ಮುಂಬೈ: ಅಪರಿಚಿತರೊಂದಿಗೆ ಮಕ್ಕಳು ವಿಡಿಯೋ ಗೇಮ್ ಆಡುವುದರಿಂದಾಗುವ ಅಪಾಯದ ಕುರಿತು ನಟ ಅಕ್ಷಯ್ ಕುಮಾರ್ ಕಳವಳ ವ್ಯಕ್ತಪಡಿಸಿದ್ದಾರೆ.
"ಕೆಲವು ತಿಂಗಳ ಹಿಂದೆ ನನ್ನ ಮನೆಯಲ್ಲಿ ನಡೆದ ಒಂದು ಸಣ್ಣ ಘಟನೆಯನ್ನು ನಾನು ನಿಮ್ಮೆಲ್ಲರಿಗೂ ಹೇಳಲು ಬಯಸುತ್ತೇನೆ. ನನ್ನ ಮಗಳು ವಿಡಿಯೋ ಗೇಮ್ ಆಡುತ್ತಿದ್ದಳು, ಮತ್ತು ನೀವು ಯಾರೊಂದಿಗಾದರೂ ಆಡಬಹುದಾದ ಕೆಲವು ವಿಡಿಯೋ ಗೇಮ್‌ಗಳಿವೆ. ನೀವು ಅಪರಿಚಿತರೊಂದಿಗೆ ಆಟವಾಡುತ್ತಿದ್ದೀರಿ. ನೀವು ಆಟವಾಡುತ್ತಿರುವಾಗ, ಕೆಲವೊಮ್ಮೆ ಅಲ್ಲಿಂದ ಸಂದೇಶ ಬರುತ್ತದೆ".
"ಸಂದೇಶದಲ್ಲಿ 'ನೀವು ಗಂಡೋ ಹೆಣ್ಣೋ?' ಎಂಬ ಸಂದೇಶ ಬರುತ್ತದೆ. ನನ್ನ ಮಗಳು ತಾನು ಹೆಣ್ಣು ಎಂದು ಉತ್ತರಿಸಿದಳು. ತದನಂತರ ಆಕೆಯೊಂದಿಗೆ ಮಾತನಾಡುತ್ತಿದ್ದ ವ್ಯಕ್ತಿ, ಸಂದೇಶ ಕಳುಹಿಸಿ 'ನಿಮ್ಮ ನಗ್ನ ಚಿತ್ರಗಳನ್ನು ನನಗೆ ಕಳುಹಿಸಬಹುದೇ?' ಎಂದು ಕೇಳಿದ. ಅವಳು ಇಡೀ ಗೇಮ್ ನ್ನು ಬಂದ್ ಮಾಡಿದಳು, ಅವಳು ಹೋಗಿ ನನ್ನ ಹೆಂಡತಿಗೆ ಹೇಳಿದಳು. ಕೆಲವು ವಿಷಯಗಳು ಹೀಗೆಯೇ ಪ್ರಾರಂಭವಾಗುತ್ತವೆ. ಇದು ಸೈಬರ್ ಅಪರಾಧದ ಒಂದು ಭಾಗವೂ ಆಗಿದೆ" ಎಂದು ಅಕ್ಷಯ್ ಕುಮಾರ್ ಕಳವಳ ವ್ಯಕ್ತಪಡಿಸಿದ್ದಾರೆ.
"ನಮ್ಮ ಮಹಾರಾಷ್ಟ್ರ ರಾಜ್ಯದಲ್ಲಿ, ಏಳನೇ, ಎಂಟನೇ, ಒಂಬತ್ತನೇ ಮತ್ತು ಹತ್ತನೇ ತರಗತಿಗಳಲ್ಲಿ ಪ್ರತಿ ವಾರ, ಸೈಬರ್ ಅವಧಿ ಎಂಬ ಅವಧಿ ಇರಬೇಕು, ಅಲ್ಲಿ ಮಕ್ಕಳಿಗೆ ಅದರ ಬಗ್ಗೆ ವಿವರಿಸಬೇಕು ಎಂದು ನಾನು ಮುಖ್ಯಮಂತ್ರಿಯನ್ನು ವಿನಂತಿಸುತ್ತೇನೆ. ಈ ಅಪರಾಧ ಬೀದಿ ಅಪರಾಧಕ್ಕಿಂತ ದೊಡ್ಡದಾಗುತ್ತಿದೆ ಎಂದು ನಿಮಗೆಲ್ಲರಿಗೂ ತಿಳಿದಿದೆ. ಈ ಅಪರಾಧವನ್ನು ನಿಲ್ಲಿಸುವುದು ಬಹಳ ಮುಖ್ಯ." ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.