ನವದೆಹಲಿ: ಬಡ ಕಕ್ಷಿದಾರರಿಗೆ ನ್ಯಾಯ ಒದಗಿಸುವುದು ನನ್ನ ಪ್ರಮುಖ ಆದ್ಯತೆಯಾಗಿದ್ದು, ಬೇಕಾದ್ರೆ ಅವರಿಗಾಗಿ ಮಧ್ಯರಾತ್ರಿಯವರೆಗೆ ಕೋರ್ಟ್ ನಲ್ಲಿಯೇ ಇರ್ತೀನಿ ಅಂತಾ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಶುಕ್ರವಾರ ಹೇಳಿದ್ದಾರೆ.
ಕೇಂದ್ರ ಮತ್ತಿತರರ ವಿರುದ್ಧ ತಿಲಕ್ ಸಿಂಗ್ ಡಾಂಗಿ ಎಂಬ ವ್ಯಕ್ತಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸುವಾಗ ಈ ಅಭಿಪ್ರಾಯ ವ್ಯಕ್ತಪಡಿಸಿದ CJI, ನನ್ನ ಕೋರ್ಟ್ ನಲ್ಲಿ ಯಾವುದೇ ಐಷಾರಾಮಿ ಮೊಕದ್ದಮೆಗಳಿಲ್ಲ. ಅಂತಹ ಪ್ರಕರಣಗಳನ್ನು ಶ್ರೀಮಂತ ಕಕ್ಷಿದಾರರು ಮುಂದುವರಿಸುತ್ತಾರೆ ಎಂದು ಹೇಳಿದರು.
ನಿಮಗೆ ನಿಮಗೆ ಒಂದು ವಿಷಯ ಹೇಳಲು ಬಯಸುತ್ತೇನೆ. ದುರ್ಬಲ ಜನರಿಗಾಗಿ ನಾನು ಇಲ್ಲಿದ್ದೇನೆ. ಬಡ ಕಕ್ಷಿದಾರರಿಗಾಗಿ ಇಲ್ಲಿದ್ದೇನೆ. ಬೇಕಾದ್ರೆ, ಅವರಿಗಾಗಿ ನಾನು ಮಧ್ಯರಾತ್ರಿಯವರೆಗೆ ಇಲ್ಲಿಯೇ ಕುಳಿತುಕೊಳ್ಳುತ್ತೇನೆ ಎಂದರು.
ಹರಿಯಾಣದ ಹಿಸಾರ್ ಜಿಲ್ಲೆಯ ಮಧ್ಯಮ ವರ್ಗದ ಕುಟುಂಬದಿಂದ ಬಂದಿರುವ ನ್ಯಾಯಮೂರ್ತಿ ಕಾಂತ್ ಅವರು ನವೆಂಬರ್ 24 ರಂದು ಭಾರತದ 53 ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಸುಮಾರು 15 ತಿಂಗಳುಗಳ ಕಾಲ ಸಿಜೆಐ ಆಗಿ ಅವರು ಕಾರ್ಯ ನಿರ್ವಹಿಸಲಿದ್ದು, ಫೆಬ್ರವರಿ 9, 2027 ರಂದು 65 ವರ್ಷ ವಯಸ್ಸನ್ನು ತಲುಪಿದ ನಂತರ ಅಧಿಕಾರದಿಂದ ನಿವೃತ್ತರಾಗುತ್ತಾರೆ.