ಸಂವಿಧಾನ  
ದೇಶ

76th Constitution Day: ಭಾರತದ ಸಂವಿಧಾನ ಅಂಗೀಕಾರ ದಿನ, 9 ಭಾಷೆಗಳಲ್ಲಿ ಬಿಡುಗಡೆ

ಭಾರತವು ಸಂವಿಧಾನ ದಿನವನ್ನು ಇಂದು ಆಚರಿಸಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹಳೆಯ ಸಂಸತ್ತಿನ ಕಟ್ಟಡದ ಐತಿಹಾಸಿಕ ಸೆಂಟ್ರಲ್ ಹಾಲ್‌ನಲ್ಲಿ ಆಚರಣೆಗಳ ನೇತೃತ್ವ ವಹಿಸಿದ್ದರು.

ಇಂದು ನವೆಂಬರ್ 26, ಭಾರತೀಯ ಸಂವಿಧಾನದ ಅಂಗೀಕಾರದ 76 ನೇ ವಾರ್ಷಿಕೋತ್ಸವವನ್ನು ಸಂವಿಧಾನ್ ದಿವಸ್ ಎಂದೂ ಕರೆಯುತ್ತಾರೆ.

ಭಾರತವು ಸಂವಿಧಾನ ದಿನವನ್ನು ಇಂದು ಆಚರಿಸಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹಳೆಯ ಸಂಸತ್ತಿನ ಕಟ್ಟಡದ ಐತಿಹಾಸಿಕ ಸೆಂಟ್ರಲ್ ಹಾಲ್‌ನಲ್ಲಿ ಆಚರಣೆಗಳ ನೇತೃತ್ವ ವಹಿಸಿದ್ದರು. ಕಾರ್ಯಕ್ರಮದಲ್ಲಿ ನವೆಂಬರ್ 26, 1949 ರಂದು ಸಂವಿಧಾನದ ಅಂಗೀಕಾರಕ್ಕೆ ಗೌರವ ಸಲ್ಲಿಸಲಾಯಿತು. ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮೂಲ ಮೌಲ್ಯಗಳನ್ನು ಎತ್ತಿ ತೋರಿಸಿತು.

ಈ ದಿನದ ಸ್ಮರಣಾರ್ಥ ಸಂವಿಧಾನ ದಾಖಲೆಯನ್ನು ಮೊದಲ ಬಾರಿಗೆ ಬೋಡೋ ಮತ್ತು ಕಾಶ್ಮೀರಿ ಸೇರಿದಂತೆ ಒಂಬತ್ತು ಭಾಷೆಗಳಲ್ಲಿ ಇಂದು ರಾಷ್ಟ್ರಪತಿ ದ್ರೌಪದಿ ಮರ್ಮುು ಬಿಡುಗಡೆ ಮಾಡಿದರು.

ಇಂದು ನಡೆದ ಕಾರ್ಯಕ್ರಮದಲ್ಲಿ ಕಲಾವಿದ ನಂದಿಲಾಲ್ ಬೋಸ್ ಮತ್ತು ಅವರ ತಂಡದಿಂದ 'ಭಾರತೀಯ ಸಂವಿಧಾನದಲ್ಲಿ ಕಲೆ ಮತ್ತು ಕ್ಯಾಲಿಗ್ರಫಿ' ಕುರಿತು ಪ್ರದರ್ಶನವನ್ನು ಅನಾವರಣಗೊಳಿಸಲಾಯಿತು.

ಮೊದಲ ಬಾರಿಗೆ ಬೋಡೋ ಮತ್ತು ಕಾಶ್ಮೀರಿ ಭಾಷೆಗಳನ್ನು ಸಂವಿಧಾನದಲ್ಲಿ ಅಳವಡಿಸಲಾಗುತ್ತಿದೆ ಎಂದರು. ಮಲಯಾಳಂ, ಮರಾಠಿ, ನೇಪಾಳಿ, ಪಂಜಾಬಿ, ತೆಲುಗು, ಉರಿಯಾ ಮತ್ತು ಅಸ್ಸಾಮಿ ಭಾಷೆಗಳಲ್ಲಿ ನವೀಕರಿಸಿದ ಅನುವಾದಗಳು ಸಹ ಇಂದು ಬಿಡುಗಡೆಗೊಂಡವು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMC ಹೆಸರು, ಚಿಹ್ನೆ ಮುಟ್ಟುಗೋಲು: ಚುನಾವಣಾ ಆಯೋಗ ಆದೇಶಕ್ಕೆ ತೀವ್ರ ಆಕ್ರೋಶ; 'ಪ್ರತಿಭಟನೆಯೊಂದಿಗೆ' ಹೊಸ ಹೆಸರು, ಚಿಹ್ನೆ ಸಲ್ಲಿಸಿದ ಮಮತಾ ಬ್ಯಾನರ್ಜಿ!

TMC ಹೆಸರು, ಚಿಹ್ನೆ ಮುಟ್ಟುಗೋಲು: 'Vote chori, govt chori ಆಯ್ತು, ಈಗ ಪಾರ್ಟಿ ಚೋರಿ': ಚುನಾವಣಾ ಆಯೋಗದ ವಿರುದ್ಧ ರಾಹುಲ್ ಗಾಂಧಿ ಕಿಡಿ

ದಿಗ್ಬಂಧನ ಉಲ್ಲಂಘಿಸಿದ ಟ್ಯಾಂಕರ್‌ ಮೇಲೆ Iran ಭೀಕರ ದಾಳಿ: ಸಮುದ್ರ ಮಧ್ಯದಲ್ಲೇ ಹೊತ್ತಿ ಉರಿದ ಹಡಗು, Hormuz ಜಲಸಂಧಿಯಲ್ಲಿ ಹೆಚ್ಚಿದ ಉದ್ವಿಗ್ನತೆ..!

TMC ಪಕ್ಷದ ಹೆಸರು, ಚಿಹ್ನೆ ಫ್ರೀಜ್ ಮಾಡಿದ ಚುನಾವಣಾ ಆಯೋಗ: ಉಪಚುನಾವಣೆ ಹೊತ್ತಲ್ಲೇ ದೀದಿಗೆ ಶಾಕ್‌, ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಭಾರಿ ಸಂಚಲನ..!

ಸ್ಥಳೀಯ ಚುನಾವಣೆಗಳಿಗೆ ಕಾಂಗ್ರೆಸ್‌ ರಣತಂತ್ರ: ಜಿಲ್ಲಾಧ್ಯಕ್ಷರ ಕಾರ್ಯಕ್ಷಮತೆ ಮೇಲೆ ಹೈಕಮಾಂಡ್‌ ಕಣ್ಣು, ಬೂತ್‌ನಿಂದ ಜಿಲ್ಲಾ ಮಟ್ಟದವರೆಗೆ ಸಂಘಟನೆಗೆ ಸೂಚನೆ..!