ರಾಹುಲ್ ಗಾಂಧಿ 
ದೇಶ

ಬಿಹಾರದಲ್ಲೂ ಮತಗಳ್ಳತನ: ರಕ್ಷಿಸುವ ಹೊಣೆ ಹೊತ್ತವರಿಂದಲೇ ಪ್ರಜಾಪ್ರಭುತ್ವದ ಕಗ್ಗೊಲೆ; ರಾಹುಲ್ ಗಾಂಧಿ ಆರೋಪ

ಸಂವಿಧಾನಕ್ಕೆ ದ್ರೋಹ ಮಾಡುತ್ತಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌, ಚುನಾವಣಾ ಆಯುಕ್ತರಾದ ಸುಖ್‌ಬಿರ್‌ ಸಿಂಗ್‌ ಸಂಧು ಹಾಗೂ ವಿವೇಕ್‌ ಜೋಶಿ ಅವರೇ 'ಪ್ರಜಾಪ್ರಭುತ್ವದ ಕಗ್ಗೊಲೆ'ಯ ಪ್ರಮುಖ ದೋಷಿಗಳು ಎಂದು ದೂಷಿಸಿದ್ದಾರೆ.

ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿಯೂ ಮತಗಳ್ಳತನದ ವರದಿಯಾಗಿದೆ. ಹಲವು ರಾಜ್ಯಗಳಲ್ಲಿ ಹಿಂದಿನ ಚುನಾವಣೆಗಳಲ್ಲಿ ಮತ ಚಲಾಯಿಸಿದ್ದ ಬಿಜೆಪಿಯ ಕೆಲವು ನಾಯಕರು ಮತ್ತು ಕಾರ್ಯಕರ್ತರು ಬಿಹಾರದಲ್ಲಿಯೂ ಮತ ಹಾಕಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಮತದಾನದ ಹಕ್ಕನ್ನು ರಕ್ಷಿಸುವ ಹೊಣೆ ಹೊತ್ತವರೇ (ಚುನಾವಣಾ ಆಯೋಗ) ಜನರ ಭವಿಷ್ಯವನ್ನು ಕದಿಯಲು ಪಾಲುದಾರಿಕೆ ವಹಿಸಿದ್ದಾರೆ. ಸಂವಿಧಾನಕ್ಕೆ ದ್ರೋಹ ಮಾಡುತ್ತಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌, ಚುನಾವಣಾ ಆಯುಕ್ತರಾದ ಸುಖ್‌ಬಿರ್‌ ಸಿಂಗ್‌ ಸಂಧು ಹಾಗೂ ವಿವೇಕ್‌ ಜೋಶಿ ಅವರೇ 'ಪ್ರಜಾಪ್ರಭುತ್ವದ ಕಗ್ಗೊಲೆ'ಯ ಪ್ರಮುಖ ದೋಷಿಗಳು ಎಂದು ದೂಷಿಸಿದ್ದಾರೆ.

ಸಾಮಾಜಿಕ ಮಾಧ್ಯಮ ವೇದಿಕೆ 'ಎಕ್ಸ್‌'ನಲ್ಲಿ ಹಿಂದಿಯಲ್ಲಿ ಪೋಸ್ಟ್‌ ಹಂಚಿಕೊಂಡಿರುವ ರಾಹುಲ್‌, ಪ್ರೀತಿಯ ಯುವ ಹಾಗೂ ಜೆನ್‌ ಝಿ ಸ್ನೇಹಿತರೇ, ಮತಗಳ್ಳತನದ ಮೂಲಕ ಹರಿಯಾಣದಲ್ಲಿ ಹೇಗೆ ಸರ್ಕಾರ ರಚಿಸಲಾಯಿತು, ಇಡೀ ರಾಜ್ಯದ ಸಾರ್ವಜನಿಕರ ಅಭಿಪ್ರಾಯವನ್ನು ಹೇಗೆ ಕಸಿಯಲಾಯಿತು ಎಂಬುದನ್ನು ನಿನ್ನೆಯಷ್ಟೇ ಸಾಕ್ಷಿ ಸಹಿತ ನಿಮ್ಮ ಮುಂದೆ ಇಟ್ಟಿದ್ದೆ.

ಸಮಗ್ರ ಪರಿಷ್ಕರಣೆಯ (ಎಸ್‌ಐಆರ್‌) ಮೂಲಕ ಮತದಾರರ ಪಟ್ಟಿಯನ್ನು ವ್ಯಾಪಕವಾಗಿ ತಿರುಚಲಾಗುತ್ತದೆ ಎಂಬ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಕೆಲವು ದಿನಗಳ ಹಿಂದೆ ಬಿಹಾರದಲ್ಲಿ 'ವೋಟರ್‌ ಅಧಿಕಾರ ಯಾತ್ರೆ' ನಡೆಸಿದ್ದೆ. ಇಂದು, ಬಿಹಾರದ ಮೂಲೆ ಮೂಲೆಗಳಿಂದ ವರದಿಯಾಗಿರುವ ಸುದ್ದಿಗಳು, ವಿಡಿಯೊಗಳು ಮತಗಳ್ಳತನದ ಸಾಕ್ಷ್ಯಗಳನ್ನು ಮತ್ತಷ್ಟು ಬಲಪಡಿಸಿವೆ' ಎಂದಿದ್ದಾರೆ.

ಲಕ್ಷಾಂತರ ಮತದಾರರನ್ನು ಈಗಾಗಲೇ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಇದೀಗ, ಜನರು ತಮ್ಮ ಹಕ್ಕು ಚಲಾಯಿಸದಂತೆ ಮತಗಟ್ಟೆಗಳ ಬಳಿ ತಡೆಯಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತಗಳ್ಳತನದ ಮೂಲಕ ರಚನೆಯಾದ ಸರ್ಕಾರ ಯುವಕರು, ಜೆನ್‌ ಝಿ, ಸಾರ್ವಜನಿಕರ ಹಿತದೃಷ್ಟಿಯಿಂದ ಎಂದಿಗೂ ಕೆಲಸ ಮಾಡುವುದಿಲ್ಲ ಎಂಬುದು ನೆನಪಿರಲಿ ಎಂದು ಹೇಳಿದ್ದಾರೆ.

ಜ್ಞಾನೇಶ್‌ ಕುಮಾರ್‌, ಸುಖ್‌ಬಿರ್‌ ಸಿಂಗ್‌ ಸಂಧು ಹಾಗೂ ವಿವೇಕ್‌ ಜೋಶಿ ಅವರು ಪ್ರಜಾಪ್ರಭುತ್ವದ ಕಗ್ಗೊಲೆಯ ಪ್ರಮುಖ ಅಪರಾಧಿಗಳು. ಇವರು ಚುನಾವಣಾ ಆಯೋಗದ ಉನ್ನತ ಅಧಿಕಾರಿಗಳಾಗಿದ್ದರೂ, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ವಿರುದ್ಧ ದೊಡ್ಡ ಪ್ರಮಾಣದ ದ್ರೋಹವೆಸಗುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಗೆಹರಿಸಿಕೊಳ್ಳಲು ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ, ನಾಯಕತ್ವ ಗೊಂದಲ 'ಮಾಧ್ಯಮಗಳ ಸೃಷ್ಟಿ': ಡಿಕೆಶಿ

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸೋಲು; BMC ಚುನಾವಣೆಗೆ ಕಾಂಗ್ರೆಸ್ ಜತೆ ಮೈತ್ರಿಗೆ ಶಿವಸೇನೆ(ಯುಬಿಟಿ) ಯತ್ನ!

ದೇವರೇ ಇದ್ದಿದ್ದರೆ ಗಾಜಾದಲ್ಲಿ ಅಷ್ಟು ಜನ ಯಾಕೆ ಸಾಯ್ತಿದ್ರೂ! ಆ ದೇವರಿಗಿಂತ ನಮ್ಮ ಪ್ರಧಾನಿಯೇ ಉತ್ತಮ; ಮುಫ್ತಿಗೆ ಜಾವೇದ್ ಅಖ್ತರ್ ತಿರುಗೇಟು

Mark: ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಳ್ಳೋದು ಯಾಕೆ? ಸುದೀಪ್ ಬೆನ್ನಿಗೆ ನಿಂತ ಚಕ್ರವರ್ತಿ ಚಂದ್ರಚೂಡ್

Hate Speech Bill: ದ್ವೇಷ ಭಾಷಣ ವಿಧೇಯಕ ತಡೆಹಿಡಿಯುವಂತೆ ರಾಜ್ಯಪಾಲರಿಗೆ ಯತ್ನಾಳ ಪತ್ರ!

SCROLL FOR NEXT