ಮೂವರು ಶಂಕಿತ ಉಗ್ರರ ಬಂಧನ Photo| ANI
ದೇಶ

Gujarat: ದೇಶಾದ್ಯಂತ ಭಯೋತ್ಪಾದಕ ದಾಳಿಗೆ ಸ್ಕೆಚ್; ಡಾಕ್ಟರ್ ಸೇರಿ ಮೂವರು ಶಂಕಿತ ಉಗ್ರರನ್ನು ಬಂಧಿಸಿದ ಗುಜರಾತ್ ATS!

ದೇಶದ ವಿವಿಧ ಭಾಗಗಳಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸಲು ಯೋಜಿಸುತ್ತಿದ್ದರು" ಎಂದು ಗುಜರಾತ್ ಎಟಿಎಸ್ ಹೇಳಿಕೆಯಲ್ಲಿ ತಿಳಿಸಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

ಅಹಮದಾಬಾದ್: ದೇಶಾದ್ಯಂತ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಿದ್ದ ಆರೋಪದ ಮೇಲೆ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಭಾನುವಾರ ಅಹಮದಾಬಾದ್‌ನಿಂದ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದ್ದ ಮೂವರು ಶಂಕಿತರನ್ನು ಬಂಧಿಸಿದೆ.

ಮೂವರು ಶಂಕಿತರ ಚಲನವಲನ ಮೇಲೆ ಕಳೆದ ವರ್ಷದಿಂದ ನಿಗಾ ವಹಿಸಲಾಗಿತ್ತು ಎಂದು ಗುಜರಾತ್ ಎಟಿಎಸ್ ಹೇಳಿದೆ. ಮೂವರು ಶಂಕಿತರನ್ನು ಗುಜರಾತ್ ಎಟಿಎಸ್ ಬಂಧಿಸಿದೆ. ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದ್ದಾಗ ಮೂವರನ್ನು ಬಂಧಿಸಲಾಗಿದೆ.

ಅವರು ದೇಶದ ವಿವಿಧ ಭಾಗಗಳಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸಲು ಯೋಜಿಸುತ್ತಿದ್ದರು" ಎಂದು ಗುಜರಾತ್ ಎಟಿಎಸ್ ಹೇಳಿಕೆಯಲ್ಲಿ ತಿಳಿಸಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

ಈ ವರ್ಷದ ಆರಂಭದಲ್ಲಿ ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿದ್ದ ಮತ್ತು ಆನ್ ಲೈನ್ ನಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಸುತ್ತಿದ್ದ ಆರೋಪದ ಮೇರೆಗೆ ಬೆಂಗಳೂರಿನ ಮಹಿಳೆ ಸೇರಿದಂತೆ ಐವರು ಅಲ್ ಖೈದಾ ಭಯೋತ್ಪಾದಕರನ್ನು ಗುಜರಾತ್ ATS ಬಂಧಿಸಿತ್ತು.

ಭಯೋತ್ಪಾದಕ ಸಂಘಟನೆ ಅಲ್ ಖೈದಾ ಜೊತೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಬೆಂಗಳೂರಿನ 30 ವರ್ಷದ ಸಮಾ ಪರ್ವೀನ್ ಎಂಬ ಮಹಿಳೆಯನ್ನು ಎಟಿಎಸ್ ಬಂಧಿಸಿತ್ತು. ಅವರು ಅಲ್ ಖೈದಾ ಜೊತೆ ಸಂಪರ್ಕ ಹೊಂದಿದ್ದಕ್ಕಾಗಿ ಬಂಧಿಸಲಾಗಿದೆ.

ಆಕೆಯ ಬಂಧನದ ನಂತರ ಇದೀಗ ಮೂವರು ಶಂಕಿತ ಉಗ್ರರನ್ನು ಬಂಧಿಸಲಾಗಿದೆ ಎಂದು ಗುಜರಾತ್ ಎಟಿಎಸ್ ಉಪ ಪೊಲೀಸ್ ಮಹಾನಿರ್ದೇಶಕ ಸುನಿಲ್ ಜೋಶಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉತ್ತರಾಖಂಡದಲ್ಲಿ 8,000 ಕೋಟಿ ರೂ. ಯೋಜನೆಗಳಿಗೆ ಮೋದಿ ಚಾಲನೆ; 'ವಿಶ್ವದ ಆಧ್ಯಾತ್ಮಿಕ ರಾಜಧಾನಿ' ಮಾಡುವ ಗುರಿ

ರಾಜ್ಯ ಸರ್ಕಾರ ಎರಡು ವರ್ಷದಲ್ಲಿ ರೂ.1 ಲಕ್ಷ ಕೋಟಿಯನ್ನು ನೇರವಾಗಿ ರಾಜ್ಯದ 'ಜನರ ಜೇಬಿ'ಗೆ ಹಾಕಿದೆ: ಸಿಎಂ ಸಿದ್ದರಾಮಯ್ಯ

ಮದಗಜಗಳ ಕಾದಾಟ: ಕ್ಯಾಪ್ಟನ್ ಜೊತೆ ಭೀಕರ ಸಂಘರ್ಷ, ಕಾಡಾನೆ ಭೀಮನ ದಂತ ಮುರಿತ!

ಜಲಪಾತ ವೀಕ್ಷಣೆಗೆ ತೆರಳಿದ್ದಾಗ ದುರಂತ: ಮೂವರು NIT ವಿದ್ಯಾರ್ಥಿಗಳು ನೀರುಪಾಲು!

ಶಾಕಿಂಗ್: 14 ವರ್ಷದ ಬಾಲಕನ ಬೆದರಿಸಿ, ಅಪಹರಿಸಿ 'ಕಾಮಕೇಳಿ', 38 ವರ್ಷದ ಮಹಿಳೆಗೆ 54 ವರ್ಷ ಜೈಲು, 6 ಲಕ್ಷ ರೂ ಪರಿಹಾರಕ್ಕೆ ಆದೇಶ!

SCROLL FOR NEXT