) ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಸುಧೀಶ್ ಕುಮಾರ್ ಅವರನ್ನು ಶನಿವಾರ ಬಂಧಿಸಿದೆ.

ದೇವಾಲಯದ ವಿಗ್ರಹಗಳಿಗೆ ಚಿನ್ನ ಲೇಪನದಲ್ಲಿ ಪಿತೂರಿ ಮತ್ತು ವಿರೂಪದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಎಸ್ಐಟಿ ಸುಧೀಶ್ ಕುಮಾರ್ ಅವರನ್ನು ಬಂಧಿಸಿದೆ. ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.

SIT ಪ್ರಕಾರ, ಸುಧೀಶ್ ದೇವಾಲಯದ ಫಲಕಗಳನ್ನು ಉನ್ನಿಕೃಷ್ಣನ್ ಪೊಟ್ಟಿಗೆ ಹಸ್ತಾಂತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಸಮಯದಲ್ಲಿ ಮೂಲ ಚಿನ್ನ ಲೇಪಿತ ಫಲಕಗಳನ್ನು ತಾಮ್ರ ಫಲಕಗಳೆಂದು ತಪ್ಪಾಗಿ ನಿರೂಪಿಸಲಾಗಿದೆ. ಸುಧೀಶ್ ಅವರಿಗೆ ತಿಳಿದಿದ್ದರೂ, ಫಲಕಗಳನ್ನು ತಾಮ್ರ ಎಂದು ಉಲ್ಲೇಖಿಸುವ ಶಿಫಾರಸು ಪತ್ರವನ್ನು ಬರೆದಿದ್ದಾರೆ ಎಂದು ತನಿಖೆಯಲ್ಲಿ ಕಂಡುಬಂದಿದೆ.

1998–99ರ ಹಿಂದಿನ, ಗರ್ಭಗುಡಿ ಮತ್ತು ಇತರ ವಿಗ್ರಹಗಳಿಗೆ ಚಿನ್ನದ ಲೇಪನ ಮಾಡಿದ ಸಮಯದಲ್ಲಿ ತಿರುವಾಂಕೂರು ದೇವಸ್ವಂ ಮಂಡಳಿಯ ಪ್ರಧಾನ ಕಚೇರಿಯಿಂದ ತನಿಖಾ ತಂಡ ದಾಖಲೆಗಳನ್ನು ಸಂಗ್ರಹಿಸಿದೆ. ಕಾಣೆಯಾದ ಚಿನ್ನ ಎಷ್ಟು ಎಂಬುದನ್ನು ನಿರ್ಧರಿಸಲು ಈ ದಾಖಲೆಗಳನ್ನು ವಿವರವಾಗಿ ಪರಿಶೀಲಿಸಲಾಗುತ್ತದೆ.

ಏತನ್ಮಧ್ಯೆ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಕಸ್ಟಡಿಯಲ್ಲಿರುವ ದೇವಸ್ವಂನ ಮಾಜಿ ಆಡಳಿತ ಅಧಿಕಾರಿ ಮುರಾರಿ ಬಾಬು ಅವರನ್ನು ರಾನ್ನಿ ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ನವೆಂಬರ್ 13 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾಂಗ್ರೆಸ್ ಹಣೆಗೆ ಗನ್ ಇಟ್ಟು ತೇಜಸ್ವಿ ತನ್ನನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿಕೊಂಡಿದ್ದಾರೆ: ಪ್ರಧಾನಿ ಮೋದಿ

3ನೇ ಟಿ20: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ದಾಖಲೆಯ ಜಯ, ತವರಿನಲ್ಲೇ ಕಾಂಗರೂಗಳಿಗೆ ಮುಖಭಂಗ

'200 ವರ್ಷ ಇತಿಹಾಸ, 1993ರಲ್ಲಿ ಕರ್ನಾಟಕ': ರಾಜ್ಯೋತ್ಸವದಂದೇ ಕನ್ನಡಕ್ಕೆ ಜಮೀರ್ ಅಪಮಾನ: ಜೆಡಿಎಸ್ ಕಿಡಿ, Video

3ನೇ ಟಿ20: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 5 ವಿಕೆಟ್ ಭರ್ಜರಿ ಜಯ

ಬಿಹಾರ: ಪ್ರಚಾರದ ವೇಳೆ 'ಮೀನು ಹಿಡಿದ' ರಾಹುಲ್ ಗಾಂಧಿ! Video

SCROLL FOR NEXT