ಬುಲಂದ್‌ಶಹರ್: ಉತ್ತರ ಪ್ರದೇಶದ ಬುಲಂದ್‌ಶಹರ್ ನಲ್ಲಿ ನಡೆದ ಮದುವೆಯೊಂದರಲ್ಲಿ ಅಡುಗೆ ಭಟ್ಟ ರೋಟಿಗಳ ಮೇಲೆ ಉಗುಳುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಆ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ವಿಡಿಯೋದಲ್ಲಿ ಆ ವ್ಯಕ್ತಿ ರೋಟಿಗಳನ್ನು ತಯಾರಿಸುವಾಗ ಉಗುಳುತ್ತಿರುವುದನ್ನು ತೋರಿಸಲಾಗಿದೆ.
ಪೊಲೀಸರು ಆ ವ್ಯಕ್ತಿಯನ್ನು ಪಠಾಣ್ ಟೋಲಾ ಪ್ರದೇಶದ ನಿವಾಸಿ ಡ್ಯಾನಿಶ್ ಎಂದು ಗುರುತಿಸಿದ್ದಾರೆ.
ನವೆಂಬರ್ 2 ರಂದು ಪಹಸು ಪೊಲೀಸ್ ಠಾಣೆಯಲ್ಲಿ ಡ್ಯಾನಿಶ್ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ(ಗ್ರಾಮೀಣ) ಡಾ. ತೇಜ್‌ವೀರ್ ಸಿಂಗ್ ಅವರು ತಿಳಿಸಿದ್ದಾರೆ.