ಜಮ್ಮು: ದೇಶ ವಿರೋಧಿ ಚಟುವಟಿಕೆಗೆ ಪ್ರೋತ್ಸಾಹ ಆರೋಪದ ಮೇಲೆ ಜಮ್ಮು ಮತ್ತು ಕಾಶ್ಮೀರ ಪೊಲೀಸರ ತನಿಖಾ ತಂಡ ಗುರುವಾರ ಜಮ್ಮುವಿನ ಕಾಶ್ಮೀರ್ ಟೈಮ್ಸ್ ಕಚೇರಿಯ ಮೇಲೆ ದಾಳಿ ನಡೆಸಿದ್ದು, AK ರೈಫಲ್ ಕಾರ್ಟ್ರಿಡ್ಜ್‌ಗಳು, ಕೆಲವು ಮದ್ದು ಗುಂಡುಗಳು ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದೆ.
ಪಬ್ಲಿಕೇಷನ್ ಹಾಗೂ ಅದರ ಪ್ರವರ್ತಕರ ವಿರುದ್ಧ ಕೇಸ್ ದಾಖಲಿಸಿದ ನಂತರ ನ್ಯೂಸ್ ಪೇಪರ್ ಆವರಣದಲ್ಲಿ ರಾಜ್ಯ ತನಿಖಾ ಏಜೆನ್ಸಿ ಶೋಧ ಕಾರ್ಯ ನಡೆಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಶೋಧ ಕಾರ್ಯದ ವೇಳೆ ಎಕೆ ರೈಫಲ್‌ಗಳ ಕಾರ್ಟ್ರಿಡ್ಜ್‌ಗಳು, ಕೆಲವು ಮದ್ದು ಗುಂಡುಗಳು, ಹ್ಯಾಂಡ್ ಗ್ರೆನೇಡ್ ಪಿನ್‌ಗಳು ಮತ್ತಿತರ ವಸ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ.ಪಬ್ಲಿಷರ್ ಮತ್ತು ಪ್ರವರ್ತಕರನ್ನು ಪ್ರಶ್ನಿಸುವ ಸಾಧ್ಯತೆಯಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ದಾಳಿ ಕುರಿತು ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಸುರಿಂದರ್ ಸಿಂಗ್ ಚೌಧರಿ, ಒತ್ತಡ ಅಲ್ಲ. ತಪ್ಪು ನಡೆದಿರುವುದು ಸಾಬೀತಾದ ಸಂದರ್ಭದಲ್ಲಿ ಮಾತ್ರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
"ಅವರು ಏನಾದರೂ ತಪ್ಪು ಮಾಡಿದ್ದರೆ, ಕ್ರಮ ತೆಗೆದುಕೊಳ್ಳಬೇಕು. ಒಂದು ವೇಳೆ ಅದು ಬಲವಂತದಿಂದ ಮಾಡಿದ್ರೆ ಅದು ತಪ್ಪಾಗುತ್ತಿದೆ ಎಂದು ಚೌಧರಿ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.