ಶ್ರೀನಗರ: ಉಗ್ರರಿಗೆ ನೆರವು ನೀಡುತ್ತಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಕಣಿವೆಯಾದ್ಯಂತ ಸಂಘಟಿತ ದಾಳಿ ಮತ್ತು ತಪಾಸಣೆಗಳನ್ನು ಗುರುವಾರ ಆರಂಭಿಸಿದ್ದಾರೆ.
ನಿಷೇಧಿತ ಜಮಾತ್-ಇ-ಇಸ್ಲಾಂ (ಜೆಇಐ)ಗೆ ಸಂಬಂಧಿಸಿದ ಸ್ಥಳಗಳನ್ನು ಗುರಿಯಾಗಿಸಿಕೊಂಡಿರುವ ಪೊಲೀಸರು, ದಾಳಿ ನಡೆಸಿ ತೀವ್ರ ತಪಾಸಣೆ ನಡೆಸುತ್ತಿದ್ದಾರೆ ಮದರಸಾಗಳು ಮತ್ತು ಮಸೀದಿಗಳಲ್ಲಿ ಗುರುವಾರ ತಪಾಸಣೆ ನಡೆಸಿದ್ದಾರೆ.
ಶ್ರೀನಗರ, ಅನಂತನಾಗ್, ಪುಲ್ವಾಮಾ, ಶೋಪಿಯಾನ್, ಕುಲ್ಗಾಮ್, ಬುಡ್ಗಾಮ್ ಮತ್ತು ಕುಪ್ವಾರಾಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀನಗರದಾದ್ಯಂತ ಮದರಸಾಗಳು ಮತ್ತು ಮಸೀದಿಗಳಲ್ಲಿ ಇಂದು ಶೋಧ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರದ ಭದ್ರತೆ ಮತ್ತು ಸಮಗ್ರತೆಗೆ ಹಾನಿಕಾರಕವಾದ ಉಗ್ರಗಾಮಿ-ಸಂಬಂಧಿತ ಚಟುವಟಿಕೆಗಳಿಗೆ" ಸಂಬಂಧಿಸಿದ ಸಾಕ್ಷ್ಯಗಳನ್ನು ಸಂಗ್ರಹಿಸಲು ನಿಷೇಧಿತ ಜಮಾತ್-ಇ-ಇಸ್ಲಾಂಗೆ ಸೇರಿದ ಮದರಸಾಗಳು ಮತ್ತು ಮಸೀದಿಗಳಲ್ಲಿ ತಪಾಸಣೆ ನಡೆಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಷ್ಟ್ರವಿರೋಧಿ ಚಟುವಟಿಕೆಗಳ ಗುಪ್ತಚರ ದಳ ಮಾಹಿತಿ ಅನ್ವಯ ಜೆಇಐ ಸದಸ್ಯರು ಮತ್ತು ಅವರ ಸಹಚರರಿಗೆ ಸಂಬಂಧಿಸಿದ ವಸತಿ ಆವರಣಗಳು ಮತ್ತು ವ್ಯಾಪಾರ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ದಾಳಿ ವೇಳೆ ಪರಿಶೀಲನೆಗಾಗಿ ಎಲೆಕ್ಟ್ರಾನಿಕ್ ಸಾಧನಗಳು, ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಶ್ರೀನಗರದಲ್ಲಿ ಚಾನ್‌ಪೋರಾದ ಉಮರ್ ಸುಲ್ತಾನ್ ಗುರು, ಪ್ರಸ್ತುತ ಮಂದಿರ ಬಾಗ್ ಬಘಾಟ್‌ನಲ್ಲಿ ವಾಸಿಸುತ್ತಿರುವ ಬುಡ್‌ಗಾಮ್‌ನ ಮೊಹಮ್ಮದ್ ಅಬ್ದುಲ್ಲಾ ವಾನಿ, ಬೆಮಿನಾದ ಗುಲಾಮ್ ಮೊಹಮ್ಮದ್ ಭಟ್, ಲಾಲ್ ಬಜಾರ್‌ನ ಮೊಹಮ್ಮದ್ ರಂಜಾನ್ ನಾಯಕ್ ಅಲಿಯಾಸ್ ಫಹೀಮ್, ಹರ್ವಾನ್‌ನ ಬಶೀರ್ ಅಹ್ಮದ್ ಲೋನ್ ಮತ್ತು ನೌಗಮ್ ಚೌಕ್‌ನ ಮಂಜೂರ್ ಅಹ್ಮದ್ ಅವರ ನಿವಾಸಗಳು ಮತ್ತು ಕಚೇರಿಗಳಲ್ಲಿ ವ್ಯಾಪಕ ಶೋಧ ನಡೆಸಿದ್ದಾರೆ.
ಸೌರಾದ ಮೊಹಮ್ಮದ್ ರಂಜಾನ್ ಲೋನ್ (ರಮ್ಜಾನಾ ಸ್ಮಾರಕ ಶಿಕ್ಷಣ ಸಂಸ್ಥೆ), ಬುಚ್‌ಪೋರಾ ಸೌರಾದ ಶಾಹಿದ್ ಜಹಗೀರ್ (ರಮ್ಜಾನಾ ಸ್ಮಾರಕ ಶಾಲೆ) ಮತ್ತು ನೌಗಮ್‌ನ ಪೀರ್ ಗಿಯಾಸ್ ಉದ್ ದಿನ್ (ಫಲಾಹ್ ಸಂಶೋಧನಾ ರಂಜಾನ್ ಕೇಂದ್ರ) ಅವರ ನಿವಾಸಗಳು ಸೇರಿದಂತೆ ಜೆಇಐ-ಸಂಬಂಧಿತ ಸಂಸ್ಥೆ, ಸ್ಥಳಗಳಲ್ಲಿಯೂ ಶೋಧ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಾಲ್ ಬಜಾರ್‌ನ ಕಾಶ್ಮೀರ ವಿಶ್ವವಿದ್ಯಾಲಯದ ಜಮಿಯತ್-ಉಲ್-ಬನಾತ್, ಬಾಗ್-ಇ-ನಂದ್ ಸಿಂಗ್‌ನ ರಹತ್ ಮಂಜಿಲ್ (ಜೆಕೆ ಯತೀಮ್ ಖಾನಾ), ಚಟ್ಟಬಲ್, ಮೈಸುಮಾದ ಚಿನಾರ್ ಪಬ್ಲಿಕೇಶನ್ ಟ್ರಸ್ಟ್ ಮತ್ತು ಮೈಸುಮಾದ ಅಲ್-ಕೌಸರ್ ಪುಸ್ತಕ ಮಳಿಗೆ ಸೇರಿದಂತೆ ಜೆಇಐ ಸಿದ್ಧಾಂತಕ್ಕೆ ಸಂಬಂಧಿಸಿದ ಹಲವಾರು ಸಂಸ್ಥೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಇದಲ್ಲದೆ, ಕುಪ್ವಾರಾ, ಹಂದ್ವಾರದ ವಾರಿಪೋರಾದ ಜಾಮಿಯಾ ಇಸ್ಲಾಮಿಯಾ ಇನ್ಸ್ಟಿಟ್ಯೂಟ್‌ನಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುತ್ತಿರುವ ಮಾಹಿತಿಯ ಆಧಾರದ ಮೇಲೆ ಶೋಧ ನಡೆಸಲಾಗಿದೆ ಎಂದು ತಿಳಿದುಬಂದಿದ.