ಪ್ರಧಾನಿ ನರೇಂದ್ರ ಮೋದಿ  
ದೇಶ

'ಕಹಿ, ಕ್ರೌರ್ಯ, ಕೆಟ್ಟ, ಭ್ರಷ್ಟಾಚಾರದ 15 ವರ್ಷಗಳ 'ಜಂಗಲ್ ರಾಜ್' RJD ಆಡಳಿತ: ಬಿಹಾರದಲ್ಲಿ ಮೋದಿ ವಾಗ್ದಾಳಿ

ಬಿಹಾರವು ಒಂದು ಕಾಲದಲ್ಲಿ "ಸಾಮಾಜಿಕ ನ್ಯಾಯ"ದ ಭೂಮಿಯಾಗಿತ್ತು ಆದರೆ 1990 ರ ದಶಕದಲ್ಲಿ ಆರ್‌ಜೆಡಿಯ "ಜಂಗಲ್‌ರಾಜ್" ದಾಳಿಗೆ ತುತ್ತಾಯಿ ನಾಶವಾಗಿ ಹೋಯಿತು ಎಂದರು.

ಬಿಹಾರದಲ್ಲಿ ರಾಷ್ಟ್ರೀಯ ಜನತಾ ದಳದ 15 ವರ್ಷಗಳ ಆಡಳಿತಾವಧಿಯನ್ನು "ಜಂಗಲ್‌ರಾಜ್" ಎಂದು ಮತ್ತೆ ಕರೆದಿರುವ ಪ್ರಧಾನಿ ನರೇಂದ್ರ ಮೋದಿ ಕ್ರೌರ್ಯ, ಕಹಿ, ಕೆಟ್ಟ ಭ್ರಷ್ಟಾಚಾರಪೀಡಿತ ಆಡಳಿತ, ಕೆಟ್ಟ ನಡವಳಿಕೆಯ ಸಮಯವಾಗಿತ್ತು ಎಂದು ವ್ಯಾಖ್ಯಾನಿಸಿ ಆರ್ ಜೆಡಿಯನ್ನು ಜರೆದಿದ್ದಾರೆ.

ಬಿಹಾರ ವಿಧಾನಸಭೆಯ ಮೊದಲ ಹಂತದ ಚುನಾವಣೆ ಇಂದು ನಡೆಯುತ್ತಿದ್ದು, ಅದರ ಮಧ್ಯೆ ಅರಾರಿಯಾದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಬಿಹಾರವು ಒಂದು ಕಾಲದಲ್ಲಿ "ಸಾಮಾಜಿಕ ನ್ಯಾಯ"ದ ಭೂಮಿಯಾಗಿತ್ತು ಆದರೆ 1990 ರ ದಶಕದಲ್ಲಿ ಆರ್‌ಜೆಡಿಯ "ಜಂಗಲ್‌ರಾಜ್" ದಾಳಿಗೆ ತುತ್ತಾಯಿ ನಾಶವಾಗಿ ಹೋಯಿತು ಎಂದರು.

"ಇಂದು, ನಿಮ್ಮ ಮತದ ಶಕ್ತಿಯ ಬಗ್ಗೆ ನಾನು ನಿಮಗೆ ಹೇಳುತ್ತಿದ್ದೇನೆ. ನಿಮ್ಮ ಅಜ್ಜ-ಅಜ್ಜಿಯರ, ತಾಯಿಯ ಅಜ್ಜ-ಅಜ್ಜಿಯರ ಮತಗಳು ಅಂದು ಬಿಹಾರವನ್ನು ಸಾಮಾಜಿಕ ನ್ಯಾಯದ ಭೂಮಿಯನ್ನಾಗಿ ಮಾಡಿತ್ತು. ಆದರೆ ನಂತರ, 90 ರ ದಶಕ ನಂತರ ಆರ್‌ಜೆಡಿಯ ಜಂಗಲ್‌ರಾಜ್ ಬಿಹಾರದ ಮೇಲೆ ದಾಳಿ ಮಾಡಿತು. ಜಂಗಲ್ ರಾಜ್ ಎಂದರೆ - ಕ್ರೌರ್ಯ, ಕಹಿ, ಕೆಟ್ಟ ಆಡಳಿತ, ಕೆಟ್ಟ ನಡವಳಿಕೆಯ, ಭ್ರಷ್ಟಾಚಾರದ ಆಡಳಿತ.

ಇವು ಜಂಗಲ್ ರಾಜ್‌ನ ಗುರುತಾಯಿತು, ಬಿಹಾರದ ದುರದೃಷ್ಟವಾಯಿತು. ನಿಮ್ಮ ಹೆತ್ತವರ ಕನಸುಗಳು ಪುಡಿಪುಡಿಯಾದವು ಎಂದು ಪ್ರಧಾನಿ ಹೇಳಿದರು. ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಹಾರವನ್ನು "ಜಂಗಲ್‌ರಾಜ್" ಸ್ಥಿತಿಯಿಂದ ಹೊರತಂದಿದ್ದಾರೆ ಎಂದು ಹೇಳುವ ಮೂಲಕ ಅವರು ಪ್ರಸ್ತುತ ಬಿಹಾರ ಸರ್ಕಾರವನ್ನು ಶ್ಲಾಘಿಸಿದರು.

2014 ರಿಂದ ಬಿಹಾರದಲ್ಲಿ ಅಭಿವೃದ್ಧಿಯ ವೇಗ ದ್ವಿಗುಣಗೊಂಡಿದೆ, ಇದರಿಂದಾಗಿ ರಾಜ್ಯಾದ್ಯಂತ ಐಐಟಿ, ಐಐಎಂ, ಎನ್‌ಎಲ್‌ಯು ಮತ್ತು ಏಮ್ಸ್‌ಗಳನ್ನು ತೆರೆಯಲಾಗಿದೆ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು.

ಎನ್‌ಡಿಎ ಸರ್ಕಾರದ ಅಡಿಯಲ್ಲಿ, ಬಿಹಾರವನ್ನು ಕಾಡಿನ ಆಳ್ವಿಕೆಯಿಂದ ಹೊರತರಲು ನಿತೀಶ್ ಕುಮಾರ್ ಅವರು ಬಹಳ ಶ್ರಮಿಸಿದ್ದಾರೆ. 2014 ರಲ್ಲಿ ಡಬಲ್ ಎಂಜಿನ್ ಸರ್ಕಾರ ರಚನೆಯಾದ ನಂತರ, ಬಿಹಾರದ ಅಭಿವೃದ್ಧಿಯಲ್ಲಿ ಹೊಸ ಆವೇಗ ಕಂಡುಬಂದಿದೆ. ಪಾಟ್ನಾದಲ್ಲಿ ಐಐಟಿ ತೆರೆಯಲಾಗಿದೆ, ಬೋಧ್ ಗಯಾದಲ್ಲಿ ಐಐಎಂ ತೆರೆಯಲಾಗಿದೆ, ಪಾಟ್ನಾದಲ್ಲಿ ಏಮ್ಸ್ ತೆರೆಯಲಾಗಿದೆ, ಏಮ್ಸ್ ದರ್ಭಾಂಗಾದ ಕೆಲಸವು ವೇಗವಾಗಿ ಪ್ರಗತಿಯಲ್ಲಿದೆ, ಈಗ ಬಿಹಾರದಲ್ಲಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯವೂ ಇದೆ, ಭಾಗಲ್ಪುರದಲ್ಲಿ ಐಐಐಟಿಯೂ ಇದೆ ಮತ್ತು ಬಿಹಾರದಲ್ಲಿ 4 ಕೇಂದ್ರೀಯ ವಿಶ್ವವಿದ್ಯಾಲಯಗಳನ್ನು ಸಹ ಸ್ಥಾಪಿಸಲಾಗಿದೆ ಎಂದು ಹೇಳಿದರು.

ನುಸುಳುಕೋರರ ಸಮಸ್ಯೆ

ರಾಜ್ಯಾದ್ಯಂತ ನುಸುಳುಕೋರರನ್ನು ಗುರುತಿಸುವ ಮತ್ತು ಅವರನ್ನು ಆಯಾ ದೇಶಗಳಿಗೆ ಹಿಂದಿರುಗಿಸುವ ಸವಾಲನ್ನು ಎನ್‌ಡಿಎ ಸರ್ಕಾರ ವಹಿಸಿಕೊಂಡಿದೆ ಎಂದರು.

ಆದರೆ, ನಮ್ಮ ಈ ಪ್ರಯತ್ನಗಳ ಮುಂದೆ ಒಂದು ದೊಡ್ಡ ಸವಾಲು ಇದೆ. ಆ ಸವಾಲು ಒಳನುಸುಳುವವರದ್ದು. ಪ್ರತಿಯೊಬ್ಬ ಒಳನುಸುಳುವವರನ್ನು ಗುರುತಿಸಿ ಅವರನ್ನು ದೇಶದಿಂದ ಗಡೀಪಾರು ಮಾಡುವಲ್ಲಿ ಎನ್‌ಡಿಎ ಸರ್ಕಾರ ಸಂಪೂರ್ಣ ಪ್ರಾಮಾಣಿಕತೆಯಿಂದ ತೊಡಗಿಸಿಕೊಂಡಿದೆ ಎಂದು ಪ್ರಧಾನಿ ಹೇಳಿದರು. ಆರ್‌ಜೆಡಿ ಮತ್ತು ಕಾಂಗ್ರೆಸ್ ಒಳನುಸುಳುವವರನ್ನು ರಕ್ಷಿಸಿ ಆಶ್ರಯ ನೀಡುತ್ತಿದೆ ಎಂದು ಅವರು ಆರೋಪಿಸಿದರು. ವಿರೋಧ ಪಕ್ಷಗಳು ಒಳನುಸುಳುವವರಿಗೆ ಆಶ್ರಯ ನೀಡಲು ವಿವಿಧ ರ್ಯಾಲಿಗಳನ್ನು ನಡೆಸುತ್ತವೆ ಎಂದು ಪ್ರಧಾನಿ ಮೋದಿ ಉಲ್ಲೇಖಿಸಿದರು.

ಆರ್‌ಜೆಡಿ ಮತ್ತು ಕಾಂಗ್ರೆಸ್ ಜನರು ಒಳನುಸುಳುವವರನ್ನು ಉಳಿಸುವಲ್ಲಿ ನಿರತರಾಗಿದ್ದಾರೆ. ಅವರು ಈ ಒಳನುಸುಳುವವರನ್ನು ರಕ್ಷಿಸಲು ಎಲ್ಲಾ ರೀತಿಯ ಸುಳ್ಳುಗಳನ್ನು ಹರಡುತ್ತಾರೆ, ಜನರನ್ನು ದಾರಿ ತಪ್ಪಿಸಲು ರಾಜಕೀಯ ಪ್ರವಾಸಗಳನ್ನು ಕೈಗೊಳ್ಳುತ್ತಾರೆ ಎಂದರು. ಅರಾರಿಯಾದಲ್ಲಿ ತಮ್ಮ ಭಾಷಣದ ನಂತರ, ಪ್ರಧಾನಿಯವರು ಭಾಗಲ್ಪುರಕ್ಕೆ ಭೇಟಿ ನೀಡಲಿದ್ದಾರೆ. ಭಾರತದ ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಬಿಹಾರವು ಮೊದಲ ಹಂತದ ವಿಧಾನಸಭಾ ಚುನಾವಣೆಯ ಮೊದಲ ನಾಲ್ಕು ಗಂಟೆಗಳಲ್ಲಿ ಶೇಕಡಾ 27.65 ರಷ್ಟು ಮತದಾನವನ್ನು ದಾಖಲಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಳಗಾವಿಯಲ್ಲಿ ತಾರಕಕ್ಕೇರಿದ ರೈತರ ಪ್ರತಿಭಟನೆ: ಸಂಪುಟ ಸಭೆ ನಂತರ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

ಬಿಹಾರ ವಿಧಾನಸಭಾ ಚುನಾವಣೆ 2025: ಮಧ್ಯಾಹ್ನ 3 ಗಂಟೆಯವರೆಗೂ ಶೇ. 53 ರಷ್ಟು ಮತದಾನ!

ಬಿಹಾರ ಡಿಸಿಎಂ ವಾಹನದ ಮೇಲೆ ಚಪ್ಪಲಿ, ಕಲ್ಲು ತೂರಾಟ: RJD ಗೂಂಡಾಗಳ ಮೇಲೆ ಬುಲ್ಡೋಜರ್ ನುಗ್ಗಿಸುತ್ತೇವೆ; DCM ವಿಜಯ್ ಸಿನ್ಹಾ ಆಕ್ರೋಶ, Video!

ಬಿಹಾರದಲ್ಲಿ 'ಮಹಾಘಟಬಂಧನ್' ಸೋಲುತ್ತಾ? ಪ್ರಿಯಾಂಕಾ ಗಾಂಧಿ ವಾದ್ರಾ ಹೀಗೆ ಅಂದಿದ್ಯಾಕೆ!

4ನೇ ಟಿ20 ಪಂದ್ಯ: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 48 ರನ್ ಭರ್ಜರಿ ಜಯ

SCROLL FOR NEXT