ಅಹಮದಾಬಾದ್: ಡ್ರಗ್ಸ್ ನೀಡಿ ಮಹಿಳೆಯೊಬ್ಬರನ್ನು ಅತ್ಯಾಚಾರ ಮಾಡಿ ನಂತರ ಬಲವಂತದ ಮತಾಂತರಕ್ಕಾಗಿ ಒತ್ತಾಯಿಸಿದ್ದ ಗುಜರಾತ್‌ನ ಅಂಕಲೇಶ್ವರದ 52 ವರ್ಷದ ಕೆನಡಾ ಮೂಲದ ಮದರಸಾ ಮೌಲ್ವಿಯನ್ನು ಬಂಧಿಸಲಾಗಿದೆ. ಸಂತ್ರಸ್ತೆಯ ದೂರಿನ ಬೆನ್ನಲ್ಲೇ ಆರೋಪಿಯನ್ನು ಬಂಧಿಸಿರುವ ಪೊಲೀಸರು ವ್ಯಾಪಕ ತನಿಖೆ ಆರಂಭಿಸಿದ್ದಾರೆ. ಅಂಕಲೇಶ್ವರ-ಸೂರತ್ ಗಡಿಯಲ್ಲಿ ನಡೆದ ಅಪರಾಧ ಗುಜರಾತ್‌ನ ಕಾನೂನು ಮತ್ತು ಸುವ್ಯವಸ್ಥೆ ವ್ಯವಸ್ಥೆಯನ್ನು ಅಲುಗಾಡಿಸಿದೆ.
52 ವರ್ಷದ ಮೌಲ್ವಿ ಅಜ್ವಾದ್ ತನಗೆ ಪರಿಚಯವಾಗಿದ್ದ ಮಹಿಳೆಗೆ ಆಗಾಗ್ಗೆ ಕರೆಗಳು ಮತ್ತು ಮೆಸೇಜ್ ಕಳುಹಿಸುತ್ತಿದ್ದನು. ಮದುವೆಯಾಗುವುದಾಗಿ ಭರವಸೆ ನೀಡಿ ಮಹಿಳೆಯನ್ನು ರೇಪ್ ಮಾಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ನವೆಂಬರ್ 9ರಂದು ಆರೋಪಿ ಸಂತ್ರಸ್ತ ಮಹಿಳೆಯನ್ನು ಮದರಸಾಗೆ ಕರೆಸಿಕೊಂಡು ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಿದ್ದಾರೆ. ದೂರಿನ ಪ್ರಕಾರ, ಮಹಿಳೆಗೆ ಪರಿಮಳಯುಕ್ತ ನೀರು ನೀಡಿ ಪ್ರಜ್ಞಾತಪ್ಪುವಂತೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.
ಆಕೆಯ ಅಸಹಾಯಕತೆಯನ್ನು ಬಳಸಿಕೊಂಡು ಮೌಲ್ವಿ ಅವಳ ಮೇಲೆ ಎರಡು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಭಯಾನಕವೆಂದರೆ, ಇದು ಒಂದು ಉದ್ದೇಶಪೂರ್ವಕ ಕೃತ್ಯವಾಗಿದ್ದು ನಂತರ ನಿರಂತರವಾಗಿ ಬೆದರಿಕೆ ಹಾಕುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಗೆ ಪ್ರಜ್ಞೆ ನಂತರ ಮೌಲ್ವಿ ಧಾರ್ಮಿಕ ಮತಾಂತರಕ್ಕೆ ಒತ್ತಾಯಿಸಲು ಪ್ರಯತ್ನಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಇದರನ್ನು ವಿರೋಧಿಸಿದರೆ ಸಾಯಿಸುವುದಾಗಿ ಅಥವಾ "ಆಕೆಯ ಮಕ್ಕಳನ್ನು ಕೊಲ್ಲುತ್ತೇನೆ" ಎಂದು ಬೆದರಿಕೆ ಹಾಕಿದ್ದಾನೆ ಎಂದು ವರದಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.