ಉತ್ತರ ಪ್ರದೇಶ online desk
ದೇಶ

Uttar Pradesh: ಬಾಲಕಿಯ ಭೀಕರ ಹತ್ಯೆ, ಅತ್ಯಾಚಾರ; ಗಂಟಲು ಸೀಳಿ, ಕೈಕಾಲುಗಳು ಮುರಿದು, ಮೂಗಿನಲ್ಲಿ ಮರಳು, ಗೋಂದು ತುಂಬಿದ ರಾಕ್ಷಸರು!

ಹಂತಕರು ಆಕೆಯ ಗಂಟಲು ಸೀಳಿ, ಕೈಕಾಲುಗಳನ್ನು ಮುರಿದು, ಮೂಗಿಗೆ ಮರಳು ಮತ್ತು ಅಂಟು (ಗೋಂದು) ತುಂಬಿಸಿ ಕೊಂದು, ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಆಕೆಯ ಕುಟುಂಬ ಆರೋಪಿಸಿದೆ.

ಲಖನೌ: ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ಎರಡು ದಿನಗಳ ಹಿಂದೆ 15 ವರ್ಷದ ಬಾಲಕಿ ಮನೆಯಿಂದ ನಾಪತ್ತೆಯಾಗಿದ್ದ ಯುವತಿಯ ದೇಹ ಪತ್ತೆಯಾಗಿದೆ.

ಮೂವರು ವ್ಯಕ್ತಿಗಳು ಆಕೆಯನ್ನು ಅಪಹರಿಸಿದ್ದಾರೆ ಎಂದು ಆರೋಪಿಸಿ ನಿನ್ನೆ, ಆಕೆಯ ಸಹೋದರ ಪೊಲೀಸ್ ದೂರು ದಾಖಲಿಸಿದ್ದರು. ಇಂದು, ಆಕೆಯ ಶವ ಆಕೆಯ ಮನೆಯ ಸಮೀಪದ ತೋಟದಲ್ಲಿ ಪತ್ತೆಯಾಗಿದೆ. ಬಾಲಕಿಯ ದೇಹದ ಮೇಲಿನ ಗಾಯಗಳು ಭೀಕರ ಚಿತ್ರಹಿಂಸೆಯ ಕಥೆಯನ್ನು ಹೇಳುತ್ತಿವೆ.

ಹಂತಕರು ಆಕೆಯ ಗಂಟಲು ಸೀಳಿ, ಕೈಕಾಲುಗಳನ್ನು ಮುರಿದು, ಮೂಗಿಗೆ ಮರಳು ಮತ್ತು ಅಂಟು (ಗೋಂದು) ತುಂಬಿಸಿ ಕೊಂದು, ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಆಕೆಯ ಕುಟುಂಬ ಆರೋಪಿಸಿದೆ.

ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಅವರಲ್ಲಿ ಒಬ್ಬನನ್ನು ಬಂಧಿಸಲಾಗಿದೆ ಎಂದು ಬಹ್ರೈಚ್‌ನ ಮಿಹಿಪುರ್ವಾ ವೃತ್ತ ಅಧಿಕಾರಿ ಹರ್ಷಿತಾ ತಿವಾರಿ ಹೇಳಿದ್ದಾರೆ. ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಮತ್ತು ಪೊಲೀಸರು ಪ್ರಕರಣವನ್ನು ಎಲ್ಲಾ ಕೋನಗಳಿಂದ ತನಿಖೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳ ಕುರಿತು ವಿರೋಧ ಪಕ್ಷಗಳು ಆಡಳಿತಾರೂಢ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಲೇ ಇದ್ದರೂ, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಇತ್ತೀಚಿನ ವರದಿಯ ಪ್ರಕಾರ, ಉತ್ತರ ಪ್ರದೇಶ ಸುಮಾರು 58.6 ರಷ್ಟು ಕಡಿಮೆ ಅಪರಾಧ ಪ್ರಮಾಣವನ್ನು ಕಾಯ್ದುಕೊಂಡಿದೆ. ದೇಶಾದ್ಯಂತ ವರದಿಯಾದ ಮಹಿಳೆಯರ ಮೇಲಿನ ಅಪರಾಧಗಳಲ್ಲಿ ರಾಜ್ಯವು ಸುಮಾರು 14.81 ಪ್ರತಿಶತದಷ್ಟು (4,48,211) ಹೊಂದಿದೆ ಎಂದು ವರದಿಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಚಿವ ಸಂಪುಟ ಪುನಾರಚನೆ: ಆತುರದ ನಿರ್ಧಾರ ಕೈಗೊಳ್ಳದೆ, ಕಾದು ನೋಡುವ ತಂತ್ರ ಅಳವಡಿಸಿಕೊಂಡ 'ಕೈ' ಕಮಾಂಡ್

ಬಿಹಾರ ಚುನಾವಣೆಯಲ್ಲಿ ಮಹಾಘಟಬಂಧನ್‌ಗೆ ಆಡಳಿತ ವಿರೋಧಿ ಅಲೆ ಸಹಾಯ ಮಾಡುತ್ತದೆ: ಸಿಎಂ ಸಿದ್ದರಾಮಯ್ಯ

ಉಪ ಮುಖ್ಯಮಂತ್ರಿಯಾಗಲು ನಾನು ಸಿದ್ಧ: ಹೈಕಮಾಂಡ್ ಬಯಸಿದರೆ ಸಚಿವ ಸ್ಥಾನ ತ್ಯಾಗ; ಜಮೀರ್‌ ಅಹ್ಮದ್‌ ಖಾನ್‌

ನ.18ರಿಂದ Bengaluru Tech Summit 2025: ‘ಡೀಪ್‌ಟೆಕ್ ದಶಕ’ಕ್ಕೆ 600 ಕೋಟಿ ರೂ. ಹೂಡಿಕೆ; ಸಚಿವ ಪ್ರಿಯಾಂಕ್ ಖರ್ಗೆ

ನಗರದ ಘನತೆ, ಸಂಸ್ಕೃತಿಗೆ ಧಕ್ಕೆಯಾಗದಂತೆ ಗ್ರೇಟರ್ ಮೈಸೂರು ರಚನೆ: ನನಗೂ ಅರಸುಗೂ ಹೋಲಿಕೆ ಬೇಡ; ಸಿಎಂ ಗರಂ!

SCROLL FOR NEXT