ಸಾಂದರ್ಭಿಕ ಚಿತ್ರ 
ದೇಶ

ಸಂಶೋಧನಾ ವಿದ್ಯಾರ್ಥಿ ವಿರುದ್ಧ ಜಾತಿ ನಿಂದನೆ ಆರೋಪ: ಕೇರಳ ವಿಶ್ವವಿದ್ಯಾನಿಲಯದ ಸಂಸ್ಕೃತ ವಿಭಾಗದ ಮುಖ್ಯಸ್ಥ ವಿರುದ್ಧ FIR!

ಎಂಫಿಲ್ ಗೆ ಸೇರಿದಾಗಿನಿಂದ ಪ್ರಾಧ್ಯಾಪಕರು ತಮ್ಮ ವಿರುದ್ಧ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ವಿಪಿನ್ ವಿಜಯನ್ ಅವರು ನೀಡಿದ ದೂರಿನ ಆಧಾರದ ಮೇಲೆ ಶನಿವಾರ ಎಫ್‌ಐಆರ್ ದಾಖಲಿಸಲಾಗಿದೆ.

ತಿರುವನಂತಪುರಂ: ಸಂಶೋಧನಾ ವಿದ್ಯಾರ್ಥಿಯ ವಿರುದ್ಧ ಜಾತಿ ನಿಂದನೆ ಹೇಳಿಕೆ ನೀಡಿದ ಆರೋಪದ ಮೇಲೆ ಕೇರಳ ವಿಶ್ವವಿದ್ಯಾಲಯದ ಸಂಸ್ಕೃತ ವಿಭಾಗದ ಮುಖ್ಯಸ್ಥರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಕಾರ್ಯವಟ್ಟಂ ಕ್ಯಾಂಪಸ್‌ನ ಓರಿಯೆಂಟಲ್ ಸ್ಟಡೀಸ್ ಫ್ಯಾಕಲ್ಟಿಯ ವಿಭಾಗದ ಮುಖ್ಯಸ್ಥೆ ಮತ್ತು ಡೀನ್ ಆಗಿರುವ ಸಿ ಎನ್ ವಿಜಯಕುಮಾರಿ ಅವರ ವಿರುದ್ಧ ಶ್ರೀಕಾರ್ಯಂ ಪೊಲೀಸರು ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಎಂಫಿಲ್ ಗೆ ಸೇರಿದಾಗಿನಿಂದ ಪ್ರಾಧ್ಯಾಪಕರು ತಮ್ಮ ವಿರುದ್ಧ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ವಿಪಿನ್ ವಿಜಯನ್ ಅವರು ನೀಡಿದ ದೂರಿನ ಆಧಾರದ ಮೇಲೆ ಶನಿವಾರ ಎಫ್‌ಐಆರ್ ದಾಖಲಿಸಲಾಗಿದೆ.

ತಮ್ಮ ಜಾತಿ ತಿಳಿದ ನಂತರ ಪ್ರಾಧ್ಯಾಪಕರು ತನ್ನ ಪ್ರಬಂಧಕ್ಕೆ ಸಹಿ ಹಾಕಲು ನಿರಾಕರಿಸಿದ್ದರು. ಪಿಎಚ್‌ಡಿ ಪೂರ್ಣಗೊಳಿಸಲು ಸಹಿ ಅಗತ್ಯವಿದ್ದ ಕಾರಣ, ವಿಪಿನ್ ಅವರನ್ನು ಮತ್ತೆ ಸಂಪರ್ಕಿಸಿದಾಗ, ಅವರು ಜಾತಿ ನಿಂದನೆ ಮಾಡಿದ್ದಾರೆ ಎಂದು ದೂರಿನಲ್ಲಿ ಅವರು ಉಲ್ಲೇಖಿಸಿದ್ದಾರೆ. 2015 ರಲ್ಲಿ ವಿಜಯಕುಮಾರಿ ಅವರು ಎಂಫಿಲ್ ಗೆ ಸೇರಿದಾಗಿನಿಂದ ಅವರು ಜಾತಿ ಅವಮಾನವನ್ನು ಎದುರಿಸುತ್ತಿರುವುದಾಗಿ ಅವರು ಹೇಳಿದ್ದಾರೆ.

ಈ ಹಿಂದೆ ಆರೋಪವನ್ನು ನಿರಾಕರಿಸಿದ್ದ ವಿಜಯಲಕ್ಷ್ಮಿ, ವಿಪಿನ್ ಅವರಿಗೆ ಸಂಸ್ಕೃತದಲ್ಲಿ ಪ್ರಾವೀಣ್ಯತೆ ಇಲ್ಲದ ಕಾರಣ ಅವರ ಪ್ರಬಂಧಕ್ಕೆ ಸಹಿ ಹಾಕಲು ನಿರಾಕರಿಸಿದ್ದು, ಅವರ ಪ್ರಬಂಧ ತಪ್ಪುಗಳಿಂದ ಕೂಡಿರುವುದಾಗಿ ಹೇಳಿದ್ದರು. ಕಾರ್ಯವಟ್ಟಂ ಕ್ಯಾಂಪಸ್‌ನ SFI ನಾಯಕರಾಗಿರುವ ವಿಪಿನ್, ಆಧ್ಯಾತ್ಮಿಕ ನಾಯಕ ಚಟ್ಟಂಬಿ ಸ್ವಾಮಿಕಲ್ ಅವರ ಕುರಿತು ತಮ್ಮ ಪ್ರಬಂಧವನ್ನು ಬರೆದಿದ್ದಾರೆ.

ಪರೀಕ್ಷಾ ಮಂಡಳಿಯ ಅಧ್ಯಕ್ಷರು ಅಭ್ಯರ್ಥಿಗೆ ಪಿಎಚ್‌ಡಿ ನೀಡಲು ಶಿಫಾರಸು ಮಾಡಿದಿದ್ದರು. ಆದರೆ ವಿಜಯಕುಮಾರಿ ಆಕ್ಷೇಪಣೆಗಳನ್ನು ಎತ್ತುವ ಮೂಲಕ ಉಪ ಕುಲಪತಿ ಡಾ. ಮೋಹನನ್ ಕುನ್ನುಮಲ್ ಅವರಿಗೆ ಪತ್ರ ಬರೆದಿದ್ದಾರೆ ಎಂದು ವರದಿಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Gautam Adaniಗೆ ಬಿಗ್ ರಿಲೀಫ್: ಎಲ್ಲ ಪ್ರಕರಣಗಳ ವಿಚಾರಣೆ ಶಾಶ್ವತವಾಗಿ ಕೈ ಬಿಟ್ಟ ಅಮೆರಿಕ: ವರದಿ

ರಷ್ಯಾ ಮೇಲೆ ಉಕ್ರೇನ್ ಡ್ರೋನ್ ದಾಳಿ: ಒಡಿಶಾ ಮೂಲದ ವ್ಯಕ್ತಿ ಸಾವು, ಇಬ್ಬರಿಗೆ ಗಾಯ

IPL 2026: ಸ್ಟಂಪೌಟ್ ಮಾಡಿದ Sanju Samson ವಿರುದ್ಧ Klaasen ಆಕ್ರೋಶ, ಮೈದಾನದಲ್ಲೇ ಹೈಡ್ರಾಮಾ, ಆಗಿದ್ದೇನು?

ಸಿಎಂ ಸುವೇಂದು ಅಧಿಕಾರಿ ಪಿಎ ಕೊಲೆ ಕೇಸ್: ಪ್ರಮುಖ ಶೂಟರ್ ರಾಜ್‌ಕುಮಾರ್ ಸಿಂಗ್ ಬಂಧಿಸಿದ CBI

IPL 2026: SRH ಗೆಲುವಿನ ದಡ ಸೇರಿಸಿದ Ishan Kishan, ತವರಿನಲ್ಲೇ CSKಗೆ ಮುಖಭಂಗ, ಪ್ಲೇಆಫ್ ನಿಂದ ಬಹುತೇಕ ಔಟ್!

SCROLL FOR NEXT