ಮುಂಬಯಿ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ವನ್ನು ಅಪಹಾಸ್ಯ ಮಾಡುವ ಟಿ-ಶರ್ಟ್ ಧರಿಸಿದ ಫೋಟೋವನ್ನು ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಬಿಜೆಪಿ ತೀವ್ರವಾಗಿ ಪ್ರತಿಕ್ರಿಯಿಸಿದ್ದು, ಪೊಲೀಸ್ ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕಿದೆ.
ಆರ್‌ಎಸ್‌ಎಸ್ ಅಕ್ಷರದ ಮೇಲೆ ನಾಯಿ ಮೂತ್ರ ಮಾಡುತ್ತಿರುವ ಚಿತ್ರವಿದ್ದ ಟೀ-ಶರ್ಟ್ ಅನ್ನು ಕಾಮಿಡಿಯನ್ ಕುನಾಲ್ ಕಾಮ್ರಾ ಧರಿಸಿದ್ದರು. ಆರ್‌ಎಸ್‌ಎಸ್ ಎಂದು ಕೇಸರಿ ಬಣ್ಣದಲ್ಲಿರುವ ಆಂಗ್ಲದ ಅಕ್ಷರದ ಮೇಲೆ ನಾಯಿಯೊಂದು ಮೂತ್ರ ವಿಸರ್ಜನೆ ಮಾಡುವಂತಹ ಟೀ ಶರ್ಟ್ ಧರಿಸಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಅದಕ್ಕೆ ಈ ಪಟ ಕಾಮಿಡಿ ಶೋನಲ್ಲಿ ತೆಗೆದಿದ್ದಲ್ಲ ಎಂದು ಕ್ಯಾಪ್ಶನ್ ಕೊಟ್ಟುಕೊಂಡಿದ್ದಾರೆ. ಸದ್ಯ ಈ ಫೋಟೋ ದೇಶದಾದ್ಯಂತ ವೈರಲ್ ಆಗುತ್ತಿದೆ.
ಮಹಾರಾಷ್ಟ್ರ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ಚಂದ್ರಶೇಖರ್ ಬವಾಂಕುಲೆ ಅವರು ಆನ್‌ಲೈನ್‌ನಲ್ಲಿ ಆಕ್ಷೇಪಾರ್ಹ ವಿಷಯವನ್ನು ಪೋಸ್ಟ್ ಮಾಡುವವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದು ಎಚ್ಚರಿಸಿದ್ದಾರೆ.
ಆನ್‌ಲೈನ್‌ನಲ್ಲಿ ಇಂತಹ ಆಕ್ಷೇಪಾರ್ಹ ವಿಷಯಗಳನ್ನು ಪೋಸ್ಟ್ ಮಾಡುವವರ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತಾರೆʼ ಎಂದು ಬಿಜೆಪಿಯ ಹಿರಿಯ ನಾಯಕ ಚಂದ್ರಶೇಖರ್ ಬವಾಂಕುಲೆ ಎಚ್ಚರಿಸಿದ್ದಾರೆ.
ಹಿಂದೊಮ್ಮೆ ಅವರ ಕಾಮಿಡಿ ಶೋ ವೇಳೆ ಅವರು ಪ್ರಧಾನಿ ಮೋದಿ ಮತ್ತು ಏಕನಾಥ್ ಶಿಂಧೆ ಅವರನ್ನು ಗುರಿಯಾಗಿಸಿಕೊಂಡಿದ್ದರು. ಈಗ ಅವರು ನೇರವಾಗಿ ಆರ್‌ಎಸ್‌ಎಸ್ ಮೇಲೆ ದಾಳಿ ಮಾಡುವ ಧೈರ್ಯ ತೋರಿದ್ದಾರೆ. ಇದಕ್ಕೆ ಬಿಜೆಪಿ ತಕ್ಕ ಉತ್ತರ ನೀಡಬೇಕಿದೆʼ ಎಂದು ಸಚಿವ ಸಂಜಯ್ ಶಿರ್ಸಾತ್ ಹೇಳಿದರು.