ಶರದ್ ಪವಾರ್  
ದೇಶ

ಬಿಹಾರದಲ್ಲಿ ಎನ್‌ಡಿಎ ಸೋತರೂ ಆಶ್ಚರ್ಯವೇನಿಲ್ಲ: ಶರದ್ ಪವಾರ್

ಬಿಹಾರ ದೇಶದ ಉಳಿದ ಭಾಗಗಳಿಗಿಂತ ಭಿನ್ನವಾದ ರಾಜ್ಯವಾಗಿದ್ದು, ದೇಶದ ರಾಜಕೀಯದಲ್ಲಿ ಕೆಲವು ನಿರ್ಣಾಯಕ ಕ್ಷಣಗಳಿಗೆ ಸಾಕ್ಷಿಯಾಗಿದೆ ಎಂದರು.

ಮುಂಬೈ: ಪೂರ್ವ ರಾಜ್ಯದ ಜನರು ಬದಲಾವಣೆಯನ್ನು ಬಯಸುತ್ತಿರುವುದರಿಂದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸೋತರೂ ಆಶ್ಚರ್ಯವೇನಿಲ್ಲ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ-ಶರದ್‌ಚಂದ್ರ ಪವಾರ್ ಪಕ್ಷದ ಅಧ್ಯಕ್ಷ ಶರದ್ ಪವಾರ್ ಶನಿವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಪವಾರ್, ಬಿಹಾರ ದೇಶದ ಉಳಿದ ಭಾಗಗಳಿಗಿಂತ ಭಿನ್ನವಾದ ರಾಜ್ಯವಾಗಿದ್ದು, ದೇಶದ ರಾಜಕೀಯದಲ್ಲಿ ಕೆಲವು ನಿರ್ಣಾಯಕ ಕ್ಷಣಗಳಿಗೆ ಸಾಕ್ಷಿಯಾಗಿದೆ ಎಂದರು.

ಹಿರಿಯ ರಾಜಕಾರಣಿಯಾಗಿರುವ ಶರದ್ ಪವಾರ್, ಬಿಹಾರದಲ್ಲಿ ಪ್ರಚಾರ ಮಾಡಿಲ್ಲವಾದರೂ ರಾಜ್ಯದಲ್ಲಿನ ತಮ್ಮ ಸಂಪರ್ಕಗಳಿಂದ ಪಡೆದ ಪ್ರತಿಕ್ರಿಯೆಗಳ ಪ್ರಕಾರ, ಎನ್‌ಡಿಎ ಅಧಿಕಾರ ಕಳೆದುಕೊಂಡರೂ ಆಶ್ಚರ್ಯವೇನಿಲ್ಲ. ಬಿಹಾರದ ಜನರು ಬದಲಾವಣೆ ಬಯಸುತ್ತಾರೆ ಎಂದು ಅವರು ಹೇಳಿದರು.

"ಇದು ರಾಜಕೀಯ ಅರಿವು ಹೊಂದಿರುವ ಬಡ ರಾಜ್ಯ. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಚಂಪಾರಣ್‌ನಲ್ಲಿ ಮಹಾತ್ಮ ಗಾಂಧಿಯವರ ಹೋರಾಟ, ತುರ್ತು ಪರಿಸ್ಥಿತಿಯ ವಿರುದ್ಧ ಜಯಪ್ರಕಾಶ್ ನಾರಾಯಣ್ ಅವರ ಆಂದೋಲನ ಮತ್ತು ಇಂದಿರಾ ಗಾಂಧಿಯವರು ವಿರೋಧ ಪಕ್ಷದಲ್ಲಿದ್ದಾಗ ಆನೆಯ ಮೇಲೆ ಸವಾರಿ ಮಾಡಿದ ಬೆಲ್ಚಿಗೆ ಭೇಟಿ ನೀಡಿದದ್ದು, ಭಾರತೀಯ ರಾಜಕೀಯದಲ್ಲಿ ನಿರ್ಣಾಯಕ ಕ್ಷಣಗಳಾಗಿವೆ ಎಂದು ಅವರು ಹೇಳಿದರು.

ಮೊನ್ನೆ ನಡೆದ ಬಿಹಾರ ವಿಧಾನಸಭೆಯ ಮೊದಲ ಹಂತದ ಚುನಾವಣೆಯಲ್ಲಿ ದಾಖಲೆಯ ಶೇ. 65. 08 ರಷ್ಟು ಮತದಾನವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉಗ್ರರ ವಿರುದ್ಧ 'ಪ್ರಹಾರ್' ನಿರ್ಣಾಯಕ: ಕೇಂದ್ರದಿಂದ ದೇಶದ ಮೊದಲ ಭಯೋತ್ಪಾದನಾ ವಿರೋಧಿ ನೀತಿ ಬಿಡುಗಡೆ!

ರನ್ ರೇಟ್ ಹೆಚ್ಚಿಸಿಕೊಳ್ಳಲು ಜಿಂಬಾಬ್ವೆ ವಿರುದ್ಧ ದಾಖಲೆಯ 254 ರನ್ ಸಿಡಿಸಿದ ವೆಸ್ಟ್ ಇಂಡೀಸ್, ಭಾರತಕ್ಕೆ ಕಂಟಕ!

T20 World Cup 2026: ಜಿಂಬಾಬ್ವೆ ವಿರುದ್ಧ ವೆಸ್ಟ್ ಇಂಡೀಸ್ ಗೆ 107 ರನ್ ಗಳ ಭರ್ಜರಿ ಜಯ

ವಿಬಿ ಜಿ ರಾಮ್ ಜಿಯಿಂದ 16.12 ಕೋಟಿ ಜನ ನಿರುದ್ಯೋಗಿಗಳು; ಮನರೇಗಾ ಮರುಜಾರಿಗೊಳಿಸುವವರೆಗೆ ಹೋರಾಟ

IDFC First Bank ವಂಚನೆ ಪ್ರಕರಣ: ತನಿಖೆಗೆ ಆದೇಶಿಸಿದ ಹರಿಯಾಣ CM ಸೈನಿ

SCROLL FOR NEXT