ಸಾಂದರ್ಭಿಕ ಚಿತ್ರ 
ದೇಶ

ದೆಹಲಿ: ಅಕ್ರಮವಾಗಿ 14 ವೆಪನ್, ಮದ್ದುಗುಂಡು ಹೊಂದಿದ್ದ ಶಸ್ತ್ರಾಸ್ತ್ರ ಪೂರೈಕೆದಾರನ ಬಂಧನ!

ಗೌರವ್ ಕುಮಾರ್ ಎಂದು ಗುರುತಿಸಲಾದ ಆರೋಪಿಯನ್ನು ರೋಹಿಣಿಯ ಮಹಾದೇವ್ ಚೌಕ್ ಬಳಿ ಬಂಧಿಸಲಾಗಿದ್ದು, ಆತನ ಬಳಿ ಇದ್ದ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.

ನವದೆಹಲಿ: ದೆಹಲಿ-ಎನ್‌ಸಿಆರ್‌ನಲ್ಲಿರುವ ಅಪರಾಧಿಗಳಿಗೆ ಮಧ್ಯಪ್ರದೇಶದಿಂದ ಅಕ್ರಮವಾಗಿ ಬಂದೂಕುಗಳನ್ನು ಪೂರೈಸುತ್ತಿದ್ದ 27 ವರ್ಷದ ಶಸ್ತ್ರಾಸ್ತ್ರ ಪೂರೈಕೆದಾರನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ಗೌರವ್ ಕುಮಾರ್ ಎಂದು ಗುರುತಿಸಲಾದ ಆರೋಪಿಯನ್ನು ರೋಹಿಣಿಯ ಮಹಾದೇವ್ ಚೌಕ್ ಬಳಿ ಬಂಧಿಸಲಾಗಿದ್ದು, ಆತನ ಬಳಿ ಇದ್ದ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.

ಪೊಲೀಸರ ಪ್ರಕಾರ, ಆರು ಅರೆ-ಸ್ವಯಂಚಾಲಿತ ಪಿಸ್ತೂಲ್‌ಗಳು ಮತ್ತು ಎಂಟು ಸಿಂಗಲ್-ಶಾಟ್ ಪಿಸ್ತೂಲ್‌ಗಳು ಸೇರಿದಂತೆ 14 ಅಕ್ರಮ ಬಂದೂಕುಗಳು ಮತ್ತು 56 ಲೈವ್ ಕಾರ್ಟ್ರಿಡ್ಜ್‌ಗಳು ಹಾಗೂ ನಾಲ್ಕು ಹೆಚ್ಚುವರಿ ಮ್ಯಾಗಜೀನ್‌ಗಳನ್ನು ಬಂಧಿತ ಶಸ್ತ್ರಾಸ್ತ್ರ ಪೂರೈಕೆದಾರನಿಂದ ವಶಪಡಿಸಿಕೊಳ್ಳಲಾಗಿದೆ.

ವಿಚಾರಣೆಯ ಸಮಯದಲ್ಲಿ, ಗೌರವ್ ಮಧ್ಯಪ್ರದೇಶದ ಖಾರ್ಗೋನ್‌ನಲ್ಲಿರುವ ಪೂರೈಕೆದಾರರಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಿದ್ದೇನೆ ಮತ್ತು ಕಳೆದ ಹಲವಾರು ತಿಂಗಳುಗಳಿಂದ ದೆಹಲಿ-ಎನ್‌ಸಿಆರ್ ಮತ್ತು ಉತ್ತರ ಪ್ರದೇಶದ ದರೋಡೆಕೋರರು ಹಾಗೂ ಇತರ ಕ್ರಿಮಿನಲ್ ಗಳಿಗೆ ಮಾರಾಟ ಮಾಡುತ್ತಿದ್ದೇನೆ ಎಂದು ಬಹಿರಂಗಪಡಿಸಿದ್ದಾನೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಹುಲ್ ಗಾಂಧಿ ಲೋಕಸಭಾ ಸದಸ್ಯತ್ವ ರದ್ದುಗೊಳಿಸಲು ಬಿಜೆಪಿ ಸಂಸದ ನೋಟಿಸ್; ಕಾರಣ ಏನು ಗೊತ್ತಾ?

ದೂರದರ್ಶನದ ಖ್ಯಾತ 'ನ್ಯೂಸ್ ಆಂಕರ್' ಸರಳ ಮಹೇಶ್ವರಿ ನಿಧನ!

ರಾಹುಲ್ ವಿರುದ್ಧ ಸರ್ಕಾರ ಹಕ್ಕುಚ್ಯುತಿ ಮಂಡಿಸುವ ಸಾಧ್ಯತೆ ಇಲ್ಲ, ಆದರೆ...

IPL 2026: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆ; ಪರಮೇಶ್ವರ ಜತೆ ಸಭೆ ಸಕಾರಾತ್ಮಕ- ಸರ್ಕಾರದ ಅಂಗಳದಲ್ಲಿ ಚೆಂಡು!

ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ವಿರುದ್ಧ ಪ್ರತಿಪಕ್ಷಗಳ ಪ್ರತಿಭಟನೆ; 'ಟ್ರ್ಯಾಪ್ ಡೀಲ್' ಎಂದು ಟೀಕೆ

SCROLL FOR NEXT