ಮೊರಾದಾಬಾದ್: ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದ 13 ವರ್ಷದ ವಿದ್ಯಾರ್ಥಿನಿಯ ಮೇಲೆ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿರುವ ವಿಡಿಯೋ ವೈರಲ್ ಆಗಿದ್ದು, ಕಾಮುಕನ ಪತ್ತೆಗೆ ಪೊಲೀಸ್ ಇಲಾಖೆ 25 ಸಾವಿರ ರೂ ಬಹುಮಾನ ಘೋಷಿಸಿದೆ.
ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಈ ಘಟನೆ ನಡೆದಿದ್ದು, ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದ 13 ವರ್ಷದ ವಿದ್ಯಾರ್ಥಿನಿಯ ಮೇಲೆ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮೂಲಗಳ ಪ್ರಕಾರ 8ನೇ ತರಗತಿಯಲ್ಲಿ ಓದುತ್ತಿರುವ ಅಪ್ರಾಪ್ತ ಬಾಲಕಿ ಕಿರಿದಾದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅದೇ ರಸ್ತೆಯಲ್ಲಿ ಸೈಕಲ್ ನಲ್ಲಿ ಬಂದ ಆರೋಪಿ ಆಕೆಯ ಪಕ್ಕಕ್ಕೆ ಬಂದು ನಿಂತು ಆಕೆಯ ಎದೆ ಮುಟ್ಟಿ ಅನುಚಿತವಾಗಿ ವರ್ತಿಸುತ್ತಾನೆ. ಬಳಿಕ ಬಾಲಕಿ ಆತನನ್ನು ಧೈರ್ಯವಾಗಿ ಎದುರಿಸಿ ಪ್ರತಿದಾಳಿ ನಡೆಸುತ್ತಾಳೆ. ಈ ವೇಳೆ ಆರೋಪಿ ಅಲ್ಲಿಂದ ಕಾಲ್ಕೀಳುತ್ತಾನೆ.
ಆ ವ್ಯಕ್ತಿಯ ಕೃತ್ಯದಿಂದ ಆಘಾತಕ್ಕೊಳಗಾದ ಹುಡುಗಿ, ಪ್ರತಿದಾಳಿ ನಡೆಸಿ, ಸೈಕಲ್ ತುಳಿಯುವಾಗ ಆತನಿಗೆ ಹೊಡೆದಿದ್ದಾಳೆ. ಇದು ಸಿಸಿಟಿವಿಯಲ್ಲಿ ತೋರಿಸಲಾಗಿದೆ. ವಿಡಿಯೋ ವೈರಲ್ ಆದ ನಂತರ, ಪ್ರದೇಶದ ನಿವಾಸಿಗಳು ಆರೋಪಿಯನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಆಕ್ರೋಶದ ನಂತರ, ಪೊಲೀಸರು ನಂತರ ಇಬ್ರಾಹಿಂ ಎಂದು ಗುರುತಿಸಲಾದ ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತಾದ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ಆರೋಪಿ ಪತ್ತೆಗೆ 25 ಸಾವಿರ ರೂ ಬಹುಮಾನ ಕೂಡ ಘೋಷಿಸಿದ್ದಾರೆ ಎಂದು ಹೇಳಲಾಗಿದೆ.