ನಟಿ ಐಶ್ವರ್ಯಾ ರೈ 
ದೇಶ

ಐಶ್ವರ್ಯಾ ರೈ ಗಂಡನಿಂದ ದೂರಾದರೆ ಮತಾಂತರ ಮಾಡಿ ಮದುವೆ ಆಗುತ್ತೇನೆ: ಪಾಕಿಸ್ತಾನದ ಧಾರ್ಮಿಕ ಗುರು ಹೇಳಿಕೆ ವೈರಲ್

ನಾನು ಐಶ್ವರ್ಯಾ ರೈ ಅವರನ್ನು ಮತಾಂತರ ಮಾಡಿ ಅವರ ಹೆಸರನ್ನು ಆಯೇಷಾ ರೈ ಎಂದು ಬದಲಾಯಿಸಿಕೊಂಡು ಮದುವೆ ಆಗುತ್ತೇನೆ ಎಂದಿದ್ದಾರೆ.

ಮುಂಬಯಿ: ಐಶ್ವರ್ಯಾ ರೈ ಗಂಡನಿಂದ ದೂರವಾದರೆ ಅವರನ್ನು ಮತಾಂತರ ಮಾಡಿ ಮದುವೆ ಆಗುತ್ತೀನಿ ಎಂದು ಪಾಕಿಸ್ತಾನದ ಧಾರ್ಮಿಕ ಗುರು ಮುಫ್ತಿ ಅಬ್ದುಲ್ ಖಾವಿ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಐಶ್ವರ್ಯಾ ಮತ್ತು ಅಭಿಷೇಕ್ ನಡುವೆ ಸಮಸ್ಯೆಗಳಿವೆ ಮತ್ತು ಅವರು ಬೇರೆಯಾಗುವ ಸಾಧ್ಯತೆ ಇದೆ ಎನ್ನುವ ಮಾತುಗಳನ್ನು ನಾನು ಕೇಳಿದ್ದೇನೆ. ಒಂದು ವೇಳೆ ಅವರು ಬೇರ್ಪಟ್ಟರೆ, ಐಶ್ವರ್ಯಾ ರೈ ನನಗೆ ಮದುವೆಯ ಪ್ರಸ್ತಾಪವನ್ನು ಕಳುಹಿಸುತ್ತಾರೆ ಎಂದಿದ್ದಾರೆ.

ಮುಸ್ಲಿಮೇತರ ವ್ಯಕ್ತಿಯನ್ನು ನೀವು ಹೇಗೆ ಮದುವೆಯಾಗಬಹುದು ಎಂದು ನಿರೂಪಕರು ಕೇಳಿದಾಗ, ರಾಖಿ ಸಾವಂತ್ ಇಸ್ಲಾಂ ಸ್ವೀಕರಿಸಿ ಫಾತಿಮಾ ಆದ ಉದಾಹರಣೆಯನ್ನು ಮುಫ್ತಿ ನೀಡಿದ್ದಾರೆ. ನಾನು ಐಶ್ವರ್ಯಾ ರೈ ಅವರನ್ನು ಮತಾಂತರ ಮಾಡಿ ಅವರ ಹೆಸರನ್ನು ಆಯೇಷಾ ರೈ ಎಂದು ಬದಲಾಯಿಸಿಕೊಂಡು ಮದುವೆ ಆಗುತ್ತೇನೆ ಎಂದಿದ್ದಾರೆ.

ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್‌ ಕಳೆದ ಕೆಲ ಸಮಯದಿಂದ ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ನಲ್ಲಿದ್ದಾರೆ. ಆಗಾಗ ಅವರ ಮದುವೆ ಜೀವನದ ಬಗ್ಗೆ ನಾನಾ ರೀತಿಯ ಮಾತುಗಳು ಕೇಳಿ ಬರುತ್ತಿವೆ. ಪತಿ ಅಭಿಷೇಕ್‌ ಬಚ್ಚನ್‌ ಐಶ್ವರ್ಯಾ ರೈ ನಡುವೆ ಮನಸ್ತಾಪ ಇದೆ. ಹೀಗಾಗಿ ಇಬ್ಬರು ಅಂತರ ಕಾಯ್ದುಕೊಂಡಿದ್ದಾರೆ ಎನ್ನುವ ಮಾತುಗಳು ಕೆಲ ಸಮಯದ ಹಿಂದೆ ಬಾಲಿವುಡ್‌ ಗಲ್ಲಿಯಲ್ಲಿ ಹರಿದಾಡಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉಗ್ರರಿಗೆ ನೆರವು: ನಿಷೇಧಿತ ಜಮಾತ್-ಇ-ಇಸ್ಲಾಂಗೆ ಸಂಬಂಧಿಸಿದ ಸ್ಥಳಗಳ ಮೇಲೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ದಾಳಿ, ತೀವ್ರ ಪರಿಶೀಲನೆ

ಮೀರತ್​ ಕೊಲೆ ಪ್ರಕರಣ: ಹೆಣ್ಣು ಮಗುವಿಗೆ ರಾಧಾ ಎಂದು ಹೆಸರಿಟ್ಟ ಮುಸ್ಕಾನ್, DNA ಪರೀಕ್ಷೆಗೆ ಸೌರಭ್ ಕುಟುಂಬಸ್ಥರ ಆಗ್ರಹ

ರಾಜ್ಯದಲ್ಲಿ ಶಾಸನವಿಲ್ಲದ 'ದುಶ್ಯಾಸನ' ಆಡಳಿತ: 'ಪಾಂಚಜನ್ಯ' ಮೊಳಗಿಸಲು ಮೋದಿ ಬರ್ತಿದ್ದಾರೆ; ಸುನಿಲ್ ಕುಮಾರ್

ಬಿಜೆಪಿಗೆ ಡಿ.ಕೆ ಶಿವಕುಮಾರ್ ಅವಶ್ಯಕತೆಯಿಲ್ಲ: ಅವರನ್ನು ಕಟ್ಟಿಕೊಂಡು ನಾವು ಏನು ಮಾಡೋಣ? ವಿ. ಸೋಮಣ್ಣ

GBA ಆಯ್ತು.. ಈಗ ಗ್ರೇಟರ್ ಮೈಸೂರು ಸಿಟಿ ಕಾರ್ಪೋರೇಷನ್ ಗೆ ಸಂಪುಟ ಅನುಮೋದನೆ!

SCROLL FOR NEXT