ನವದೆಹಲಿ: ದೆಹಲಿಯ ಐತಿಹಾಸಿಕ ಕೆಂಪು ಕೋಟೆ ಬಳಿ 12 ಜನರನ್ನು ಬಲಿ ಪಡೆದ ಪ್ರಬಲ ಸ್ಫೋಟದ ತನಿಖೆ ನಡೆಸುತ್ತಿರುವ ತನಿಖಾ ಸಂಸ್ಥೆಗಳು, ಮಿಲಿಟರಿ ದರ್ಜೆಯ ಸ್ಫೋಟಕ ಬಳಕೆಯಾಗಿರಬಹುದು ಎಂದು ಶಂಕಿಸಿದ್ದಾರೆ.
ಸ್ಪೋಟದ ತೀವ್ರತೆ ಹಾಗೂ ಪರಿಣಾಮದ ಮಾದರಿಯನ್ನು ಗಮನಿಸಿದರೆ ಮಿಲಿಟರಿ ದರ್ಜೆ ಸ್ಪೋಟಕ ಬಳಕೆಯಾಗಿರುವುದಾಗಿ ಅನುಮಾನ ಪಟ್ಟಿರುವುದಾಗಿ ಮೂಲಗಳು ತಿಳಿಸಿವೆ.
ಸೋಮವಾರ ಸಂಜೆ ಸಂಭವಿಸಿದ ಸ್ಫೋಟಕ್ಕೂ ಕೆಲವೇ ಗಂಟೆಗಳ ಮುನ್ನಾ ಪತ್ತೆಯಾದ ಫರಿದಾಬಾದ್ ಭಯೋತ್ಪಾದಕ ಜಾಲಕ್ಕೆ ಸೇರಿದ ಆತ್ಮಹತ್ಯಾ ಬಾಂಬರ್ ಆಗಿರುವ ಮೊಹಮ್ಮದ್ ಉಮರ್ ಈ ದಾಳಿ ನಡೆಸಿದ್ದಾನೆ.
ದಾಳಿಯ ವೇಳೆ ಅಧಿಕಾರಿಗಳು ಅಮೋನಿಯಂ ನೈಟ್ರೇಟ್ ಸೇರಿದಂತೆ ಸುಮಾರು 2,900 ಕೆಜಿ ಬಾಂಬ್ ತಯಾರಿಸುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.